ಮಂಗಳವಾರ, ಆಗಸ್ಟ್ 3, 2021
26 °C

ಉತ್ತರ ಪ್ರದೇಶದಲ್ಲಿ ಎಐಇಇಇ ಪ್ರಶ್ನೆ ಪತ್ರಿಕೆ ಸೋರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಅಖಿಲ ಭಾರತ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯ (ಎಐಇಇಇ) ಪ್ರಶ್ನೆ ಪತ್ರಿಕೆಗಳು ಉತ್ತರಪ್ರದೇಶದಲ್ಲಿ ಬಹಿರಂಗಗೊಂಡಿರುವ ಹಿನ್ನೆಲೆಯಲ್ಲಿ ಭಾನುವಾರ ಸಿಬಿಎಸ್‌ಸಿ ಕೆಲಗಂಟೆಗಳ ಕಾಲ ಪರೀಕ್ಷೆಯನ್ನು ಮುಂದೂಡುವಂತಾಯಿತು.ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ಕೂಡಲೇ ಸಿಬಿಎಸ್‌ಸಿ ಬೆಳಿಗ್ಗೆ 9.30 ಮತ್ತು  ಮಧ್ಯಾಹ್ನ  2 ಗಂಟೆಗೆ ನಿಗದಿಯಾಗಿದ್ದ ಪರೀಕ್ಷೆಗಳನ್ನು ಮುಂದೂಡಿತು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.9.30ಕ್ಕೆ ನಡೆಯಬೇಕಿದ್ದ ಮೊದಲ ಪತ್ರಿಕೆ ಪರೀಕ್ಷೆ ಮಧ್ಯಾಹ್ನ 12ಕ್ಕೆ ಮತ್ತು 2ಕ್ಕೆ ಪ್ರಾರಂಭವಾಗಬೇಕಿದ್ದ ಎರಡನೇ ಪತ್ರಿಕೆ ಪರೀಕ್ಷೆಯನ್ನು ಸಂಜೆ 7 ಗಂಟೆಗೆ ನಡೆಸಲಾಯಿತು. ಎಂದು ಹೇಳಿದರು.ಆರು ಲಕ್ಷ ಬಹುಮಾನ: ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದವರಿಗೆ ತಲಾ ಆರು ಲಕ್ಷ ರೂ ನೀಡುವುದಾಗಿ ವಿಶೇಷ ಪೊಲೀಸ್ ಮಹಾ ನಿರ್ದೇಶಕ ಬ್ರಿಜ್ ಲಾಲ್ ಘೋಷಿಸಿದ್ದಾರೆ.ದೇಶದಾದ್ಯಂತ ಸುಮಾರು 12 ಲಕ್ಷ ವಿದ್ಯಾರ್ಥಿಗಳು 80ಕ್ಕೂ ಅಧಿಕ ನಗರಗಳಲ್ಲಿನ 1,600 ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದಾರೆ. ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಮತ್ತು ಇತರ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕೆ  ಎಐಇಇಇ ಪರೀಕ್ಷೆ ನಡೆಸಲಾಗುತ್ತಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.