ಉತ್ತರ ಪ್ರದೇಶಕ್ಕೆ ಆಘಾತ; ಸೆಮಿಫೈನಲ್‌ಗೆ ಸರ್ವಿಸಸ್

7
ರಣಜಿ: ಮುನ್ನಡೆಯತ್ತ ಮುಂಬೈ ತಂಡ

ಉತ್ತರ ಪ್ರದೇಶಕ್ಕೆ ಆಘಾತ; ಸೆಮಿಫೈನಲ್‌ಗೆ ಸರ್ವಿಸಸ್

Published:
Updated:
ಉತ್ತರ ಪ್ರದೇಶಕ್ಕೆ ಆಘಾತ; ಸೆಮಿಫೈನಲ್‌ಗೆ ಸರ್ವಿಸಸ್

ಇಂದೋರ್: ಈ ಬಾರಿಯ ರಣಜಿ ಟ್ರೋಫಿ  ಕ್ರಿಕೆಟ್ ಟೂರ್ನಿಯ ಲೀಗ್ ಹಂತದಲ್ಲಿ ಅಮೋಘ ಪ್ರದರ್ಶನ ತೋರಿದ್ದ ಉತ್ತರ ಪ್ರದೇಶ ತಂಡದವರು ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಹೊರಬಿದ್ದಿದ್ದಾರೆ. ಈ ಅಚ್ಚರಿ ಆಘಾತಕ್ಕೆ ಕಾರಣವಾಗಿದ್ದು ಸರ್ವಿಸಸ್.ಹೋಳ್ಕರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೂರೇ ದಿನದಲ್ಲಿ ಕೊನೆಗೊಂಡ ಈ ಪಂದ್ಯದಲ್ಲಿ 5 ವಿಕೆಟ್‌ಗಳ ಗೆಲುವು ಸಾಧಿಸಿದ ಸರ್ವಿಸಸ್ ಸೆಮಿಫೈನಲ್ ಪ್ರವೇಶಿಸಿದೆ. ಪಂದ್ಯದ ಮೂರನೇ ದಿನ ಉತ್ತರ ಪ್ರದೇಶ ನೀಡಿದ 113 ರನ್‌ಗಳ ಅಲ್ಪ ಗುರಿಯನ್ನು ಸರ್ವಿಸಸ್ ಮಂಗಳವಾರ ತನ್ನ ಎರಡನೇ ಇನಿಂಗ್ಸ್‌ನಲ್ಲಿ 27.3 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ತಲುಪಿತು.ಕಾಲು ನೋವಿಗೆ ಒಳಗಾಗಿದ್ದರೂ ಉತ್ತಮ ಪ್ರದರ್ಶನ ತೋರಿದ ಸರ್ವಿಸಸ್ ತಂಡದ ನಾಯಕ ಸೌಮಿಕ್ ಚಟರ್ಜಿ 34 ರನ್ ಗಳಿಸಿ ಜಯಕ್ಕೆ ಕಾರಣರಾದರು. `ಸಿ' ಗುಂಪಿನಲ್ಲಿದ್ದ ಈ ತಂಡದವರು ಕ್ವಾರ್ಟರ್ ಫೈನಲ್‌ಗೆ ಬಡ್ತಿ ಪಡೆದಿದ್ದರು. 1967-68ರ ಬಳಿಕ ಸರ್ವಿಸಸ್ ಈ ಸಾಧನೆ ಮಾಡಿದೆ.ಕುಸಿದ ಬರೋಡ: ಮುಂಬೈ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬರೋಡ ಕುಸಿತದ ಹಾದಿ ಹಿಡಿದಿದೆ. ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮುಂಬೈನ 645 ರನ್‌ಗಳ ಬೃಹತ್ ಮೊತ್ತಕ್ಕೆ ಉತ್ತರವಾಗಿ ಬರೋಡ ಮೊದಲ ಇನಿಂಗ್ಸ್‌ನಲ್ಲಿ ಮೂರನೇ ದಿನದಾಟದ ಅಂತ್ಯಕ್ಕೆ 64 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿದೆ.ಸವಾಲಿನ ಮೊತ್ತ: ಜಮ್ಶೆಡ್‌ಪುರದಲ್ಲಿ ನಡೆಯುತ್ತಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಜಾರ್ಖಂಡ್ ಸವಾಲಿನ ಮೊತ್ತ ಪೇರಿಸಿದೆ. ಆದರೆ ಪಂಜಾಬ್ ದಿಟ್ಟ ತಿರುಗೇಟು ನೀಡುವ ಹಂತದಲ್ಲಿದೆ.ಸಂಕ್ಷಿಪ್ತ ಸ್ಕೋರ್: ಉತ್ತರ ಪ್ರದೇಶ ಮೊದಲ ಇನಿಂಗ್ಸ್: 38.4 ಓವರ್‌ಗಳಲ್ಲಿ 134 ಹಾಗೂ 78 ಓವರ್‌ಗಳಲ್ಲಿ 241 (ತನ್ಮಯ ಶ್ರೀವಾಸ್ತವ 54, ಮೊಹಮ್ಮದ್ ಕೈಫ್ 33, ಆರಿಶ್ ಆಲಾಂ 50, ಇಮ್ತಿಯಾಜ್ ಅಹ್ಮದ್ ಔಟಾಗದೆ 40; ಸೂರಜ್ ಯಾದವ್ 71ಕ್ಕೆ7); ಸವೀಸಸ್: ಮೊದಲ ಇನಿಂಗ್ಸ್ 68 ಓವರ್‌ಗಳಲ್ಲಿ 263 ಹಾಗೂ 27.3 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 116 (ರಜತ್ ಪಾಲಿವಾಲ್ ಔಟಾಗದೆ 32, ಸೌಮಿಕ್ ಚಟರ್ಜಿ ಔಟಾಗದೆ 34; ಅಂಕಿತ್ ರಾಜ್‌ಪೂತ್ 36ಕ್ಕೆ5): ಫಲಿತಾಂಶ: ಸರ್ವಿಸಸ್‌ಗೆ 5 ವಿಕೆಟ್ ಜಯ ಹಾಗೂ ಸೆಮಿಫೈನಲ್ ಪ್ರವೇಶ.ಮುಂಬೈ: ಮೊದಲ ಇನಿಂಗ್ಸ್ 204 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 645 ಡಿಕ್ಲೇರ್ಡ್ (ಅಭಿಷೇಕ್ ನಾಯರ್ 132, ಆದಿತ್ಯ ತಾರೆ 64, ಅಜಿತ್ ಅಗರ್ಕರ್ ಔಟಾಗದೆ 52, ಜಾವೇದ್ ಖಾನ್ 43; ಮುರ್ತುಜಾ ವಹೋರಾ 119ಕ್ಕೆ4); ಬರೋಡ: ಮೊದಲ ಇನಿಂಗ್ಸ್ 64 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 167 (ಸೌರಭ್ ವಾಕಾಸ್ಕರ್ 51, ಆದಿತ್ಯ ವಾಗ್ಮೋಡ್ 53; ಧವಳ್ ಕುಲಕರ್ಣಿ 41ಕ್ಕೆ2).ಜಾರ್ಖಂಡ್: ಮೊದಲ ಇನಿಂಗ್ಸ್ 149 ಓವರ್‌ಗಳಲ್ಲಿ 401 (ಇಶಾಂಕ್ ಜಗ್ಗಿ 132; ಸಿದ್ದಾರ್ಥ್ ಕೌಲ್ 78ಕ್ಕೆ4, ಸರಭಜಿತ್ ಲಡ್ಡಾ 118ಕ್ಕೆ4); ಪಂಜಾಬ್: ಮೊದಲ ಇನಿಂಗ್ಸ್ 58 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 150 (ಜೀವನ್‌ಜೋತ್ ಸಿಂಗ್ ಬ್ಯಾಟಿಂಗ್ 77).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry