ಬುಧವಾರ, ಮಾರ್ಚ್ 3, 2021
22 °C

ಉತ್ತರ ಪ್ರದೇಶ ಲೋಕಾಯುಕ್ತರಾಗಿ ಸಂಜಯ್‌ ಮಿಶ್ರಾ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತರ ಪ್ರದೇಶ ಲೋಕಾಯುಕ್ತರಾಗಿ ಸಂಜಯ್‌ ಮಿಶ್ರಾ ನೇಮಕ

ನವದೆಹಲಿ(ಐಎಎನ್‌ಎಸ್‌): ಉತ್ತರ ಪ್ರದೇಶ ಲೋಕಾಯುಕ್ತರನ್ನಾಗಿ ಅಲಹಾಬಾದ್‌ನ ನಿವೃತ್ತ ನ್ಯಾಯಮೂರ್ತಿ ಸಂಜಯ್ ಮಿಶ್ರಾ ಅವರನ್ನು ಸುಪ್ರೀಂ ಕೋರ್ಟ್‌ ಗುರುವಾರ ನೇಮಕ ಮಾಡಿದೆ.



ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಮತ್ತು ನ್ಯಾಯಮೂರ್ತಿ ಪ್ರಫುಲ್ಲ ಸಿ. ಪಂತ್ ಅವರನ್ನೊಳಗೊಂಡ ಪೀಠ, ಸಂಜಯ್‌ ಮಿಶ್ರಾ ಅವರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡಿದೆ.



ಈ ಹುದ್ದೆಗೆ 2015ರ ಡಿ. 16ರಂದು ನ್ಯಾಯಮೂರ್ತಿ ವೀರೇಂದ್ರ ಸಿಂಗ್‌ ಅವರ ನೇಮಕ ಮಾಡಿದ್ದನ್ನು ಪೀಠ ಈ ಸಂದರ್ಭದಲ್ಲಿ ನೆನಪು ಮಾಡಿಕೊಂಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.