ಉತ್ತರಾಖಂಡ ಲೋಕಾಯುಕ್ತ ಮಸೂದೆ: ಅಪ್ಪಟ ಜನಲೋಕಪಾಲ್- ಅಣ್ಣಾ ತಂಡ

7

ಉತ್ತರಾಖಂಡ ಲೋಕಾಯುಕ್ತ ಮಸೂದೆ: ಅಪ್ಪಟ ಜನಲೋಕಪಾಲ್- ಅಣ್ಣಾ ತಂಡ

Published:
Updated:
ಉತ್ತರಾಖಂಡ ಲೋಕಾಯುಕ್ತ ಮಸೂದೆ: ಅಪ್ಪಟ ಜನಲೋಕಪಾಲ್- ಅಣ್ಣಾ ತಂಡ

ಘಾಜಿಯಾಬಾದ್ (ಪಿಟಿಐ): ಉತ್ತರಾಖಂಡ ವಿಧಾನಸಭೆ ಅನುಮೋದಿಸಿರುವ ಲೋಕಾಯುಕ್ತ ಮಸೂದೆಯು ನೂರಕ್ಕೆ ನೂರರಷ್ಟು ಜನಲೋಕಪಾಲ್ ಮಸೂದೆಯನ್ನು ಹೋಲುತ್ತದೆ ಎಂದಿರುವ ಅಣ್ಣಾ ತಂಡ, `ದುರ್ಬಲ~ ಕಾಯ್ದೆ ಜಾರಿಗೆ ತರುವ ಮೂಲಕ ಕೇಂದ್ರವು ಇದನ್ನು ರದ್ದು ಮಾಡಲಿದೆಯೇ ಎನ್ನುವುದನ್ನು ಗಮನಿಸುತ್ತಿರುವುದಾಗಿ ಬುಧವಾರ ಹೇಳಿದೆ.ದೇಶದಲ್ಲಿ ಭ್ರಷ್ಟಾಚಾರ ನಿಗ್ರಹಕ್ಕೆ ಲೋಕಾಯುಕ್ತ ಮಸೂದೆ ಅಂಗೀಕಾರವು ಐತಿಹಾಸಿಕ ಕ್ರಮವಾಗಿದೆ ಎಂದಿರುವ ತಂಡ, ಇದು ಜನಲೋಕಪಾಲ್ ಮಸೂದೆಗೆ ಅಡಿಪಾಯವಾಗಲಿದೆ ಎಂದು ವ್ಯಾಖ್ಯಾನಿಸಿದೆ.`ಕೇಂದ್ರವು ಲೋಕಪಾಲ್ ಮಸೂದೆಯನ್ನು ಅನುಮೋದಿಸಿದಲ್ಲಿ, ಇದು ರಾಜ್ಯಗಳಲ್ಲಿ ಲೋಕಾಯುಕ್ತವನ್ನು ರಚಿಸುವ ಅವಕಾಶವನ್ನು ಮಾಡಿಕೊಡಲಿದೆ. ಉತ್ತರಾಖಂಡ ಮಸೂದೆಗಿಂತ ದುರ್ಬಲವಾದ ಮಸೂದೆಯನ್ನು ಮಂಡಿಸಿದರೆ, ಆಗ ರಾಜ್ಯ ಕಾಯ್ದೆಯನ್ನು ರದ್ದು ಮಾಡಿದಂತೆ ಆಗುತ್ತದೆ. ಕೇಂದ್ರವು ಉತ್ತರಾಖಂಡ ಕಾಯ್ದೆಯನ್ನು ದುರ್ಬಲಗೊಳಿಸುವುದೋ ಅಥವಾ ಪ್ರಬಲಗೊಳಿಸುವುದೋ ಎನ್ನುವುದನ್ನು ನಾವು ನೋಡಬೇಕಾಗಿದೆ. ಕೇಂದ್ರ ಸರ್ಕಾರವು ಕನಿಷ್ಠಪಕ್ಷ ಉತ್ತರಾಖಂಡದ ಮಸೂದೆಗೆ ಅನುಮೋದನೆ ನೀಡಬೇಕು. ಒಂದು ವೇಳೆ ಈ ಮಸೂದೆಯನ್ನು ದುರ್ಬಲಗೊಳಿಸಿದರೆ, ಜನರು ಸರ್ಕಾರವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ~ ಎಂದು ತಂಡದ ಸದಸ್ಯ ಅರವಿಂದ್ ಕೇಜ್ರಿವಾಲ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.ಲೋಕಪಾಲ್ ವ್ಯಾಪ್ತಿಯಲ್ಲಿ ನ್ಯಾಯಾಂಗವನ್ನು ಸೇರಿಸುವುದಕ್ಕೆ ಕೇಂದ್ರ ಹಿಂಜರಿಯುತ್ತಿದೆ. ಆದರೆ ಉತ್ತರಾಖಂಡ ಮಸೂದೆಯಲ್ಲಿ ಕೆಳಹಂತದ ನ್ಯಾಯಾಂಗ ಹಾಗೂ ಆಡಳಿತ ವ್ಯವಸ್ಥೆಯನ್ನು ಸೇರಿಸಲಾಗಿದೆ. ಮುಖ್ಯಮಂತ್ರಿ, ಎಲ್ಲ ಸಚಿವರು ಹಾಗೂ ಶಾಸಕರು ಲೋಕಯುಕ್ತ ಮಸೂದೆ ವ್ಯಾಪ್ತಿಗೆ ಒಳಪಡುತ್ತಾರೆ.ಆದರೆ ಜನಲೋಕಪಾಲ್ ಮಸೂದೆ ವ್ಯಾಪ್ತಿಗೆ ಇವರನ್ನೆಲ್ಲ ಒಳಪಡಿಸಲು ಕೇಂದ್ರ ಹಿಂದೇಟು ಹಾಕುತ್ತಿದೆ ಎಂದು ತಂಡ ಆರೋಪಿಸಿದೆ. ಕ್ರಾಂತಿಕಾರಿ ಹೆಜ್ಜೆ: ಉತ್ತರಾಖಂಡ ವಿಧಾನಸಭೆ ಅವಿರೋಧವಾಗಿ ಲೋಕಾಯುಕ್ತ ಮಸೂದೆಯನ್ನು ಅಂಗೀಕರಿಸಿರುವುದು ಆಡಳಿತ ವ್ಯವಸ್ಥೆಯಲ್ಲಿನ `ಕ್ರಾಂತಿಕಾರಿ ಹೆಜ್ಜೆ~. ಭ್ರಷ್ಟಾಚಾರ ತಡೆಯಲು ಇದು ಇತರ ರಾಜ್ಯಗಳಿಗೂ ಮಾದರಿಯಾಗಲಿದೆ ಎಂದು ತಂಡದ ಸದಸ್ಯೆ ಕಿರಣ್ ಬೇಡಿ ಹೇಳಿದ್ದಾರೆ.ಉತ್ತರಾಖಂಡದಲ್ಲಿ ಲೋಕಾಯುಕ್ತ ಮಸೂದೆಯನ್ನು ಕಾಂಗ್ರೆಸ್ ಬೆಂಬಲಿಸಿರುವುದು ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಜನಲೋಕಪಾಲ ಮಸೂದೆ ಮಂಡನೆ ಬಗ್ಗೆ ಆಶಾಭಾವನೆ ಮೂಡಿಸಿದೆ ಎಂದು ಅವರು ಹೇಳಿದ್ದಾರೆ.ಐತಿಹಾಸಿಕ ಕ್ರಮ (ಡೆಹ್ರಾಡೂನ್ ವರದಿ): ಲೋಕಾಯುಕ್ತ ಮಸೂದೆಯನ್ನು ಅನುಮೋದಿಸಿರುವುದು `ಐತಿಹಾಸಿಕ ಹಾಗೂ ದಿಟ್ಟ ಕ್ರಮ~ ಎಂದು ಬಣ್ಣಿಸಿರುವ ಬಿಜೆಪಿ, ಸಾರ್ವಜನಿಕ ಜೀವನದಲ್ಲಿ ಹೆಚ್ಚಿನ ಪಾರದರ್ಶಕತೆ ಹಾಗೂ ಉತ್ತರದಾಯಿತ್ವಕ್ಕೆ ಇದು ಹೆಜ್ಜೆಯಾಗಲಿದೆ ಎಂದಿದೆ. ಈ ಕ್ರಮಕ್ಕಾಗಿ ಬಿ.ಸಿ.ಖಂಡೂರಿ ನೇತೃತ್ವದ ರಾಜ್ಯ ಸರ್ಕಾರವನ್ನು ಅಭಿನಂದಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿಶನ್‌ಸಿಂಗ್  ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry