ಉದ್ದೀಪನ ಮದ್ದು: ಸಿರಿಯಾದ ಮಹಿಳಾ ಅಥ್ಲೀಟ್ ಅನರ್ಹ

ಸೋಮವಾರ, ಮೇ 27, 2019
33 °C

ಉದ್ದೀಪನ ಮದ್ದು: ಸಿರಿಯಾದ ಮಹಿಳಾ ಅಥ್ಲೀಟ್ ಅನರ್ಹ

Published:
Updated:

ಲಂಡನ್ (ಎಎಫ್‌ಪಿ): ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದ ಸಿರಿಯಾದ ಮಹಿಳಾ ಅಥ್ಲೀಟ್ ಗಫ್ರಾನ್ ಅಲ್‌ಮೊಹಮ್ಮದ್ ಅವರನ್ನು ಲಂಡನ್ ಒಲಿಂಪಿಕ್ಸ್ ಕೂಟದಿಂದ ಅನರ್ಹಗೊಳಿಸಲಾಗಿದೆ.ಆಗಸ್ಟ್ 3 ರಂದು ಅವರನ್ನು ಉದ್ದೀಪನ ಮದ್ದು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರು ನಿಷೇಧಿತ ಮದ್ದು `ಮಿಥೈಲ್‌ಹೆಕ್ಸಾನಿಮೈನ್~ ಸೇವಿಸಿರುವುದು ಸಾಬೀತಾಗಿದೆ.ಆಗಸ್ಟ್ 5 ರಂದು ನಡೆದಿದ್ದ ಮಹಿಳೆಯರ 400 ಮೀ. ಹರ್ಡಲ್ಸ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಗಫ್ರಾನ್ ಎರಡನೇ ಹೀಟ್ಸ್‌ನಲ್ಲಿ ಎಂಟನೇ ಸ್ಥಾನ ಪಡೆದಿದ್ದರು.`ಒಲಿಂಪಿಕ್ಸ್ ಕೂಟದ 400 ಮೀ. ಹರ್ಡಲ್ಸ್ ಸ್ಪರ್ಧೆಯಿಂದ ಗಫ್ರಾನ್ ಅವರನ್ನು ಅನರ್ಹಗೊಳಿಸಲಾಗಿದೆ. ಅವರು ಈ ಸ್ಪರ್ಧೆಯ ಹೀಟ್ಸ್‌ನಲ್ಲಿ ಎಂಟನೇ ಸ್ಥಾನ ಪಡೆದಿದ್ದರು~ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಶನಿವಾರ ಹೇಳಿಕೆಯಲ್ಲಿ ತಿಳಿಸಿದೆ.ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಹಲವು ಅಥ್ಲೀಟ್‌ಗಳನ್ನು ಈಗಾಗಲೇ ಕೂಟದಿಂದ ಅನರ್ಹಗೊಳಿಸಲಾಗಿದೆ. ಅವರ ಸಾಲಿಗೆ ಗಫ್ರಾನ್ ಕೂಡಾ ಸೇರಿದ್ದಾರೆ. ಅಮೆರಿಕದ ನಡಿಗೆ ಸ್ಪರ್ಧಿ ಅಲೆಕ್ಸ್ ಶ್ವಾಜೆರ್, ಮೊರಕ್ಕೊದ 1,500 ಮೀ. ಓಟಗಾರ ಅಮಿನ್ ಲಲೂ, ರಷ್ಯಾದ ಸೈಕ್ಲಿಸ್ಟ್ ವಿಕ್ಟೋರಿಯಾ ಬರನೋವಾ, ಉಜ್ಬೆಕಿಸ್ತಾನದ ಜಿಮ್ನಾಸ್ಟ್ ಲೂಜಿಯಾ ಗಲಿಯುಲಿನಾ ಮತ್ತು ಅಲ್ಬೇನಿಯದ ವೇಟ್‌ಲಿಫ್ಟರ್ ಹೈಸೆನ್ ಪುಲಾಕು ಅವರು ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದು ಅನರ್ಹಗೊಂಡಿರುವ ಅಥ್ಲೀಟ್‌ಗಳಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry