ಉತ್ಸವ ನಾಡ ಹಬ್ಬವಾಗಿ ಆಚರಿಸಿ

7

ಉತ್ಸವ ನಾಡ ಹಬ್ಬವಾಗಿ ಆಚರಿಸಿ

Published:
Updated:

ಚಿಟಗುಪ್ಪಾ: ರಾಜ್ಯದ ಪ್ರತಿ ಜಿಲ್ಲಾಡಳಿತ ಜಿಲ್ಲಾ ಉತ್ಸವ ಬದಲು ನಾಡ ಹಬ್ಬವಾಗಿ ಆಚರಿಸಿ ಸ್ಥಳಿಯ ಕಲೆ, ಸಂಸ್ಕೃತಿ, ಹಾಗೂ ಕಲಾವಿದರನ್ನು ಗುರುತಿಸಿ,ಪ್ರೋತ್ಸಾಹಿಸುವ ಕಾರ್ಯ ಮಾಡಬೇಕು ಎಂದು ಬೀದರ್ ಜ್ಞಾನ ಧಾಮ ಯೋಗಾಶ್ರಮದ ಅಧಿಪತಿ ಡಾ.ರಾಜಶೇಖರ್ ಸ್ವಾಮೀಜಿ ಹೇಳಿದ್ದಾರೆ.ಹುಮನಾಬಾದ್ ತಾಲ್ಲೂಕಿನ ಮನ್ನಾಏಖ್ಖೇಳಿ ಗ್ರಾಮದ ಬಾಲಮ್ಮ ದೇವಿ ಮಂದಿರದಲ್ಲಿ ಈಚೆಗೆ   ಶಕ್ತಿ ಯೋಗ ಪ್ರವಚನ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಜಿಲ್ಲಾ ಉತ್ಸವ ಹೆಸರಿನಲ್ಲಿ ದುಂದು ವೆಚ್ಚನಡೆಯುತ್ತಿದೆ. ಇದನ್ನು ನಾಡ ಹಬ್ಬವಾಗಿ ಆಚರಿಸುವ ಎಂದು ತಿಳಿಸಿದರು.ಶಾಸಕ ಬಂಡೆಪ್ಪ ಕಾಶೆಂಪೂರ ಮಾತನಾಡಿ, ಭಾರತ ದೇಶದ ಸಂಸ್ಕೃತಿ,  ವಿಶ್ವಕ್ಕೆ ಮಾದರಿ ಆಗಿದ್ದು, ಭಾವೈಕ್ಯತೆಯ ಸಂಗಮವಾಗಿದೆ. ಬಾಲಮ್ಮ ಮಂದಿರದಲ್ಲಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಶಾಸಕರ ಅನುದಾನದ ಅಡಿಯಲ್ಲಿ 5ಲಕ್ಷ ರೂ. ಬಿಡುಗಡೆ ಮಾಡುವುದಾಗಿ ತಿಳಿಸಿದರು.ಬಿಎಸ್‌ಎಸ್‌ಕೆ ಅಧ್ಯಕ್ಷ ಸುಭಾಷ ಕಲ್ಲೂರ ಮಾತನಾಡಿದರು, ಎಂ.ವೀರೇಶ ವಿಶೇಷ ಉಪನ್ಯಾಸ ನೀಡಿದರು. ಸರ್ಕಲ್ ಇನ್‌ಸ್ಪೇಕ್ಟರ್ ಬಸವೇಶ್ವರ ಹೀರಾ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅಮೃತರಾವ ಚಿಮಕೋಡೆ,  ಕೆಪಿಸಿಸಿ ಸದಸ್ಯ ಭಾಗನಗೌಡ ಪಾಟೀಲ್‌ಫಾರುಕ್ ಜಮಾದಾರ್ ಮಾತನಾಡಿದರು. ಶಿವಕುಮಾರ ಪಾಟೀಲ್ ಬೆಳಕೇರಾ, ರಾಜಕುಮಾರ ಪಸಾರೆ, ಜಗನ್ನಾಥ ಮಹಾರಾಜರು, ಝರಣಪ್ಪ ಚಾಂಗಲೇರಾ, ಅರುಣಕುಮಾರ ಕುಲಕರ್ಣಿ ಪಾಲ್ಗೊಂಡಿದ್ದರು.

 

ಪತಾನಂದ ಆತ್ಮಾನಂದ ಮಹಾರಾಜರು ಸಾನಿಧ್ಯ ವಹಿಸಿದ್ದರು. ಮಾತೆ ಮೈತ್ರಾದೇವಿ ನೇತೃತ್ವ ವಹಿಸಿದ್ದರು. ಹಣಮಂತಪ್ಪ ಮರಕುಂದಾ ಅಧ್ಯಕ್ಷತೆ ವಹಿಸಿದ್ದರು. ರೇವಣಸಿದ್ದಪ್ಪ ಡೊಂಗರಗಾಂವ  ಶಾರದಾ. ಎನ್.ಪಾಟೀಲ್ .ವ್ಹಿ.ಎಸ್.ಚಂದ್ರಕಂಠಿ ತುಕಾರಾಮ ಭಂಡಾರಿ ಇದ್ದರು. ನವಲಿಂಗ್ ಪಾಟೀಲ್, ಶಿವಾನಂದ ಆವಟೆ  ಸಂಗೀತ ಸೇವೆ ಸಲ್ಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry