ಮಂಗಳವಾರ, ಜೂನ್ 15, 2021
26 °C

ಉತ್ತರ ಪ್ರದೇಶದಿಂದ ಪಾಠ ಕಲಿಯಲಿ: ಟಿಡಿಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಐಎಎನ್‌ಎಸ್): ಉತ್ತರ ಪ್ರದೇಶದ ಚುನಾವಣಾ ಫಲಿತಾಂಶ ಆಂಧ್ರ ಪ್ರದೇಶದಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯದ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರ ವಾದಕ್ಕೆ ಸಮರ್ಥನೆ ಒದಗಿಸಿದೆ.ರಾಜ್ಯವನ್ನು ವಿಭಜಿಸುವ ಮಾಯಾವತಿ ಅವರ ಪ್ರಸ್ತಾಪ ಅವರ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದ್ದು, ಆಂಧ್ರದಲ್ಲೂ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಡುತ್ತಿರುವವರು ಈ ಸೋಲಿನಿಂದ ಪಾಠ ಕಲಿಯಬೇಕು ಎಂದು ಟಿಡಿಪಿ ಹೇಳಿದೆ.`ರಾಜ್ಯ ವಿಭಜನೆಯ ಹೆಸರಿನಲ್ಲಿ ರಾಜಕೀಯ ಲಾಭ ಗಳಿಸುವ ಹುನ್ನಾರಕ್ಕೆ ಉತ್ತರ ಪ್ರದೇಶದ ಜನ ತಕ್ಕ ಪಾಠ ಕಲಿಸಿದ್ದಾರೆ. ಇದು ಆಂಧ್ರ ಪ್ರದೇಶದಲ್ಲಿಯೂ ಇಂಥ ಪ್ರಯತ್ನ ನಡೆಸುತ್ತಿರುವವರ ಕಣ್ಣು ತೆರೆಸಬೇಕು~ ಎಂದು ಟಿಡಿಪಿ ನಾಯಕ ಪಿ.ಕೇಶವ ಅಭಿಪ್ರಾಯಪಟ್ಟಿದ್ದಾರೆ.ಆದರೆ ಆಂಧ್ರ ಪ್ರದೇಶವನ್ನು ಉತ್ತರ ಪ್ರದೇಶದೊಂದಿಗೆ ಹೋಲಿಸುವ ವೈಖರಿಯನ್ನು ತೆಲಂಗಾಣ ಪರ ಕಾರ್ಯಕರ್ತರು ವಿರೋಧಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.