ಉದ್ದೀಪನ ಮದ್ದು ಪರೀಕ್ಷೆ: ಧರಂಭೀರ್ ಅಮಾನತು

ನವದೆಹಲಿ: ಉದ್ದೀಪನ ಮದ್ದು ಸೇವನೆ ಆರೋಪ ಸಾಬೀತುಗೊಂಡ ಕಾರಣ ಅಥ್ಲೀಟ್ ಧರಂಭೀರ್ ಸಿಂಗ್ ರಿಯೋ ಒಲಂಪಿಕ್ಸ್ ನಿಂದ ಹೊರಬಿದ್ದಿದ್ದಾರೆ.
ಪುರುಷರ ಓಟದ ವಿಭಾಗದಲ್ಲಿ 36 ವರ್ಷಗಳ ಬಳಿಕ ಒಲಂಪಿಕ್ಸ್ ಗೆ ಆಯ್ಕೆಯಾದ ಮೊದಲ ಭಾರತೀಯ ಅಥ್ಲೀಟ್ ಎನಿಸಿಕೊಂಡಿದ್ದ ಇವರು ಒಲಂಪಿಕ್ಸ್ ನಿಂದ ಹೊರಬಿದ್ದ ಸಂಗತಿಯನ್ನು ರಾಷ್ಟ್ರೀಯ ಉದ್ದೀಪನ ಮದ್ದು ನಿಯಂತ್ರಣ ಸಂಸ್ಥೆ ತಿಳಿಸಿದೆ.
ವಿಚಾರಣೆಯ ಬಳಿಕ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ, ತಾವು ಒಲಂಪಿಕ್ಸ್ ಗೆ ತೆರಳದಿರುವ ವಿಷಯವನ್ನು ಸ್ವತಃ ಸಿಂಗ್ ಖಚಿತಪಡಿಸಿದ್ದಾರೆ.
ಜುಲೈನಲ್ಲಿ ನಡೆದಿದ್ದ ಒಲಂಪಿಕ್ಸ್ ಅರ್ಹತಾ ಸುತ್ತಿನ ಪ್ರದರ್ಶನದ ವೇಳೆ ಧರಂಭೀರ್ ಸಿಂಗ್ 200ಮೀ. ಓಟವನ್ನು ಕೇವಲ 20.45 ಸೆಕೆಂಡ್ ಗಳಲ್ಲಿ ಕ್ರಮಿಸಿ ರಿಯೊ ಒಲಂಪಿಕ್ಸ್ ಗೆ ಆಯ್ಕೆಯಾಗಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.