ಮಂಗಳವಾರ, ಏಪ್ರಿಲ್ 13, 2021
32 °C

ಉತ್ಸವ ಉದ್ಘಾಟನೆಗೆ ಮುಖ್ಯಮಂತ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಗಾವತಿ: ವಿಜಯನಗರದ ಮೊದಲ ರಾಜ್ಯದಾನಿ ಐತಿಹಾಸಿಕ ಆನೆಗೊಂದಿಯಲ್ಲಿ ಇದೇ ಮಾರ್ಚ್ 23 ಮತ್ತು 24ರಂದು ಎರಡು ದಿನ ಕಾಲ ಆನೆಗೊಂದಿ ಉತ್ಸವ-2011 ನಡೆಯಲಿದ್ದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.ಉತ್ಸವದ ಅಂಗವಾಗಿ ಆನೆಗೊಂದಿಯ ಮುಖ್ಯ ವೇದಿಕೆಗಳಲ್ಲಿ ನಡೆಯುತ್ತಿರುವ ಏರ್ಪಾಡುಗಳನ್ನು ಶನಿವಾರ ವೀಕ್ಷಿಸಿದ ಅವರು, ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 23ರ ಸಂಜೆ 4ಗಂಟೆಗೆ  ಸಿಎಂ ಉತ್ಸವ ಉದ್ಘಾಟಿಸುವರು.ಅದಕ್ಕೂ ಮುನ್ನ ಬೆಳಗ್ಗೆ ದುರ್ಗಾದೇವಿ ದೇವಸ್ಥಾನದಿಂದ ಅಗಸಿ ಬಾಗಿಲುವರೆಗೆ ಜಾನಪದ ಕಲಾ ವಾಹಿನಿ ನಡೆಯಲಿದೆ. ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕಲಾವಿದರನ್ನೊಳಗೊಂಡ ಸುಮಾರು 50ಕ್ಕೂ ಹೆಚ್ಚು ಕಲಾ ಪ್ರಕಾರದ ತಂಡಗಳು ವಾಹಿನಿಯಲ್ಲಿ ಪಾಲ್ಗೊಳ್ಳುತ್ತವೆ ಎಂದರು.ಉತ್ಸವಕ್ಕೆ ನಟ ಶಿವರಾಜ ಕುಮಾರ ಅವರನ್ನು ಆಹ್ವಾನಿಸಲಾಗಿದೆ. ಅವರು ಕಾರ್ಯಕ್ರಮದ ಕೇಂದ್ರ ಬಿಂದುವಾಗಲಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ನಟ-ನಟಿಯರು ಸೇರಿದಂತೆ ಇತರ ತಾರೆಗಳು ಪಾಲ್ಗೊಂಡು ಉತ್ಸವಕ್ಕೆ ರಂಗೇರಿಸಲಿದ್ದಾರೆ.ಸಚಿವರಾದ ಗೋವಿಂದ ಕಾರಜೋಳ, ಸಿ.ಎಂ ಉದಾಸಿ, ಲಕ್ಷ್ಮಣ ಸವದಿ, ಜರ್ನಾದನರೆಡ್ಡಿ, ಬಿ. ಶ್ರೀರಾಮುಲು, ಸಿ.ಸಿ. ಪಾಟೀಲ, ಸಂಸದ ಎಸ್. ಶಿವರಾಮಗೌಡ ಸೇರಿದಂತೆ ನಿಗಮ-ಮಂಡಳಿಗಳ ಅಧ್ಯಕ್ಷರು, ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕ ತಿಳಿಸಿದರು.ಸ್ವಯಂ ದಾಸೋಹ: ಉತ್ಸವಕ್ಕೆ ಬರುವ ಜನಸಾಗಾರಕ್ಕೆ ತಮ್ಮ ಸ್ವಂತ ಹಣದಲ್ಲಿ ಎರಡು ದಿನ ಉಚಿತ ಊಟದ ವ್ಯವಸ್ಥೆ ಕಲ್ಪಿಸಲಾಗುವುದು. ಎರಡು ದಿನಗಳಕಾಲ ಸುಮಾರು 17-19 ಸಾವಿರ ಜನ ಬರುವ ನಿರೀಕ್ಷೆಯಿದೆ. ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗುವುದು. ದಾಸೋಹಕ್ಕಾಗಿ ಈಗಾಗಲೆ ಊಟದ ಮೆನು ಸಿದ್ದಪಡಿಸಲಾಗಿದೆ. ಬೆಳಗಿನ ಎರಡು ದಿನಗಳ ಉಪಹಾರಕ್ಕಾಗಿ ಟೊಮೆಟೊ ಬಾತ್, ಸಿರಾ-ಉಪ್ಪಿಟ್ಟು, ನಾಲ್ಕು ಊಟದ ವ್ಯವಸ್ಥೆಗೆ ಏರ್ಪಾಡು ಮಾಡಲಾಗಿದೆ. ನಾಲ್ಕಾರು ಕೌಂಟರ್‌ನಲ್ಲಿ ಊಟ ವಿತರಿಸಲಾಗುವುದು ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.