ಮಂಗಳವಾರ, ಏಪ್ರಿಲ್ 20, 2021
25 °C

ಉತ್ತರ ಭಾರತದಲ್ಲಿ ವಿದ್ಯುತ್ ಪೂರೈಕೆ ಸಹಜ ಸ್ಥಿತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವ ದೆಹಲಿ (ಪಿಟಿಐ): ದೇಶ ಕಂಡರಿಯದ 20 ಗಂಟೆಗಳ ವಿದ್ಯುತ್ ಇಲ್ಲದ ಕತ್ತಲು ಸರಿದು ಇದೀಗ ಬೆಳಕು ಹರಿದಿದೆ. ವಿದ್ಯುತ್ ಪೂರೈಕೆ ಸ್ಥಗಿತಕ್ಕೆ ಕಾರಣವಾಗಿದ್ದ ಮೂರು ಗ್ರಿಡ್‌ಗಳು ಬುಧವಾರ ಮಧ್ಯಾಹ್ನದ ವೇಳೆಗೆ ಮತ್ತೆ ಕಾರ್ಯಾರಂಭ ಮಾಡಿವೆ.

ಮಂಗಳವಾರ ಮಧ್ಯಾಹ್ನ 1ಕ್ಕೆ ಕೈಕೊಟ್ಟಿದ್ದ ಗ್ರಿಡ್‌ಗಳು ಉತ್ತರ, ಪೂರ್ವ ಹಾಗೂ ಈಶಾನ್ಯ ರಾಜ್ಯಗಳನ್ನು ಸಂಪೂರ್ಣ ಕತ್ತಲೆಗೆ ದೂಡಿತ್ತು. ಸುಮಾರು 20 ಗಂಟೆಗಳ ಸತತ ಪ್ರಯತ್ನದಿಂದಾಗಿ ಈಗ ಶೇ 100ರಷ್ಟು ವಿದ್ಯುತ್ ಪೂರೈಕೆಯಾಗುತ್ತಿದೆ.

ಒಟ್ಟು ದೆಹಲಿ ಸೇರಿದಂತೆ ಉತ್ತರ ಭಾರತಕ್ಕೆ 30,081 ಮೆಗಾ ವ್ಯಾಟ್ ವಿದ್ಯುತ್ ಪೂರೈಕೆಯಾಗುತ್ತಿದೆ. ದೇಶದಲ್ಲೇ ಅತ್ಯಧಿಕ ಮೂಲಸೌಕರ್ಯ ಹೊಂದಿರುವ ಪೂರ್ವ ಭಾರತದಲ್ಲಿ ಕನಿಷ್ಠ 25 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯ ಹೊಂದಿದೆ. ಪೂರ್ವ ಗ್ರಿಡ್ ಅನ್ನು ಅಂತಿಮವಾಗಿ ದುರಸ್ತಿ ಮಾಡುವ ಮೂಲಕ ವಿದ್ಯುತ್ ಸಮಸ್ಯೆಗೆ ತೆರೆ ಎಳೆಯಲಾಯಿತು. ಈ ಭಾಗಕ್ಕೆ 11,052 ಮೆಗಾ ವ್ಯಾಟ್‌ನ ಅಗತ್ಯವಿದ್ದು, ಅದು ಈಗ ಪೂರ್ಣ ಪ್ರಮಾಣದಲ್ಲಿ ಪೂರೈಕೆಯಾಗುತ್ತಿದೆ.

ಪವರ್ ಗ್ರಿಡ್ ವೈಫಲ್ಯಕ್ಕೆ ಇನ್ನೂ ಸೂಕ್ತ ಕಾರಣಗಳು ಲಭಿಸಿಲ್ಲ. ಪೂರ್ವ ಭಾಗದ ಗ್ರಿಡ್ ವ್ಯಾಪ್ತಿಯಲ್ಲಿ ಕೆಲ ರಾಜ್ಯಗಳು ಅಧಿಕ ಪ್ರಮಾಣದಲ್ಲಿ ವಿದ್ಯುತ್ ಬಳಸಿದ್ದರಿಂದಲೇ ಸಮಸ್ಯೆ ಉಲ್ಬಣಕ್ಕೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.