ಉದಾಸಿ ಎಲ್ಲ ರಾಜಕಾರಣಿಗಳಿಗೂ ಮಾದರಿ

7

ಉದಾಸಿ ಎಲ್ಲ ರಾಜಕಾರಣಿಗಳಿಗೂ ಮಾದರಿ

Published:
Updated:

ಹಾನಗಲ್ಲ: ‘ಹಿಡಿದ ಕೆಲಸವನ್ನು ಪೂರ್ಣಗೊಳಿಸುವ ಬದ್ಧತೆ ಹೊಂದಿರುವ ಜನನಾಯಕ ಉದಾಸಿ ಎಲ್ಲ ರಾಜಕಾರಣಿಗಳಿಗೂ ಮಾದರಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಹೇಳಿದರು. ಬುಧವಾರ ಸಚಿವ ಸಿ.ಎಂ. ಉದಾಸಿ ಅಭಿಮಾನಿಗಳು ಏರ್ಪಡಿಸಿದ 75ನೇ ಹುಟ್ಟು ಹಬ್ಬದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ಸಮಾಜ ಸೇವೆಯ ಮೂಲಕ ಸಾರ್ಥಕ ಬದುಕನ್ನು ಮಾರ್ಗದರ್ಶಿ ಮಾಡಿದ ಸಚಿವ ಸಿ.ಎಂ. ಉದಾಸಿ ವಿರೋಧ ಪಕ್ಷಗಳೂ ಟೀಕೆ ಮಾಡದಂಥ ಪಾರದರ್ಶಕ ವ್ಯಕ್ತಿತ್ವದ ಮೇರು ವ್ಯಕ್ತಿ’ ಎಂದರು.ಪ್ರೌಢ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಉತ್ತಮ ಆಡಳಿತಗಾರರಾಗಿರುವ ಉದಾಸಿ ಅವರು ಅನುಭವವನ್ನು ಯುವ ಪೀಳಿಗೆಗೆ ಧಾರೆ ಎರೆದಿದ್ದಾರೆ’ ಎಂದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವ ಸಿ.ಎಂ. ಉದಾಸಿ, ‘ನಿರಂತರ ಪ್ರಯತ್ನದಲ್ಲಿ ಬದುಕಿನ ಗುರಿ ಸಾಧಿಸುವ ಛಲವಿದ್ದರೆ ಯಶಸ್ಸು ಸಾಧ್ಯ. ಆರೋಗ್ಯ ಸಹಕರಿಸುವವರೆಗೆ ಸಮಾಜ ಸೇವೆಯಲ್ಲಿ ಮುಂದುವರೆಯುತ್ತೇನೆ, ಎಲ್ಲರ ಸಹಕಾರದಿಂದ ಯಶಸ್ಸು ಸಾಧ್ಯವಾಗಿದೆ’ ಎಂದರು.ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧರಾಜಯೋಗಿಂದ್ರ ಸ್ವಾಮೀಜಿ, ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ, ಶಿವಬಸವದೇವರು, ಬಿಜಕಲ್ ಶ್ರೀಗಳು, ಮುತ್ತಿನಕಂತಿಮಠದ ಶ್ರೀಗಳು, ಸಿ.ಎಂ. ಉದಾಸಿ ಅವರ ಪತ್ನಿ ನೀಲಮ್ಮ ಉದಾಸಿ, ಸಹಕಾರ ಸಚಿವ ಲಕ್ಷ್ಮಣ ಸವದಿ, ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಸಂಸದರಾದ ಪ್ರಹ್ಲಾದ ಜೋಷಿ, ಶಿವಕುಮಾರ ಉದಾಸಿ, ಮಾಜಿ ಸಚಿವ ಎಸ್.ಎಸ್.ಪಾಟೀಲ,  ವಿಧಾನ ಪರಿಷತ್ ಸದಸ್ಯರಾದ ಮೋಹನ ಲಿಂಬಿಕಾಯಿ, ಶಂಕ್ರಣ್ಣ ಮುನವಳ್ಳಿ, ಶಿವರಾಜ ಸಜ್ಜನ, ಕಾಡಾ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕುರಿ ಉಣ್ಣೆ ಅಭಿವೃಧ್ಧಿ ನಿಗಮದ ಅಧ್ಯಕ್ಷ ಭೋಜರಾಜ ಕರೂದಿ, ಶಾಸಕರಾದ ನೆಹರು ಓಲೆಕಾರ, ಸುರೇಶಗೌಡ ಪಾಟೀಲ, ಜಿ.ಶಿವಣ್ಣ, ವಿ.ಎಸ್. ಪಾಟೀಲ, ಜಿ.ಪಂ ಅಧ್ಯಕ್ಷ ಮಂಜುನಾಥ ಓಲೆಕಾರ, ಮಾಜಿ ಶಾಸಕ ಯು.ಬಿ. ಬಣಕಾರ ಮುಂತಾದವರು ಅತಿಥಿಗಳಾಗಿದ್ದರು.ಬಿ.ಎಸ್. ಅಕ್ಕಿವಳ್ಳಿ ಸ್ವಾಗತಿಸಿದರು. ಎ.ಎಸ್.ಬಳ್ಳಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲ್ಯಾಣಕುಮಾರ ಶೆಟ್ಟರ, ಪಿ.ವೈ. ಗುಡಗುಡಿ ನಿರೂಪಿಸಿದರು.ಇದಕ್ಕೂ ಮುನ್ನ ಇಲ್ಲಿನ ಶ್ರೀ ಕುಮಾರೇಶ್ವರ ಬಿ.ಎಡ್. ಕಾಲೇಜಿನಲ್ಲಿ ಸಚಿವ ಉದಾಸಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡರು.ಸಚಿವ ಸಿ.ಎಂ.ಉದಾಸಿ ಅವರ 75 ನೇ ಜನ್ಮದಿನದ ನಿಮಿತ್ತ ಅವರ ಅಭಿಮಾನಿಗಳು ನಡೆಸಿದ ರಕ್ತದಾನ ಶಿಬಿರದಲ್ಲಿ 75 ಅಭಿಮಾನಿಗಳು ರಕ್ತ ದಾನ ಮಾಡಿದರು. ಅವರಿಗೆ ಮಾಜಿ ಸಚಿವ ಎಸ್.ಎಸ್. ಪಾಟೀಲ ಧನ್ಯತಾ ಪತ್ರ ವಿತರಿಸಿದರು. ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸೆಗೊಳಗಾದವರಿಗೆ ಉಚಿತ ಕನ್ನಡಕಗಳನ್ನು ಸಚಿವ ಕಾಗೇರಿ ವಿತರಿಸಿದರು. 220 ಜನರ ಉಚಿತ ತಪಾಸಣೆ ಹಾಗೂ 317 ಜನರಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಯಿತು.ತಾಲ್ಲೂಕಿನ ಎಲ್ಲ ಅಂಗನವಾಡಿ ಮಕ್ಕಳಿಗಾಗಿ 1200 ಕುರ್ಚಿಗಳನ್ನು ಪ್ರಹ್ಲಾದ ಜೋಷಿ ವಿತರಿಸಿದರು. ಪುರಸಭೆಯಿಂದ 250 ಜನರಿಗೆ ನಿವೇಶನ ಪಟ್ಟಾಗಳನ್ನು ಸಾಂಕೇತಿಕವಾಗಿ ಸಚಿವ ಬಸವರಾಜ ಬೊಮ್ಮಾಯಿ ವಿತರಿಸಿದರು.ಉಚಿತ ಹೃದಯ ರೋಗ ತಪಾಸಣಾ ಶಿಬಿರದಲ್ಲಿ 317 ಜನರ ಪರೀಕ್ಷೆ ನಡೆಯಿತು. 31 ಜನರನ್ನು ಹೆಚ್ಚುವರಿ ಚಿಕಿತ್ಸೆಗೆ ಕಳಿಸಲಾಯಿತು. 11 ಜನರಿಗೆ ಉಚಿತ ಶಸ್ತ್ರ ಚಿಕಿತ್ಸೆಗೆ ಅವಕಾಶ ಮಾಡಿಕೊಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry