ಗುರುವಾರ , ನವೆಂಬರ್ 14, 2019
19 °C

ಉತ್ತರ ಭಾರತ ಸೇರಿದಂತೆ ಪಾಕ್, ಆಫ್ಘಾನಿಸ್ತಾನದಲ್ಲಿ ಭೂಕಂಪ

Published:
Updated:

ಇಸ್ಲಾಮಾಬಾದ್ (ಪಿಟಿಐ/ಐಎಎನ್‌ಎಸ್): ರಿಕ್ಟರ್‌ಮಾಪಕದಲ್ಲಿ 6.2 ರಷ್ಟು ತೀವ್ರತೆಯ ಪ್ರಬಲ ಭೂಕಂಪ ಪಾಕಿಸ್ತಾನದ ಹಲವೆಡೆ ಸಂಭವಿಸಿದೆ. ಇದರಿಂದ ಆಫ್ಘಾನಿಸ್ತಾನದಲ್ಲಿ 7 ಮಂದಿ ಮೃತಪಟ್ಟಿದ್ದಾರೆ.ರಾಜಧಾನಿ ಇಸ್ಲಾಮಾಬಾದ್ ಸೇರಿದಂತೆ ಪೇಶಾವರ್, ರಾವಲ್ಪಿಂಡಿ, ಲಾಹೋರ್ ಹಾಗೂ ಬುಡಕಟ್ಟು ಪ್ರದೇಶಗಳಲ್ಲಿ ಕಂಪನದ ಅನುಭವ ಉಂಟಾಗಿದೆ.

ಭೂಕಂಪದ ಕೇಂದ್ರ ಬಿಂದು ಆಫ್ಘಾನಿಸ್ತಾನದ ನೈರುತ್ಯ ಭಾಗದಲ್ಲಿತ್ತೆಂದು ತಜ್ಞರು ತಿಳಿಸಿದ್ದಾರೆ.ಕಂಪನದ ಅನುಭವವು ನವದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ಕಂಡು ಬಂದಿತೆಂದು ವರದಿಗಳು ತಿಳಿಸಿವೆ. ಶ್ರೀನಗರ, ಗುಡಗಾಂವ್,   ನೋಯಿಡಾದಲ್ಲಿ ಭೂಕಂಪನಕ್ಕೆ ಹೆದರಿದ ಜನ ಭಯಭೀತಗೊಂಡು ಹೊರಗೋಡಿ ಬಂದರು. ಆದರೆ ಇದುವರೆಗೂ ಹಾನಿಯಾದ ಬಗೆಗೆ ಯಾವುದೇ ಮಾಹಿತಿ ದೊರಕಿಲ್ಲ.ಇನ್ನಷ್ಟು ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಪ್ರತಿಕ್ರಿಯಿಸಿ (+)