ಉತ್ತರ ಪ್ರದೇಶ ಹಿಂಸಾಚಾರ: ಸರ್ಕಾರಿ ಪ್ರತಿಕ್ರಿಯೆಗೆ ಗಡುವು

7
ಸಿಬಿಐ ವಿಚಾರಣೆ ಕೋರಿ ಸಲ್ಲಿಸಿದ್ದ ಪಿಐಎಲ್

ಉತ್ತರ ಪ್ರದೇಶ ಹಿಂಸಾಚಾರ: ಸರ್ಕಾರಿ ಪ್ರತಿಕ್ರಿಯೆಗೆ ಗಡುವು

Published:
Updated:

ಲಖನೌ (ಪಿಟಿಐ):ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಆಡಳಿತಕ್ಕೆ ಬಂದಾಗಿನಿಂದ ನಡೆದ ಪ್ರಮುಖ ಹಿಂಸಾಚಾರ ಘಟನೆಗಳನ್ನು ಸಿಬಿಐ ವಿಚಾರಣೆ ನಡೆಸಲು ನಿರ್ದೇಶನ ನೀಡುವಂತೆ  ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್) ಪ್ರತಿಕ್ರಿಯೆ ಸಲ್ಲಿಸಲು ಉತ್ತರ ಪ್ರದೇಶ ಸರ್ಕಾರಕ್ಕೆ ಅಲಹಾಬಾದ್ ಹೈಕೋರ್ಟ್ ಮಂಗಳವಾರ ಎರಡು ವಾರಗಳ ಗಡುವು ನೀಡಿತು.

ಉತ್ತರ ಪ್ರದೇಶ ಸರ್ಕಾರದ ಪರವಾಗಿ ವಿಚಾರಣೆಗೆ ಹಾಜರಾಗಿದ್ದ ಹೆಚ್ಚುವರಿ ಅಡ್ವೋಕೆಟ್ ಜನರಲ್ ಬುಲ್ಬುಲ್ ಗೊಡಿಯಾಲ್, ಪ್ರತಿಕ್ರಿಯೆ ಸಲ್ಲಿಸಲು ಎರಡು ವಾರಗಳ ಕಾಲಾವಕಾಶ ಕೋರಿದ ಬಳಿಕ ನ್ಯಾಯಮೂರ್ತಿಗಳಾದ ಇಮ್ತಿಯಾಜ್ ಮುರ್ತಾಜ ಹಾಗೂ ಅನಿಲ್ ಕುಮಾರ್ ತ್ರಿಪಾಠಿ ಅವರಿದ್ದ ಲಖನೌ ಪೀಠ ಈ ಆದೇಶ ಹೊರಡಿಸಿತು.

ಕಳೆದ ವರ್ಷ ಮಾರ್ಚ್ 15 ರಂದು ಸಮಾಜವಾದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸಂಭವಿಸಿರುವ ಪ್ರಮುಖ ಹಿಂಸಾಚಾರ ಘಟನೆಗಳನ್ನು ಸಿಬಿಐ ತನಿಖೆ ನಡೆಸುವಂತೆ ಕೋರಿ ಸೆಪ್ಟೆಂಬರ್ 11 ರಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ನುತನ್ ಠಾಕೂರ್  ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry