ಉತ್ತರ ಕರ್ನಾಟಕ ತಾರತಮ್ಯವಿಲ್ಲ: ಆರ್.ಅಶೋಕ

7

ಉತ್ತರ ಕರ್ನಾಟಕ ತಾರತಮ್ಯವಿಲ್ಲ: ಆರ್.ಅಶೋಕ

Published:
Updated:

ಶಹಾಪುರ: ರಾಜ್ಯದ ಅಭಿವೃದ್ದಿಯಲ್ಲಿ ಪ್ರಾಂತವಾರು ಬೇಧಭಾವವಿಲ್ಲ. ಉತ್ತರ ಕರ್ನಾಟಕ ಮತ್ತು ಹಳೆ ಮೈಸೂರು ಎಂಬ ಯಾವುದೇ ತಾರತಮ್ಯವಿಲ್ಲ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಸಮಾನವಾಗಿ ಸರ್ಕಾರ ಜನಪರ ಅಭಿವೃದ್ದಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಆರ್.ಅಶೋಕ ಹೇಳಿದರು.ಪಟ್ಟಣದಲ್ಲಿ ಬುಧವಾರ ತಡರಾತ್ರಿ 3.99ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಬಸ ನಿಲ್ದಾಣದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.ಈಶಾನ್ಯ ಸಾರಿಗೆ ಸಂಸ್ಥೆಯು 380ಕೋಟಿ ನಷ್ಟವನ್ನು ಅನುಭವಿಸುತ್ತಿದೆ. ಮುಂದಿನ ದಿನಗಳಲ್ಲಿ ನಷ್ಟವನ್ನು ಭರಿಸುವ ಬಗ್ಗೆ ಮಾರ್ಗೋಪಾಯಗಳನ್ನು ಕಂಡು ಹಿಡಿಯಲಾಗುವುದು. ಅಲ್ಲದೆ ಸಿಬ್ಬಂದಿ ಕೊರತೆಯೂ ಕಾಡುತ್ತಲಿದೆ. 1400 ಚಾಲಕ, ನಿರ್ವಾಹಕ ಸೇರಿಂದಂತೆ ಇನ್ನಿತರ ಸಿಬ್ಬಂದಿಯನ್ನು ನೇಮಕ ಕಾರ್ಯಕ್ಕೆ ಚಾಲನೆ ನೀಡಲಾಗುವುದೆಂದು ಅವರು ವಿವರಿಸಿದರು.ಈಶಾನ್ಯ ಸಾರಿಗೆ ವ್ಯಾಪ್ತಿಯಲ್ಲಿ ಬಸಗಳ ಕೊರತೆಯಿದೆ. 385 ಹೊಸ ಬಸ್‌ಗಳನ್ನು ಖರೀದಿಸಲು ಅಗತ್ಯವಾದ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಹಿಂದೆ ಬಸ್ ನಿಲ್ದಾಣವೆಂದರೆ ಗದ್ದಲು ಹಾಗೂ ಕೊಳಕು ತುಂಬಿದನ್ನು ಕಣ್ಣಿಗೆ ಕಾಣುತ್ತಿತ್ತು. ಈಗ 114 ಎಲ್ಲವು ಹೈಟೆಕ್ ಮಾದರಿಯಲ್ಲಿ ನಿಲ್ದಾಣವನ್ನು ನಿರ್ಮಿಸಲಾಗಿದೆ. ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಆಸನಗಳ ವ್ಯವಸ್ಥೆ ವಿಶಾಲವಾದ ಜಾಗ, ಸ್ವಚ್ಛತೆ ಹಾಗೂ ಸುರಕ್ಷತೆಯ ಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಅವರು ಹೇಳಿದರು.ಬಸ್‌ಗಳಲ್ಲಿ ಅಮೃತವಾಣಿಯ ಸ್ಟಿಕರ್‌ಗಳನ್ನು ಅಂಟಿಸಿ ಕನ್ನಡಮಯವನ್ನಾಗಿ ರೂಪಿಸಲಾಗಿದೆ. ಆದರ್ಶ ಪುರುಷರ ಹಿತನುಡಿಗಳು ಮನಸ್ಸಿಗೆ ಒಂದಿಷ್ಟು ಚಿಂತನೆಗೆ ಹಚ್ಚುತ್ತವೆ. ಅಲ್ಲದೆ ನಿಲ್ದಾಣದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದಿಗ್ಗಜರ ಭಾವಚಿತ್ರಗಳನ್ನು ಹಾಕಿ ಅವರ ಸೇವೆಯನ್ನು ಸ್ಮರಿಸಲಾಗುತ್ತದೆ ಎಂದು ಅವರು ತಿಳಿಸಿದರು.ಯಾವುದೇ ಉತ್ತಮ ಕೆಲಸ ನಿರ್ವಹಿಸಬೇಕಾದರೆ ಅದರ ಹಿಂದೆ ಹೆಚ್ಚಿನ ಶ್ರಮವಿರುತ್ತದೆ. ಸುಸಜ್ಜಿತ ಬಸ್ ನಿಲ್ದಾಣ ಕಾಮಗಾರಿಗಾಗಿ ಹೆಚ್ಚಿನ ಮುತುವರ್ಜಿವಹಿಸಿ ಪ್ರಯಾಣಿಕರ ಅನುಕೂಲಕ್ಕಾಗಿ ಹೈಟಕ್ ನಿಲ್ದಾಣವನ್ನು ನಿರ್ಮಿಸಲಾಗಿದೆ ಅದರ ಸ್ವಚ್ಛತೆ ಹಾಗೂ ಸುರಕ್ಷತೆಯ ಬಗ್ಗೆ ಸಿಬ್ಬಂದಿ ಸೇರಿದಂತೆ ಪ್ರಯಾಣಿಕರು ಗಮನಿಸಬೇಕೆಂದು ಸಭೆ ಅಧ್ಯಕ್ಷತೆಯವಹಿಸಿದ್ದ ಶಾಸಕ ಶರಣಬಸಪ್ಪ ದರ್ಶನಾಪೂರ ಹೇಳಿದರು.ವೇದಕೆಯ ಮೇಲೆ ಜಿಲ್ಲಾ ಉಸ್ತುವಾರಿ ಸಚಿವ ರಾಜುಗೌಡ ನಾಯಕ,  ವಿಧಾನ ಪರಿಷತ್ ಸದಸ್ಯರಾದ ಅಮರನಾಥ ಪಾಟೀಲ್, ಅಲ್ಲಂಪ್ರಭು ಪಾಟೀಲ್, ಕೃಷ್ಣಾಕಾಡಾದ ಅಧ್ಯಕ್ಷ ಬಿ.ಪಿ.ಹಳ್ಳೂರ, ತೊಗರಿ ಮಂಡಳಿ ಅಧ್ಯಕ್ಷ ವೆಂಕಟೇಶ ಗಡ್ಡಿಮನಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮರೆಮ್ಮ ಶಾಣ್ಯಾನೋರ, ಪುರಸಭೆ ಅಧ್ಯಕ್ಷ ಸಣ್ಣ ನಿಂಗಪ್ಪ ನಾಯ್ಕೋಡಿ, ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ ಮರಕಲ್, ಸಾರಿಗೆ ಅಧಿಕಾರಿಯಾದ ಜಿ.ಎನ್.ಶಿವಮೂರ್ತಿ, ಸಂತೋಷ ಕುಮಾರ, ತಿಮ್ಮಾರಡ್ಡಿ, ಬೋರಯ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry