ಉತ್ಪನ್ನ ಮಾರಾಟದಿಂದ ಭಾರಿ ಹಣ ನಿರೀಕ್ಷೆ

7

ಉತ್ಪನ್ನ ಮಾರಾಟದಿಂದ ಭಾರಿ ಹಣ ನಿರೀಕ್ಷೆ

Published:
Updated:

ನವದೆಹಲಿ (ಪಿಟಿಐ):ಮುಂಬರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ವೇಳೆ ವಿವಿಧ ಉತ್ಪನ್ನಗಳ ಮಾರಾಟದ ಮೂಲಕ ಸುಮಾರು 4.5 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹವಾಗುವ ನಿರೀಕ್ಷೆಯಿದೆ.ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ವೇಳೆ ಕ್ರೀಡಾ ಪರಿಕರ ಒಳಗೊಂಡಂತೆ ವಿವಿಧ ಉತ್ಪನ್ನಗಳ ಮಾರಾಟ ಮಾಡುವ ಹಕ್ಕನ್ನು ಇಂಗ್ಲೆಂಡ್‌ನ ಐವಿಎಸ್ ಸಮೂಹ ಪಡೆದುಕೊಂಡಿದೆ.ವಿಶ್ವಕಪ್ ಟೂರ್ನಿಯ ಅವಧಿಯಲ್ಲಿ ಜರ್ಸಿ, ಟಿ-ಶರ್ಟ್, ಕ್ಯಾಪ್ ಮತ್ತು ಸೊವೆನಿಯರ್ ಒಳಗೊಂಡಂತೆ ವಿವಿಧ ಉತ್ಪನ್ನ ಗಳನ್ನು ಅಭಿಮಾನಿಗಳಿಗೆ ಮಾರಾಟ ಮಾಡುವ ಗುರಿಯನ್ನು ಕಂಪೆನಿ ಇಟ್ಟುಕೊಂಡಿದೆ.‘ಟೂರ್ನಿಯ ವೇಳೆ ಸರಕುಗಳ ಮಾರಾಟದಿಂದ 4.5 ಕೋಟಿ ರೂ. ಸಂಗ್ರಹಿಸುವುದು ನಮ್ಮ ಗುರಿ. ಉಪಭೂಖಂಡದ ಮಾತ್ರವಲ್ಲ,ಜಾಗತಿಕ ಮಟ್ಟದ ಕ್ರಿಕೆಟ್ ಪ್ರಿಯರ ಅಭಿರುಚಿಯನ್ನು ಗಮನದಲ್ಲಿಟ್ಟುಕೊಂಡು ನಾವು ವಿವಿಧ ಉತ್ಪನ್ನಗಳನ್ನು ಸಿದ್ಧಪಡಿಸುವೆವು’ ಎಂದು ಐವಿಎಸ್ ಸಮೂಹದ ಪ್ರೊಜೆಕ್ಟ್ ಮ್ಯಾನೇಜರ್ ಮ್ಯಾಟ್ ಹಸೆಲ್ ನುಡಿದರು.ಐವಿಎಸ್ ತನ್ನ ಉತ್ಪನ್ನಗಳನ್ನು ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶದಲ್ಲಿ ಪಂದ್ಯಗಳು ನಡೆಯುವ ತಾಣ, ಹೋಟೆಲ್ ಹಾಗೂ ವಿಮಾನ ನಿಲ್ದಾಣಗಳಲ್ಲಿ ಮಾರಾಟಕ್ಕಿಡಲಿದೆ. ಅದೇ ರೀತಿ ಇಂಟರ್‌ನೆಟ್ ಮೂಲಕವೂ ಗ್ರಾಹಕರ ಬೇಡಿಕೆಯನ್ನು ಈಡೇರಿಸಲಿದೆ.‘ನಾವು ಸರಕುಗಳನ್ನು ಸ್ಥಳೀಯವಾಗಿಯೇ ಉತ್ಪಾದಿಸುವೆವು.ಈ ಮೂಲಕ ಎಲ್ಲರ ಬೇಡಿಕೆ ಈಡೇರಿಸು ಸಾಧ್ಯ’ ಎಂದ ಹೆಸೆಲ್, ‘ಕ್ಯಾಪ್ ಮತ್ತು ಸನ್‌ಹ್ಯಾಟ್‌ಗಳ ಮಾರಾಟ ಇಂಟರ್‌ನೆಟ್ ಮೂಲಕ ಈಗಾಗಲೇ ಬಿರುಸಿನಿಂದ ನಡೆಯುತ್ತಿದೆ’ ಎಂದರು.‘ನಮ್ಮ ಉತ್ಪನ್ನಗಳ ಬಗ್ಗೆ ಇದುವರೆಗೆ ಹೆಚ್ಚಿನ ಪ್ರಚಾರ ಮಾಡಿಲ್ಲ. ಆದರೆ ಕ್ರಿಕೆಟ್ ಪ್ರಿಯರು ಪಂದ್ಯಗಳ ಟಿಕೆಟ್ ಜೊತೆಗೆಯೇ ಟಿ- ಶರ್ಟ್, ಕ್ಯಾಪ್ ಒಳಗೊಂಡಂತೆ ವಿವಿಧ ವಸ್ತುಗಳನ್ನು ಖರೀದಿಸುತ್ತಿದ್ದಾರೆ’ ಎಂದು ನುಡಿದರು.
ಮುಂಬರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ವೇಳೆ ವಿವಿಧ ಉತ್ಪನ್ನಗಳ ಮಾರಾಟದ ಮೂಲಕ ಸುಮಾರು 4.5 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹವಾಗುವ ನಿರೀಕ್ಷೆಯಿದೆ.ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ವೇಳೆ ಕ್ರೀಡಾ ಪರಿಕರ ಒಳಗೊಂಡಂತೆ ವಿವಿಧ ಉತ್ಪನ್ನಗಳ ಮಾರಾಟ ಮಾಡುವ ಹಕ್ಕನ್ನು ಇಂಗ್ಲೆಂಡ್‌ನ ಐವಿಎಸ್ ಸಮೂಹ ಪಡೆದುಕೊಂಡಿದೆ.ವಿಶ್ವಕಪ್ ಟೂರ್ನಿಯ ಅವಧಿಯಲ್ಲಿ ಜರ್ಸಿ, ಟಿ-ಶರ್ಟ್, ಕ್ಯಾಪ್ ಮತ್ತು ಸೊವೆನಿಯರ್ ಒಳಗೊಂಡಂತೆ ವಿವಿಧ ಉತ್ಪನ್ನ ಗಳನ್ನು ಅಭಿಮಾನಿಗಳಿಗೆ ಮಾರಾಟ ಮಾಡುವ ಗುರಿಯನ್ನು ಕಂಪೆನಿ ಇಟ್ಟುಕೊಂಡಿದೆ.‘ಟೂರ್ನಿಯ ವೇಳೆ ಸರಕುಗಳ ಮಾರಾಟದಿಂದ 4.5 ಕೋಟಿ ರೂ. ಸಂಗ್ರಹಿಸುವುದು ನಮ್ಮ ಗುರಿ. ಉಪಭೂಖಂಡದ ಮಾತ್ರವಲ್ಲ, ಜಾಗತಿಕ ಮಟ್ಟದ ಕ್ರಿಕೆಟ್ ಪ್ರಿಯರ ಅಭಿರುಚಿಯನ್ನು ಗಮನದಲ್ಲಿಟ್ಟುಕೊಂಡು ನಾವು ವಿವಿಧ ಉತ್ಪನ್ನಗಳನ್ನು ಸಿದ್ಧಪಡಿಸುವೆವು’ ಎಂದು ಐವಿಎಸ್ ಸಮೂಹದ ಪ್ರೊಜೆಕ್ಟ್ ಮ್ಯಾನೇಜರ್ ಮ್ಯಾಟ್ ಹಸೆಲ್ ನುಡಿದರು.ಐವಿಎಸ್ ತನ್ನ ಉತ್ಪನ್ನಗಳನ್ನು ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶದಲ್ಲಿ ಪಂದ್ಯಗಳು ನಡೆಯುವ ತಾಣ, ಹೋಟೆಲ್ ಹಾಗೂ ವಿಮಾನ ನಿಲ್ದಾಣಗಳಲ್ಲಿ ಮಾರಾಟಕ್ಕಿಡಲಿದೆ.ಅದೇ ರೀತಿ ಇಂಟರ್‌ನೆಟ್ ಮೂಲಕವೂ ಗ್ರಾಹಕರ ಬೇಡಿಕೆಯನ್ನು ಈಡೇರಿಸಲಿದೆ.‘ನಾವು ಸರಕುಗಳನ್ನು ಸ್ಥಳೀಯವಾಗಿಯೇ ಉತ್ಪಾದಿಸುವೆವು. ಈ ಮೂಲಕ ಎಲ್ಲರ ಬೇಡಿಕೆ ಈಡೇರಿಸು ಸಾಧ್ಯ’ ಎಂದ ಹೆಸೆಲ್, ‘ಕ್ಯಾಪ್ ಮತ್ತು ಸನ್‌ಹ್ಯಾಟ್‌ಗಳ ಮಾರಾಟ ಇಂಟರ್‌ನೆಟ್ ಮೂಲಕ ಈಗಾಗಲೇ ಬಿರುಸಿನಿಂದ ನಡೆಯುತ್ತಿದೆ’ ಎಂದರು.‘ನಮ್ಮ ಉತ್ಪನ್ನಗಳ ಬಗ್ಗೆ ಇದುವರೆಗೆ ಹೆಚ್ಚಿನ ಪ್ರಚಾರ ಮಾಡಿಲ್ಲ. ಆದರೆ ಕ್ರಿಕೆಟ್ ಪ್ರಿಯರು ಪಂದ್ಯಗಳ ಟಿಕೆಟ್ ಜೊತೆಗೆಯೇ ಟಿ- ಶರ್ಟ್, ಕ್ಯಾಪ್ ಒಳಗೊಂಡಂತೆ ವಿವಿಧ ವಸ್ತುಗಳನ್ನು ಖರೀದಿಸುತ್ತಿದ್ದಾರೆ’ ಎಂದು ನುಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry