ಶನಿವಾರ, ಮೇ 15, 2021
24 °C

ಉದ್ದು ಬೆಳೆಗೆ ಕಾಂಡ ನೊಣದ ಬಾಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನವಾಡ: ಜಿಲ್ಲೆಯಲ್ಲಿ ಸೋಯಾ, ಅವರೆ ಮತ್ತು ಉದ್ದು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಮಳೆ ಆರಂಭದೊಂದಿಗೆ ಕೆಲವೆಡೆ ಬಿತ್ತನೆಯಾಗಿದ್ದರೆ, ಇನ್ನೂ ಕೆಲವೆಡೆ ಬಿತ್ತನೆ ಆಗಬೇಕಾಗಿದೆ. ಕಳೆದ ಮೂರು ವರ್ಷಗಳಲ್ಲಿ ಈ ಬೆಳೆಗಳಿಗೆ ಕಾಂಡನೊಣದ ಬಾಧೆ ಕಾಣಿಸಿಕೊಳ್ಳುತ್ತಿದ್ದು, ಜಾಗೃತರಾಗಿರಲು ಕೃಷಿ ವಿಜ್ಞಾನ ಕೇಂದ್ರ ಸಲಹೆ ಮಾಡಿದೆ.ಈಗ ಆರಂಭದಲ್ಲಿ ಬಿತ್ತನೆ ಮಾಡಿದ ಉದ್ದು, ಸೋಯಾ ಅವರೆ 8 ರಿಂದ 10 ದಿವಸಗಳ ಅವಧಿಯದಾಗಿದೆ.  ಸಾಮಾನ್ಯವಾಗಿ ಬಿತ್ತನೆಯಾದ 10-15 ದಿನದ ಬೆಳೆಯಲ್ಲಿ ಕೀಟಬಾಧೆ ಕಾಣಿಸಿಕೊಳ್ಳಲಿದೆ. ನೊಣದ ಜಾತಿಗೆ ಸೇರಿದ ಈ ಕೀಟ ಮೊಳಕೆ ಒಡೆದ 10 ರಿಂದ 20 ದಿನಗಳ ಅವಧಿಯ ಒಳಗೆ ಮೃದುವಾದ ಕಾಂಡದ ಮೇಲೆ ಮೊಟ್ಟೆ ಇಡುತ್ತದೆ.ಮೊಟ್ಟೆಯಿಂದ ಹೊರ  ಬರುವ ಮರಿ ಹುಳು ಎಲೆಗಳ ಮೇಲೆ ಹಾವಿನ ಆಕೃತಿಯಲ್ಲಿ ಬಾಧೆ ಉಂಟು ಮಾಡುತ್ತದೆ, ನಂತರ ಕಾಂಡದೊಳಗೆ ಸೇರಿ ಅಂಗಾಂಶಗಳನ್ನು ತಿಂದು ನಾಶ ಮಾಡುತ್ತದೆ ಬೆಳೆ 40 ರಿಂದ 45 ದಿವಸಗಳ ಅವಧಿಯದಿದ್ದಾಗ ಕಾಂಡ ಸೀಳಿ ನೋಡಿದಾಗ ಒಳಗಡೆ ಕೀಟವು ತಿಂದು ಹಿಕ್ಕೆ ಹಾಕಿರುವುದನ್ನುಕಾಣಬಹುದು.ಸಾಮಾನ್ಯವಾಗಿ ಕಾಂಡ ನೊಣದ ಬಾಧೆ ಒಂದು ತಿಂಗಳವರೆಗೆ ಕಂಡು ಬರುವುದಿಲ್ಲ. ನಂತರದ ದಿನಗಳಲ್ಲಿ ಮುಖ್ಯ ಕಾಂಡ ಒಣಗುವುದನ್ನು ಕಾಣುತ್ತದೆ.

ಅನಂತರ ಬಾಧಿತ ಗಿಡವು ಅತ್ಯಂತ ಕಡಿಮೆ ಅಥವಾ ಕಾಯಿ ಕಟ್ಟದೆ ಇರುವ ಸಾಧ್ಯತೆಗಳು ಇರುತ್ತವೆ. ಕಟ್ಟಿದ ಕಾಯಿಗಳೂ ಸಹ ಟೊಳ್ಳಾಗಿರುತ್ತವೆ.ಈ ಪಿಡುಗನ್ನು ತಡೆಯಲು ಕೀಟನಾಶಕಗಳಾದ ಥೈಯೋಮೆಥಾಕ್ಸಾಮ್ 25ಡಬ್ಲ್ಯೂಜಿ 0.3 ಗ್ರಾಂ. ಅಥವಾ ಇಮಿಡಾಕ್ಲೊಪ್ರಿಡ್ 0.2 ಮಿ.ಲೀ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ  ಬೆಳೆಗಳಿಗೆ ಸಿಂಪಡಿಸಲು ಕೃಷಿಕರು ಒತ್ತು ನೀಡಬೇಕು ಎಂದು ಕೇಂದ್ರದ ನಿರ್ದೇಶಕರು ಹೇಳಿಕೆಯಲ್ಲಿ ಸಲಹೆ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.