ಉತ್ಪಾದನೆಗೆ ಒತ್ತು: ಗೋಕರ್ಣ ಆಗ್ರಹ

7

ಉತ್ಪಾದನೆಗೆ ಒತ್ತು: ಗೋಕರ್ಣ ಆಗ್ರಹ

Published:
Updated:

ನವದೆಹಲಿ (ಪಿಟಿಐ): ಆಹಾರ ಹಣದುಬ್ಬರಕ್ಕೆ ಸರಕುಗಳ ಬೇಡಿಕೆ ಮತ್ತು ಪೂರೈಕೆಯಲ್ಲಿನ ಅಸಮಾನತೆಯೇ ಮುಖ್ಯ ಕಾರಣ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಡೆಪ್ಯುಟಿ ಗವರ್ನರ್ ಸುಬೀರ್ ಗೋಕರ್ಣ ಅಭಿಪ್ರಾಯಪಟ್ಟಿದ್ದಾರೆ.   ಅದರಲ್ಲೂ ಪ್ರೋಟಿನ್ ಆಧಾರಿತ ಸರಕುಗಳಿಗೆ ಬಳಕೆದಾರರಲ್ಲಿ ಬೇಡಿಕೆ ಹೆಚ್ಚುತ್ತಿರುವುದರಿಂದ ಇಂತಹ ಸರಕುಗಳ ಉತ್ಪಾದನೆಗೆ ಹೆಚ್ಚು ಒತ್ತು ನೀಡಬೇಕಾಗಿದೆ ಎಂದರು. ಇಲ್ಲಿ ನಡೆದ  ಹೂಡಿಕೆದಾರರ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.ಆರ್ಥಿಕ ವೃದ್ಧಿ ದರಕ್ಕೆ ಮೊದಲ ಆದ್ಯತೆ ನೀಡಿ, ವರಮಾನ ವೃದ್ಧಿ ನಿರ್ಲಕ್ಷಿಸುವಂತಿಲ್ಲ. ಇವೆರಡು ಪರಸ್ಪರ ತಳಕು ಹಾಕಿಕೊಂಡಿವೆ. ಎರಡಕ್ಕೂ ಸಮಾನ  ಮಹತ್ವ ನೀಡಬೇಕು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry