ಉತ್ತರ ಪ್ರದೇಶ: ಶೇ 57ರಷ್ಟು ಮತದಾನ

7

ಉತ್ತರ ಪ್ರದೇಶ: ಶೇ 57ರಷ್ಟು ಮತದಾನ

Published:
Updated:
ಉತ್ತರ ಪ್ರದೇಶ: ಶೇ 57ರಷ್ಟು ಮತದಾನ

 

 

 

ಲಖನೌ (ಐಎಎನ್ಎಸ್): ಉತ್ತರ ಪ್ರದೇಶದ 11 ಜಿಲ್ಲೆಗಳಲ್ಲಿನ 56 ವಿಧಾನ ಸಭಾ ಕ್ಷೇತ್ರಗಳಿಗೆ ಭಾನುವಾರ ನಡೆದ ನಾಲ್ಕನೇ ಹಂತದ ಚುನಾವಣೆಯಲ್ಲಿ ಮತದಾನ ಮೊದಮೊದಲು ನಿಧಾನ ಗತಿಯಲ್ಲಿ ಆರಂಭವಾದರೂ ಸಂಜೆಯ ಹೊತ್ತಿಗೆ ಶೇ 57ರಷ್ಟು  ಮತದಾರರು ತಮ್ಮ ಹಕ್ಕು ಚಲಾಯಿಸಿದರು.

ಕಳೆದ 2007ರಲ್ಲಿ ನಡೆದ ಮತದಾನಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚು ಜನ ಮತ ಚಲಾಯಿಸಿದ್ದಾರೆ. 2007ರಲ್ಲಿ ಮತದಾನದ ಪ್ರಮಾಣ ಶೇ 42 ಇತ್ತು. ಈ ಬಾರಿ ಮತದಾನದ ಪ್ರಮಾಣದಲ್ಲಿ ಏರಿಕೆಯಾಗಿದೆ. 

 ಒಟ್ಟು 56 ವಿಧಾನಸಭಾ ಕ್ಷೇತ್ರಗಳಲ್ಲಿ ಹಲವಾರು ಘಟಾನುಘಟಿಗಳು ಸ್ಪರ್ಧಿಸಿದ್ದು, 32 ಜನ ಹಾಲಿ ಶಾಸಕರು, ಮೂವರು ಹಾಲಿ ಸಚಿವರು, 12 ಮಂದಿ ಮಾಜಿ ಸಚಿವರು, ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಕಲ್ ರಾಜ್ ಮಿಶ್ರಾ ಮತ್ತು ಕಾಂಗ್ರೆಸ್ ನ ರಾಜ್ಯ ಘಟಕದ ಅಧ್ಯಕ್ಷ ರೀಟಾ ಬಹುಗುಣ ಜೋಷಿ  ಮೊದಲಾದವರ ಹಣೆ ಬರಹ ಮತ ಪೆಟ್ಟಿಗೆಗಳನ್ನು ಸೇರಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry