ಉತ್ತರ ಪ್ರದೇಶ: ಮಾಜಿ ಸಚಿವನ ಮನೆ ಮೇಲೆ ಸಿಬಿಐ ದಾಳಿ

7

ಉತ್ತರ ಪ್ರದೇಶ: ಮಾಜಿ ಸಚಿವನ ಮನೆ ಮೇಲೆ ಸಿಬಿಐ ದಾಳಿ

Published:
Updated:
ಉತ್ತರ ಪ್ರದೇಶ: ಮಾಜಿ ಸಚಿವನ ಮನೆ ಮೇಲೆ ಸಿಬಿಐ ದಾಳಿ

ನವದೆಹಲಿ (ಪಿಟಿಐ): ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ (ಎನ್‌ಆರ್‌ಎಚ್‌ಎಮ್) ಹಗರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮಾಜಿ ಆರೋಗ್ಯ ಸಚಿವ ಅನಂತ್ ಮಿಶ್ರಾ ಅವರ ಲಖನೌ ಹಾಗೂ ಕಾನ್‌ಪುರ್‌ದಲ್ಲಿನ ನಿವಾಸಗಳ ಮೇಲೆ ಶನಿವಾರ ಸಿಬಿಐ ದಾಳಿ ನಡೆಸಿತು.ದಾಳಿಯ ವೇಳೆ ಮನೆಗಳ ಶೋಧನಾ ಕಾರ್ಯ ನಡೆಸಿದ ಸಿಬಿಐ ಅಧಿಕಾರಿಗಳು ಎನ್‌ಆರ್‌ಎಚ್‌ಎಮ್ ಹಗರಣಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿತು.

 

ಹಗರಣದ ಆರೋಪಿಗಳಲ್ಲಿ ಒಬ್ಬರಾಗಿದ್ದ ಉಪ ಮುಖ್ಯ ವೈದ್ಯಕೀಯ ಅಧಿಕಾರಿ ವೈ.ಎಸ್.ಸಚನ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಎರಡು ಬಾರಿ ವಿಚಾರಣೆಗೆ ಒಳಪಡಿಸಿತ್ತು.ಎನ್‌ಆರ್‌ಎಚ್‌ಎಮ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇವರೆಗೆ 13 ದೂರುಗಳನ್ನು ದಾಖಲಿಸಿದ್ದು, ಇದೀಗ ಮೂರು ಹೊಸ ದೂರುಗಳನ್ನು ದಾಖಲಿಸುವ ಸಿದ್ಧತೆಯಲ್ಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry