ಉತ್ತರ ಪ್ರದೇಶ: ಮೂರನೇ ಹಂತದ ಮತದಾನ ಇಂದು

7

ಉತ್ತರ ಪ್ರದೇಶ: ಮೂರನೇ ಹಂತದ ಮತದಾನ ಇಂದು

Published:
Updated:

ಲಖನೌ (ಪಿಟಿಐ): ಉತ್ತರ ಪ್ರದೇಶ ವಿಧಾನ ಸಭೆಯ ಹತ್ತು ಜಿಲ್ಲೆಗಳ 56 ಸ್ಥಾನಗಳಿಗಾಗಿ ಬುಧವಾರ ನಡೆಯಲಿರುವ ಮೂರನೇ ಹಂತದ ಮತದಾನ ರಾಜ್ಯದ ಮೂವರು ಸಂಪುಟ ದರ್ಜೆ ಸಚಿವರು, ರಾಜ್ಯ ಸಚಿವರು, 29 ಹಾಲಿ ಶಾಸಕರು ಮತ್ತು 14 ಮಾಜಿ ಸಚಿವರ ಭವಿಷ್ಯವನ್ನು ನಿರ್ಧರಿಸಲಿದೆ.ಈ ಜಿಲ್ಲೆಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಲೋಕಸಭಾ ಕ್ಷೇತ್ರ ಇರುವ ಅಮೇಥಿಯೂ ಸೇರಿದೆ. 1,018 ಅಭ್ಯರ್ಥಿಗಳ ಭವಿಷ್ಯವನ್ನು 1.75 ಕೋಟಿ ಮತದಾರರು ತೀರ್ಮಾನಿಸಲಿದ್ದಾರೆ.ಸಂಪುಟ ಸಚಿವರಾದ ಇಂದ್ರಜಿತ್ ಸರೋಜ್, ನಂದಗೋಪಾಲ್ ಗುಪ್ತ ಅಲಿಯಾಸ್ ನಂದಿ, ಧರ್ಮರಾಜ್ ಮತ್ತಿತರರು ಪ್ರಮುಖ ಅಭ್ಯರ್ಥಿಗಳ ಪಟ್ಟಿಯಲ್ಲಿ  ಸೇರಿದ್ದಾರೆ. ಉತ್ತರ ಪ್ರದೇಶದಲ್ಲಿ ಒಟ್ಟು 7 ಹಂತದ ಮತದಾನ ನಿಗದಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry