ಮಂಗಳವಾರ, ಮೇ 11, 2021
24 °C

ಉತ್ತರಭಾರತದಲ್ಲಿ ಮುಂದುವರೆದ ಮಳೆ, ಸಾವಿನ ಸಂಖ್ಯೆ 73ಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಉತ್ತರ ಭಾರತದಲ್ಲಿ ಕುಂಭದ್ರೋಣ ಮಳೆ ಮಂಗಳವಾರವೂ ಮುಂದುವರೆದಿದ್ದು, ಮೃತರ ಸಂಖ್ಯೆ 73ಕ್ಕೆ ಏರಿದೆ. ಇನ್ನೂ 71,440 ಯಾತ್ರಾರ್ಥಿಗಳು ಅಪಾಯದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.ಹಿಮಾಚಲಪ್ರದೇಶದ ಸಾಂಗ್ಲಾ ಕಣಿವೆಯ ರಸ್ತೆಯ ಮಧ್ಯೆ ಸಿಕ್ಕಿಹಾಕಿಕೊಂಡಿದ್ದ ಮುಖ್ಯಮಂತ್ರಿ ವೀರಭದ್ರಸಿಂಗ್ ಅವರನ್ನು ಹೆಲಿಕಾಪ್ಟರ್ ಸಹಾಯದಿಂದ ರಕ್ಷಿಸಲಾಗಿದೆ. ಇವರೊಂದಿಗೆ 15 ಮಂದಿ ಪ್ರವಾಸಿಗರನ್ನೂ ರಕ್ಷಿಸಲಾಗಿದೆ. ಕಣಿವೆಯಾದ್ಯಂತ ಭಾರಿ ಮಳೆಯಿಂದ ಭೂಕುಸಿತಗಳು ಸತತವಾಗಿ ಸಂಭವಿಸುತ್ತಲೇ ಇದ್ದು ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಸ್ತಬ್ದಗೊಂಡಿದೆ. ಸತತ ನಾಲ್ಕನೇ ದಿನವೂ ಉತ್ತರಾಖಂಡ ಹಾಗೂ ಉತ್ತರಪ್ರದೇಶಗಳಲ್ಲಿ ಭಾರಿ ಮಳೆ ಬೀಳುತ್ತಿದೆ.ಇನ್ನೂ 71,440 ಯಾತ್ರಾರ್ಥಿಗಳು ಹಿಮಾಚಲಪ್ರದೇಶ ಹಾಗೂ ಉತ್ತರಾಖಂಡಗಳಲ್ಲಿ ಸಿಲುಕಿಕೊಂಡಿದ್ದಾರೆ. ಚಮೋಲಿಯಲ್ಲಿ 27,040 ಮಂದಿ, ರುದ್ರಪ್ರಯಾಗದಲ್ಲಿ 25,000 ಮಂದಿ, ಉತ್ತರಾಕ್ಷಿಯಲ್ಲಿ 9,850 ಮಂದಿ ಸಿಲುಕಿದ್ದಾರೆ. ಇವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ. ಆದರೆ ರಕ್ಷಣಾ ಕಾರ್ಯಕ್ಕೆ ನದಿಗಳಲ್ಲಿ ಉಂಟಾಗಿರುವ ಪ್ರವಾಹ, ಭಾರಿ ಮಳೆ ಹಾಗೂ ಭೂಕುಸಿತಗಳು ತಡೆಯೊಡ್ಡಿವೆ.ಪವಿತ್ರ ಯಾತ್ರಾ ಸ್ಥಳ ರುದ್ರಪ್ರಯಾಗವಂತೂ ಅಕ್ಷರಶಃ ಮಳೆಗೆ ನಲುಗಿಹೋಗಿದೆ. ಇಲ್ಲಿ 73 ಕಟ್ಟಡಗಳು, 40 ಹೊಟೇಲ್‌ಗಳು ಕೊಚ್ಚಿಕೊಂಡು ಹೋಗಿವೆ.ಯಮುನಾ, ಗಂಗಾ, ಭಾಗೀರಥಿ ಹಾಗೂ ಇವುಗಳ ಉಪನದಿಗಳು ತುಂಬಿ ಹರಿಯುತ್ತಿದ್ದು, ಪ್ರವಾಹ ಸ್ಥಿತಿ ಉಲ್ಬಣಿಸಿದೆ. ಇನ್ನಷ್ಟು ಭಾರಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ನಚ್ಚರಿಕೆ ನೀಡಿದೆ.ಈ ಮಧ್ಯೆ ಪಶ್ಚಿಮಬಂಗಾಳದಿಂದ ಹೊರಟ 1700 ಮಂದಿ ಯಾತ್ರಾರ್ಥಿಗಳ ರಕ್ಷಣೆಯ ಸಲುವಾಗಿ ಕ್ರಮ ತ್ಪರಿತ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಸಂಪುಟದ ಇಬ್ಬರು ಸಚಿವರನ್ನು ಉತ್ತರಾಖಂಡಕ್ಕೆ ಕಳುಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.