ಭಾನುವಾರ, ಜೂನ್ 13, 2021
21 °C

ಉತ್ಸವದಲ್ಲಿ ಪಾಲ್ಗೊಳ್ಳದಿರಲು ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ಸವದಲ್ಲಿ ಪಾಲ್ಗೊಳ್ಳದಿರಲು ನಿರ್ಧಾರ

ಬೇಲೂರು: ಇಲ್ಲಿನ ಚೆನ್ನಕೇಶವಸ್ವಾಮಿ ದೇಗುಲಕ್ಕೆ ಸರ್ಕಾರ ನೇಮಿಸಿರುವ ವ್ಯವಸ್ಥಾಪನಾ ಸಮಿತಿ ಸದಸ್ಯರ ಪಟ್ಟಿಯಲ್ಲಿ ಅಡ್ಡೆಗಾರರ ಹೆಸರನ್ನು ಕೈಬಿಟ್ಟಿರುವುದು ವಿವಾದಕ್ಕೆ ಎಡೆಮಾಡಿದೆ. 22ರಿಂದ ಆರಂಭಗೊಳ್ಳಬೇಕಿರುವ ಉತ್ಸವಗಳ ಮೇಲೆ ಕರಿನೆರಳು ಬೀರಿದೆ. ಎ-ವರ್ಗಕ್ಕೆ ಸೇರಿರುವ ಇಲ್ಲಿನ ಚೆನ್ನಕೇಶವಸ್ವಾಮಿ ಗುಡಿಗೆ ಒಂಬತ್ತು ಸದಸ್ಯರ ವ್ಯವಸ್ಥಾಪನಾ ಸಮಿತಿಯನ್ನು ನೇಮಿಸಿ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಮಾ.17ರಂದು ಆದೇಶಿ ಸಿದ್ದಾರೆ. ಪಟ್ಟಣ ವ್ಯಾಪ್ತಿಯಲ್ಲಿನ ಪ್ರಮುಖರು ಹಾಗೂ ನಾಲ್ಕು ಮೂಲೆಗಳಿಗೆ ಸೇರಿದ ಅಡ್ಡೆಗಾರರ ಪೈಕಿ ಒಬ್ಬರನ್ನು ಸಮಿತಿ ಸದಸ್ಯರನ್ನಾಗಿ ನೇಮಿಸುವ ಸಂಪ್ರದಾಯ ಹಿಂದಿನಿಂದಲೂ ಇದೆ. ಆದರೆ ಈ ಬಾರಿ ಅಡ್ಡೆಗಾರರ ಪೈಕಿ ಯಾರನ್ನೂ ನೇಮಿಸದಿರುವುದು ವಿವಾದಕ್ಕೆ ಕಾರಣವಾಗಿದೆ. ಚೆನ್ನಕೇಶವಸ್ವಾಮಿಯ ರಥೋತ್ಸವದ ಅಂಗವಾಗಿ 22ರಿಂದ ಆರಂಭಗೊಳ್ಳಬೇಕಿರುವ ಉತ್ಸವಗಳನ್ನು ಬಹಿಷ್ಕರಿಸಲು ಅಡ್ಡೆಗಾರರು ತೀರ್ಮಾನಿಸಿದ್ದಾರೆ. ಈ ಕುರಿತು `ಪ್ರಜಾವಾಣಿ~ ಯೊಂದಿಗೆ ಅಡ್ಡೆಗಾರರ ಪ್ರಮುಖರಾದ ಬಿ.ಆರ್. ವೆಂಕಟೇಗೌಡ ಮತ್ತು ಶ್ರೀನಿವಾಸ್(ಶೈಲೇಶ್) ದೇವಾಲಯದ ವ್ಯವಸ್ಥಾ ಪನಾ ಸಮಿತಿಯಲ್ಲಿ ಅಡ್ಡೆಗಾರರ ಹೆಸರನ್ನು ಬಿಟ್ಟಿರುವುದರಲ್ಲಿ ರಾಜಕೀಯ ಕುತಂತ್ರ ಇದೆ. ಇದನ್ನು ಖಂಡಿಸಿ ಅಡ್ಡೆಗಾರರು ಉತ್ಸವವನ್ನು ಬಹಿಷ್ಕರಿಸಲು ತೀರ್ಮಾನ ಕೈಗೊಂಡಿದ್ದೇವೆ. 22ರಂದು ಖಜಾನೆ ಯಿಂದ ಅಡ್ಡೆಯ ಮೇಲೆ ದೇವರ ಒಡವೆಗಳನ್ನು ತರಬೇಕಾಗಿದೆ. ಇದರಲ್ಲೂ ತಾವು ಪಾಲ್ಗೊಳ್ಳುವುದಿಲ್ಲ~ ಎಂದು ತಿಳಿಸಿದರು. ಇದಲ್ಲದೆ, ಯುಗಾದಿಯಿಂದ ಆರಂಭಗೊಳ್ಳುವ ಯಾವುದೇ ಉತ್ಸವಗಳ ಅಡ್ಡೆಗಳನ್ನು ನಾಲ್ಕು ಮೂಲೆಯ ಅಡ್ಡೆಗಾರರು ಹೊರುವುದಿಲ್ಲ. ಈ ಕುರಿತು ತಹಶೀಲ್ದಾರ್, ಜಿಲ್ಲಾಧಿಕಾರಿ ಮತ್ತು ಧಾರ್ಮಿಕದತ್ತಿ ಇಲಾಖೆಯ ಆಯುಕ್ತರಿಗೂ ಮನವಿ ಕಳುಹಿಸಲಾಗಿದೆ. ಅಡ್ಡೆಗಾರರ ಪೈಕಿ ಒಬ್ಬರನ್ನು ವ್ಯವಸ್ಥಾಪನಾ ಸಮಿತಿ ಸದಸ್ಯರನ್ನಾಗಿ ನೇಮಿಸುವವರೆಗೆ ಅಡ್ಡೆಗಾರರು ಉತ್ಸವದಲ್ಲಿ ಭಾಗವಹಿ ಸುವುದಿಲ್ಲ ಎಂದು ತಿಳಿಸಿದರು.ಪಟ್ಟಿಯಲ್ಲಿ ತಾರತಮ್ಯ: ಚೆನ್ನಕೇಶವ ದೇವಾಲಯಕ್ಕೆ ವ್ಯವಸ್ಥಾಪನಾ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡುವಾಗ ಹಿಂದಿನಿಂದಲೂ ಎಲ್ಲ ವರ್ಗದ ಜನರಿಗೂ ಪ್ರಾತಿನಿಧ್ಯ ನೀಡಲಾಗು ತ್ತಿತ್ತು. ಆದರೆ ಈ ಬಾರಿ ಪ್ರಬಲವಾದ ಒಕ್ಕಲಿಗ ಮತ್ತು ಬ್ರಾಹ್ಮಣ ಜನಾಂಗಕ್ಕೆ ಸೇರಿದವರಿಗೆ ಹೆಚ್ಚಿನ ಮಣೆ ಹಾಕಲಾಗಿದೆ. ಒಂಬತ್ತು ಸದಸ್ಯರ ಪೈಕಿ ಈ ಜನಾಂಗಗಳಿಗೆ ಸೇರಿದ 6 ಜನರನ್ನು ನೇಮಕ ಮಾಡುವ ಮೂಲಕ ತಾರ ತಮ್ಯ ಎಸಗಲಾಗಿದೆ. ಹಿಂದುಳಿದ ವರ್ಗ, ಲಿಂಗಾಯಿತರಿಗೆ ಈ ಪಟ್ಟಿಯಲ್ಲಿ ಆದ್ಯತೆ ನೀಡಿಲ್ಲ ಎಂದು ಜನತೆ ದೂರಿದ್ದಾರೆ.ಕುಮಾರ್ ಆಯ್ಕೆ: 21ರಂದು ನಡೆದ ವ್ಯವಸ್ಥಾಪನಾ ಸಮಿತಿಯ ಪ್ರಥಮ ಸಭೆಯಲ್ಲಿ ಜಿ.ಕೆ.ಕುಮಾರ್(ಒಕ್ಕಲಿಗ) ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಸದಸ್ಯರಾಗಿ ಪ್ರಧಾನ ಅರ್ಚಕ ಕೃಷ್ಣಸ್ವಾಮಿ ಭಟ್ಟರ್(ಬ್ರಾಹ್ಮಣ) ಬಿ.ಆರ್.ಜಗದೀಶ್(ಪರಿಸಿಷ್ಟ ಜಾತಿ) ಬಿ.ಶಾಂತಾಮಣಿ (ಉಪ್ಪಾರ) ಎಚ್.ಎಲ್. ಪ್ರೇಮ(ಬ್ರಾಹ್ಮಣ) ಬಿ.ಎನ್. ವಿಶ್ವನಾಥ್(ವೈಶ್ಯ) ಎನ್.ಆರ್. ಸಂತೋಷ್(ಒಕ್ಕಲಿಗ) ಬಿ.ಕೆ.ಶ್ರೀಹರಿ(ಬ್ರಾಹ್ಮಣ) ಮತ್ತು ಕೆ.ಪಿ.ಶೈಲೇಶ್(ಒಕ್ಕಲಿಗ) ನೇಮಕಗೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.