`ಉದಾರೀಕರಣದಿಂದ ಸಂಕಷ್ಟ'

7

`ಉದಾರೀಕರಣದಿಂದ ಸಂಕಷ್ಟ'

Published:
Updated:

ಹೊಸಕೋಟೆ: `ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಉದಾರೀಕರಣ ನೀತಿಯಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಈಡಾಗಿದ್ದಾರೆ' ಎಂದು ಸಿಪಿಐ (ಎಂ) ಮುಖಂಡ ಮಾರುತಿ ಮಾನ್ಪಡೆ ಆರೋಪಿಸಿದರು.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನವಿರೋಧಿ ನೀತಿ ತಾಳಿವೆ ಎಂದು ಆರೋಪಿಸಿ ಸಿಪಿಐ (ಎಂ) ರಾಜ್ಯ ಘಟಕದ ವತಿಯಿಂದ ಹೊಸಕೋಟೆಯಲ್ಲಿ ಈಚೆಗೆ ನಡೆದ ಜನಾಂದೋಲನ ಜಾಥಾದಲ್ಲಿ ಅವರು ಮಾತನಾಡಿದರು.`ಬಹುಬ್ರಾಂಡ್ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಿರುವುದರಿಂದ ನಿರುದ್ಯೋಗ ಸಮಸ್ಯೆ ಇನ್ನಷ್ಟು ಹೆಚ್ಚಲಿದೆ'`ಇಷ್ಟಾದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಹುರಾಷ್ಟ್ರೀಯ ಕಂಪೆನಿಗಳಿಗೆ ಮಣೆ ಹಾಕುವುದರ ಮೂಲಕ ಜನರ ಬದುಕನ್ನು ದುಸ್ತರಗೊಳಿಸುತ್ತಿವೆ' ಎಂದು ಕಿಡಿಕಾರಿದರು.ಪಕ್ಷದ ಮುಖಂಡ ಎಸ್.ವೈ. ಗುರುಶಾಂತ್, ಎಚ್.ಎನ್.ಮೋಹನ್‌ಬಾಬು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry