ಮಂಗಳವಾರ, ಜೂನ್ 15, 2021
21 °C

ಉದ್ಘಾಟನೆಗೊಂಡರೂ ಆರಂಭಗೊಳ್ಳದ ಆಸ್ಪತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಗಿರಿ: ಪಟ್ಟಣದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ 100 ಹಾಸಿಗೆ ಸಾಮರ್ಥ್ಯವುಳ್ಳ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯನ್ನು ಕಳೆದ ಎರಡು ತಿಂಗಳ ಹಿಂದೆ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ಉದ್ಘಾಟನೆ ಮಾಡಿ ಹೋದರೂ ಸಾರ್ವಜನಿಕರಿಗೆ ಚಿಕಿತ್ಸೆ ಪಡೆಯುವ ಅವಕಾಶ ನೀಡದೇ ವಿಳಂಬ ಮಾಡುತ್ತಿದ್ದಾರೆ ಸಾರ್ವಜನಿಕರು ದೂರಿದ್ದಾರೆ.್ಙ 3.25 ಕೋಟಿ ವೆಚ್ಚದಲ್ಲಿ ಎರಡು ಹಂತಸ್ತುಗಳಿರುವ ಅತ್ಯಾಧುನಿಕ ಕಟ್ಟಡವನ್ನು ನಿರ್ಮಿಸಲಾಗಿದೆ. ಉದ್ಘಾಟನೆ ಆದರೂ ಇನ್ನು ಕಟ್ಟಡದ ಕಾಮಗಾರಿ ಸಂಪೂರ್ಣ ಮುಕ್ತಾಯ ಗೊಂಡಿರುವುದಿಲ್ಲ. ಇದುವರೆಗೆ ಕೇವಲ 50 ಹಾಸಿಗೆಗಳು ಮಾತ್ರ ಈ ಕೇಂದ್ರಕ್ಕೆ ಸರಬರಾಜು ಆಗಿವೆ. ಆದರೆ ಅಗತ್ಯವಾದ ಯಾವುದೇ ಪೀಠೋಪಕರಣ ಹಾಗೂ ಯಂತ್ರಗಳು ಸರಬರಾಜು ಆಗಿರುವುದಿಲ್ಲ. ಅಷ್ಟೇ ಅಲ್ಲದೇ ಆರೋಗ್ಯ ಇಲಾಖೆಯವರಿಗೆ ಗುತ್ತಿಗೆದಾರರು ಈ ಕಟ್ಟಡವನ್ನು ಹಸ್ತಾಂತರ ಮಾಡಿರುವುದಿಲ್ಲ.ಈಗಿರುವ ಹಳೆಯ ಆಸ್ಪತ್ರೆಯಲ್ಲಿ ಕೇವಲ ಐದಾರು ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ನಿರ್ಮಾಣಗೊಂಡಿರುವ ಹೊಸ ಆಸ್ಪತ್ರೆಗೆ ಒಟ್ಟು 13 ವೈದ್ಯರು ಬೇಕಾಗುತ್ತದೆ. ಇದು ಸಾಧ್ಯವೇ ಎಂಬುದು ಯಕ್ಷ ಪ್ರಶ್ನೆಯಾಗಿ ಸಾರ್ವಜನಿಕರಲ್ಲಿ ಮನೆ ಮಾಡಿಕೊಂಡಿದೆ.ಪ್ರಸ್ತುತ ಈಗಿರುವ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದ ರೋಗಿಗಳು  ದಾವಣಗೆರೆ ಹಾಗೂ ಶಿವಮೊಗ್ಗ ಆಸ್ಪತ್ರೆಗಳಿಗೆ ಚಿಕಿತ್ಸೆ ಪಡೆಯಲು ಹೋಗುವಂತಾಗಿದೆ. ಇದರಿಂದ ಬಡವರಿಗೆ ತುಂಬಾ ತೊಂದರೆಯಾಗುತ್ತಿದೆ.ಆದಷ್ಟು ಶೀಘ್ರದಲ್ಲಿ 100 ಹಾಸಿಗೆ ಸಾಮರ್ಥ್ಯವುಳ್ಳ ಆಸ್ಪತ್ರೆಯನ್ನು ಸಾರ್ವಜನಿಕರ ಉಪಯೋಗಕ್ಕೆ ದೊರೆಯಲು ಆರಂಭಿಸಬೇಕೆಂದು ಪಟ್ಟಣದ ಪುರುಷೋತ್ತಮ, ಭರತ್‌ಕುಮಾರ್, ತಾರೇಶ್ ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.