ಉತ್ತರ ವಜಿರಿಸ್ತಾನದ ಮೇಲೆ ಅಮೆರಿಕ ದಾಳಿ ಸಾಧ್ಯತೆ

7

ಉತ್ತರ ವಜಿರಿಸ್ತಾನದ ಮೇಲೆ ಅಮೆರಿಕ ದಾಳಿ ಸಾಧ್ಯತೆ

Published:
Updated:

ಇಸ್ಲಾಮಾಬಾದ್ (ಪಿಟಿಐ): ಉತ್ತರ ವಜಿರಿಸ್ತಾನದ ಬುಡಕಟ್ಟು ಪ್ರಾಂತ್ಯಗಳ ಮೇಲೆ ಅಮೆರಿಕ ಸೇನೆಯು ಕಾರ್ಯಾಚರಣೆ ನಡೆಸುವ ಸಾಧ್ಯತೆ ಇದೆ ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಶ್ಫಾಕ್ ಪರ್ವೇಜ್ ಕಯಾನಿ ಹೇಳಿದ್ದಾರೆ.ಅಮೆರಿಕ ತನ್ನ ಈ ಸೇನಾ ದಾಳಿ ನಡೆಸುವ ಮುನ್ನ ಯಾವುದೇ ಏಕಪಕ್ಷೀಯ ಧೋರಣೆ ಕೈಗೊಳ್ಳಬಾರದು ಎಂದು ಕಯಾನಿ ಹೇಳಿರುವುದಾಗಿ `ಎಕ್ಸ್‌ಪ್ರೆಸ್ ಟ್ರಿಬ್ಯೂನ್~ ವರದಿ ಮಾಡಿದೆ.ಮಂಗಳವಾರ ಇಲ್ಲಿನ ಸೇನಾ ಮುಖ್ಯ ಕಚೇರಿಯಲ್ಲಿ ನಡೆದ ಸಂಸತ್ತಿನ ರಕ್ಷಣಾ ಸ್ಥಾಯಿ ಸಮಿತಿ ಸದಸ್ಯರ ಸಭೆಯಲ್ಲಿ ಮಾತನಾಡಿರುವ ಕಯಾನಿ, ಇಂತಹ ಕಾರ್ಯಾಚರಣೆ ನಡೆಸುವ ಮುನ್ನ ಅಮೆರಿಕ ಹತ್ತಾರು ಬಾರಿ ಯೋಚಿಸುವುದು ಒಳಿತು ಎಂಬ ಸೂಕ್ಷ್ಮ ಎಚ್ಚರಿಕೆ ನೀಡಿರುವುದಾಗಿ ಪತ್ರಿಕೆ ಹೇಳಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry