ಶುಕ್ರವಾರ, ನವೆಂಬರ್ 15, 2019
23 °C

ಉತ್ತರ ಕೊರಿಯಾ ಅಣ್ವಸ್ತ್ರ ಕ್ಷಿಪಣಿ ಬಳಸುವ ಸಾಧ್ಯತೆ!

Published:
Updated:

ವಾಷಿಂಗ್ಟನ್ / ಸಿಯಾಲ್ (ರಾಯಿಟರ್ಸ್‌):  ಅಂತರರಾಷ್ಟ್ರೀಯ ಸಮುದಾಯದ ಎಚ್ಚರಿಕೆ ನಡುವೆಯು ಉತ್ತರ ಕೊರಿಯಾ ಅಣ್ವಸ್ತ್ರ ಕ್ಷಿಪಣಿಗಳ ಪರೀಕ್ಷೆಯನ್ನು ನಡೆಸುತ್ತಲೇ ಬಂದಿದ್ದು, ಸಮರದಲ್ಲಿ ಅಣ್ವಸ್ತ್ರ ಕ್ಷಿಪಣಿಯನ್ನು ಬಳಸುವ ಸಾಧ್ಯತೆ ಇದೆ ಎಂದು ಅಮೆರಿಕಾದ ಗುಪ್ತಚರ ದಳ ಸಂಸ್ಥೆ ತಿಳಿಸಿದೆ.

ಉತ್ತರ ಕೊರಿಯಾ ಬಳಸುವ ಬಹುತೇಕ ಅಣ್ವಸ್ತ್ರ ಖಂಡಾಂತರ ಕ್ಷಿಪಣಿಗಳು ನಂಬಲರ್ಹವಾಗಿಲ್ಲ. ಅವು ಸಾಧಾರಣ ಎನ್ನಬಹುದಾದ ಸಾಮರ್ಥ್ಯವನ್ನು ಹೊಂದಿರುವಂತೆ ಕಾಣುತ್ತಿವೆ ಎಂದು ಗುಪ್ತಚರ ದಳದ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಉತ್ತರ ಕೊರಿಯಾದ ಅಣ್ವಸ್ತ್ರಗಳ ನಿಖರತೆ ಮತ್ತು ಸ್ಪಷ್ಟತೆ ಬಗ್ಗೆ ಸಂದೇಹವಿದ್ದು, ಅವುಗಳು ಕರಾರುವಕ್ಕಾಗಿಲ್ಲ ಎಂದು ಪೆಂಟಗನ್ ವಕ್ತಾರರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)