ಭಾನುವಾರ, ಆಗಸ್ಟ್ 1, 2021
21 °C

ಉತ್ತರಾಖಂಡ ದುರಂತ: ರೂ.10 ಲಕ್ಷ ನೆರವು ನೀಡಿದ ಹಾಕಿ ಇಂಡಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಹಾಕಿ ಇಂಡಿಯಾ ಉತ್ತರಾಖಂಡ ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿದ್ದು, ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿಯನ್ನು ಮಂಗಳವಾರ ದೇಣಿಗೆಯಾಗಿ ನೀಡಿದೆ.`ಉತ್ತರಾಖಂಡ ದುರಂತದಿಂದ ತತ್ತರಿಸಿದ ಜನತೆಯ ಬಗ್ಗೆ ನಮಗೆ ತೀವ್ರ ಅನುಕಂಪವಿದೆ. ರಾಷ್ಟ್ರೀಯ ಕ್ರೀಡಾ ಸಂಸ್ಥೆಯಾಗಿ ರಾಷ್ಟ್ರೀಯ ಪರಿಹಾರ ನಿಧಿಗೆ ದೇಣಿಗೆ ನೀಡುವುದು ನಮ್ಮ ಕರ್ತವ್ಯ ಎಂದು ಭಾವಿಸುತ್ತೇವೆ' ಎಂದು ಹಾಕಿ ಇಂಡಿಯಾ ಪ್ರಧಾನ ಕಾರ್ಯದರ್ಶಿ ನರಿಂದರ್ ಭಾತ್ರಾ ತಿಳಿಸಿದ್ದಾರೆ.`ಇದೊಂದು ಪ್ರಕೃತಿ ವಿಕೋಪ ಎದುರಿಸುತ್ತಿರುವ ರಾಜ್ಯಕ್ಕೆ ಸಹಾಯ ಮಾಡುವ ಚಿಕ್ಕ ಬಗೆಯಾಗಿದೆ. ಭವಿಷ್ಯದಲ್ಲೂ ಇಂತಹ ಪರಿಸ್ಥಿತಿಗೆ ಸ್ಪಂದಿಸಲು ಹಾಕಿ ಇಂಡಿಯಾ ಬದ್ಧವಾಗಿದೆ' ಎಂದೂ ಭಾತ್ರಾ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.