ಉತ್ತರ ಕರ್ನಾಟಕದ ಕನಸು ನನಸಾಯಿತೇ?

7

ಉತ್ತರ ಕರ್ನಾಟಕದ ಕನಸು ನನಸಾಯಿತೇ?

Published:
Updated:

ಬೆಳಗಾವಿಯಲ್ಲಿ `ಸುವರ್ಣ ಸೌಧದ~ ಉದ್ಘಾಟನೆ ಯಾದ ಮರುದಿನ ಎಲ್ಲಾ ನಾಯಕರು (ರಾಜಕೀಯ) ಉತ್ತರ ಕರ್ನಾಟಕದವರ ಕನಸು ನನಸಾಯಿತೆಂದು ಬೊಗಳೆ ಬಿಟ್ಟಿದ್ದನ್ನು ಪತ್ರಿಕೆಗಳಲ್ಲಿ ನೋಡಿದ್ದೇವೆ. ನಿಜಕ್ಕೂ ಉತ್ತರದ ಕನ್ನಡಿಗರು ಈ ಭವ್ಯ ಸುವರ್ಣ ಸೌಧದ ಕನಸು ಕಂಡಿದ್ದರೆ? ಇಲ್ಲ. ಅವರು ಕಂಡಿದ್ದು ಪ್ರವಾಹದಲ್ಲಿ ಕೊಚ್ಚಿ ಹೋದ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಕನಸು.

 

2009ರಲ್ಲಿ ಬಂದ ಪ್ರವಾಹದಿಂದ ಮನೆ - ಮಠಗಳನ್ನು ಕಳೆದುಕೊಂಡು ಸಂತ್ರಸ್ತರಾದ ಜನರ ಬದುಕನ್ನು ಕಟ್ಟದ ಸರ್ಕಾರ `ಸುವರ್ಣ ಸೌಧ~ ಕಟ್ಟಿದ್ದು ಯಾವ ಪುರುಷಾರ್ಥಕ್ಕೆ?  400 ಕೋಟಿ ರೂಪಾಯಿ ಕಟ್ಟಡಕ್ಕೆ ಮತ್ತು ಅದರ ಉದ್ಘಾಟನೆ ಸಮಾರಂಭಕ್ಕೆಂದು 16 ಕೋಟಿ ರೂಪಾಯಿ ಖರ್ಚು ಮಾಡುವ ಔಚಿತ್ಯವಾದರೂ ಏನಿತ್ತು? ಅದೇ 400 ಕೋಟಿ ರೂಪಾಯಿಯಲ್ಲಿ 40000 ಮನೆಗಳನ್ನು ಸಂತ್ರಸ್ತರಿಗೆ ನಿರ್ಮಿಸಬಹುದಿತ್ತು.  

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry