ಬುಧವಾರ, ಏಪ್ರಿಲ್ 21, 2021
31 °C

ಉತ್ಸವ: ಕುಸ್ತಿ ಪಂದ್ಯಾವಳಿಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ಸವ: ಕುಸ್ತಿ ಪಂದ್ಯಾವಳಿಗೆ ಚಾಲನೆ

ಗುಲ್ಬರ್ಗ: ಗುಲ್ಬರ್ಗ ಉತ್ಸವದ ಅಂಗವಾಗಿ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಾವಳಿಯನ್ನು ಸಚಿವ ರೇವು ನಾಯಕ್ ಬೆಳಮಗಿ ಚಾಲನೆ ನೀಡಿದರು. ಕುಸ್ತಿ ಗ್ರಾಮೀಣ ಭಾಗದ ದೇಶಿಯ ಕ್ರೀಡೆಯಾಗಿದ್ದು, ಉತ್ಸವ, ಜಾತ್ರಾ ಮಹೋತ್ಸವಗಳ ಸಂದರ್ಭದಲ್ಲಿ ಕುಸ್ತಿಯ ಸೊಗಡನ್ನು ಸವಿಯಲು ಅವಕಾಶವಾಗುತ್ತದೆ. ಇಂಥ ಗ್ರಾಮೀಣ ಭಾಗದ ಕ್ರೀಡೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದಾಗಿ ಕುಸ್ತಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ. ಸ್ಪರ್ಧಾತ್ಮಕ ಮನೋಭಾವದಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಕುಸ್ತಿ ಪಟುಗಳಿಗೆ ಕಿವಿಮಾತು ಹೇಳಿದರು.66 ಕೆ.ಜಿ. ಮೇಲ್ಪಟ್ಟು 84 ಕೆ.ಜಿ. ವರೆಗಿನ ವಿಭಾಗದ ಕುಸ್ತಿ ಪಂದ್ಯಾವಳಿಯಲ್ಲಿ ಆಳಂದದ ಕುಸ್ತಿಪಟು ಸುರೇಶ ಕುಂಬಾರ ಹಾಗೂ ರಾಜಕುಮಾರ ಪಾಟೀಲ್ ನಡುವೆ ನಡೆದ ಕುಸ್ತಿ ಕಾಳಗವು ನೋಡುಗ ಪ್ರೇಕ್ಷಕರಿಗೆ ರೋಮಾಂಚನವನ್ನುಂಟು ಮಾಡಿತು. ನೆರದ ಪ್ರೇಕ್ಷಕರು ಸಿಳ್ಳೆ ಹಾಕಿ ಕುಸ್ತಿಪಟುಗಳಿಗೆ ಪ್ರೋತ್ಸಾಹ ನೀಡಿದರು.  ಸುರೇಶ ಕುಂಬಾರ ಎದುರಾಳಿ ಕುಸ್ತಿ ಪಟುವನ್ನು ಸೋಲಿಸಿ ಪ್ರಥಮ ಬಹುಮಾನ ಪಡೆದಕೊಂಡರು. ರಾಜಕುಮಾರ ಪಾಟೀಲ್ ದ್ವಿತೀಯ, ಮಹೇಂದ್ರ ಮಾನೆ ತೃತೀಯ ಸ್ಥಾನವನ್ನು ಪಡೆದುಕೊಂಡರು.55ಕೆ.ಜಿ ವಿಭಾಗದ ಕುಸ್ತಿ ಪಂದ್ಯಾವಳಿಯಲ್ಲಿ ಅಬ್ದುಲ್ ರೆಹಮಾನ್ ಪ್ರಥಮ, ಮಂಜುನಾಥ ದ್ವಿತೀಯ, ವಿಶಾಲ ತೃತೀಯ ಸ್ಥಾನ ಪಡೆದುಕೊಂಡರು. 60 ಕೆ.ಜಿ ಮೇಲ್ಪಟ್ಟು ವಿಭಾಗದಲ್ಲಿ ಲಕ್ಷ್ಮೀಕಾಂತ ಜಂಬನಾಳ ಪ್ರಥಮ, ಸವೇಶ ದ್ವಿತೀಯ, ನಾಮದೇವ ತೃತೀಯ ಸ್ಥಾನ ಪಡೆದುಕೊಂಡರು.ಗುಲ್ಬರ್ಗ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ 48 ಕುಸ್ತಿ ಪಟುಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು. ಪ್ರಾದೇಶಿಕ ಆಯುಕ್ತ ರಜನೀಶ ಗೋಯಲ್, ಮಹಾನಗರ ಪಾಲಿಕೆ ಆಯುಕ್ತ ಮನೋಜಕುಮಾರ ಜೈನ್, ಯುವಜನಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಿ. ರವೀಂದ್ರಕುಮಾರ, ಪ್ರೊ, ಎಮ್.ಎಸ್. ಪಾಸೋಡಿ, ಮನೋಜಕುಮಾರ, ಡಿ.ಎಚ್. ರಾಮವಾಡಗಿ ಪಾಲ್ಗೊಂಡಿದ್ದರು.ರಾಮ ಬುಡಕಿ ಹಾಗೂ ಶಿವಲಿಂಗಪ್ಪ ಗೌಳಿ ಕುಸ್ತಿ ಪಂದ್ಯಾವಳಿಯ ನಿರ್ಣಾಯಕರಾಗಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.