ಉತ್ಪಾದಕರ ಸಂಸ್ಥೆಗಳಿಗೆ ರೂ 8 ಕೋಟಿ ಮೀಸಲು

7

ಉತ್ಪಾದಕರ ಸಂಸ್ಥೆಗಳಿಗೆ ರೂ 8 ಕೋಟಿ ಮೀಸಲು

Published:
Updated:

ಬೆಂಗಳೂರು: ರಾಜ್ಯದಲ್ಲಿ ನಬಾರ್ಡ್ ಗುರುತಿಸಿರುವ ಐದು ಸಂಸ್ಥೆಗಳಿಗೆ ‘ಉತ್ಪಾದಕರ ಸಂಸ್ಥೆಗಳ ಅಭಿವೃದ್ಧಿ ನಿಧಿ’ ಅಡಿಯಲ್ಲಿ ಪ್ರಸಕ್ತ ಸಾಲಿಗೆ ರೂ 8 ಕೋಟಿ ಮೀಸಲಿಟ್ಟಿದೆ.ಚಿತ್ರದುರ್ಗ ಎಣ್ಣೆಬೀಜ ಉತ್ಪಾದಕರ ಸಂಸ್ಥೆ, ತೋಟಗಾರ ಸಹಕಾರ ಮಾರಾಟ ಸೊಸೈಟಿ, ದಕ್ಷಿಣ ಕನ್ನಡ ಹಾಲು ಉತ್ಪಾದಕರ ಯೂನಿಯನ್‌, ಸಹಜ ಸಮೃದ್ಧಿ ಸಾವಯವ ಉತ್ಪಾದಕರ ಸಂಸ್ಥೆ ಮತ್ತು ಕದಂಬ ಮಾರ್ಕೆಟಿಂಗ್‌ ಸೊಸೈಟಿಗಳನ್ನು ನಬಾರ್ಡ್‌ ಗುರುತಿಸಿದೆ. 2011ರಲ್ಲಿ ರೂ 50 ಕೋಟಿ ನಿಧಿಯೊಂದಿಗೆ ಈ ಯೋಜನೆಯನ್ನು ಆರಂಭಿಸಲಾಗಿತ್ತು.ರಾಜ್ಯದಲ್ಲಿನ ಈ ಸಂಘಟನೆಗಳಿಗೆ ರೂ 39.045 ಕೋಟಿ ನೀಡುವ ಮೂಲಕ ಡೈರಿ, ಮೀನುಗಾರಿಕೆ ಮುಂತಾದ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲು ಉತ್ತೇಜನ ನೀಡಿತ್ತು ಎಂದು ನಬಾರ್ಡ್‌ ಮುಖ್ಯ ಮಹಾಪ್ರಬಂಧಕ ಜಿ.ಆರ್‌. ಚಿಂತಾಲ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry