ಬುಧವಾರ, ನವೆಂಬರ್ 13, 2019
22 °C

ಉದ್ಯಮವಾದ ಚುನಾವಣೆ, ರಾಜಕೀಯ: ಪಾಣಿ

Published:
Updated:

ಗುಲ್ಬರ್ಗ: ಜನ ಸೇವೆ, ಸಮಾಜ ಸೇವೆ ಹೆಸರಿನಲ್ಲಿ ಮತ ಕೇಳುವ ರಾಜಕಾರಣಿಗಳು ರಾಜಕೀಯವನ್ನು ಉದ್ಯಮವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ಹಕ್ಕು ಒಕ್ಕೂಟದ ರಾಜ್ಯಾಧ್ಯಕ್ಷ ಜೆ.ಎಸ್. ಪಾಣಿ ವಿಷಾದ ವ್ಯಕ್ತಪಡಿಸಿದರು.`ನಾಡು ಎದುರಿಸುತ್ತಿರುವ ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಮತದಾರರು ಕೂಡಲೇ ಜಾಗೃತರಾಗಬೇಕಾಗಿದೆ' ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಚುನಾವಣೆಯಲ್ಲಿ ರಾಜಕಾರಣಿಗಳು ಮತದಾರರಿಗೆ ಹಣ-ಹೆಂಡದ ಆಮಿಷವೊಡ್ಡಿ ಮತ ಪಡೆಯುತ್ತಿರುವುದರಿಂದ, ಮುಂದೆ ಆಡಳಿತ ಯಂತ್ರ ಭ್ರಷ್ಟಗೊಳ್ಳತ್ತಿದೆ ಎಂದರು. ಅಧಿಕಾರದ ದುರಾಸೆಯಿಂದ ಎಲ್ಲ ರಾಜಕಾರಣಿಗಳು ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತಿದ್ದಾರೆ. ಈ ಕುರಿತು ಪ್ರಶ್ನಿಸಿದರೆ ಕಾರ್ಯಕರ್ತ ಇಚ್ಛೆಯಂತೆ ನಡೆದುಕೊಳ್ಳುತ್ತೇವೆ ಎಂದು ಉತ್ತರಿಸುತ್ತಾರೆ ಎಂದರು.ಸಾರ್ವಜನಿಕರ ಮತ ಪಡೆದು ಚುನಾಯಿತರಾದ ಇವರಿಗೆ ಕೇವಲ ತಮ್ಮ ಕಾರ್ಯಕರ್ತರು ಮಾತ್ರ ಮುಖ್ಯವೇ? ಎಂದು ಪ್ರಶ್ನಿಸಿದ ಅವರು, ಕಾರ್ಯಕರ್ತರ ಮೂಲಕ ಬಂಡವಾಳ ಹಾಕಿ ಹಣ ಮಾಡುವ ರಾಜಕಾರಣಿಗಳಿಗೆ ಈ ಬಾರಿ ಮತದಾರರು ತಕ್ಕ ಪಾಠ ಕಲಿಸಬೇಕಾಗಿದೆ ಎಂದರು.ರಾಜ್ಯದಲ್ಲಿ ರಚಿಸಿದ ಆರ್‌ಟಿಐ ಕಾರ್ಯಕರ್ತರ ಒಕ್ಕೂಟದಿಂದ ಮುಂದಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಆರ್‌ಟಿಐನಲ್ಲಿರುವ ಕಾರ್ಯಕರ್ತರು ದುಡ್ಡು ಗಳಿಸುವ ಕಾರ್ಯಕ್ಕೆ ಕೈಹಾಕದಂತೆ ಮನವರಿಕೆ ಮಾಡಲಾಗುತ್ತದೆ ಎಂದು ಹೇಳಿದರು.ಈಗಾಗಲೇ ರಾಜ್ಯ ಮಟ್ಟದಲ್ಲಿ ಸಲಹಾ ಸಮಿತಿ ರಚಿಸಲಾಗಿದೆ. ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ, ಪ್ರೊ. ಕೆಂಪೇಗೌಡ, ಎಚ್.ಟಿ.ರಮೇಶ ಮತ್ತಿತರರು ಸಮಿತಿಯಲ್ಲಿ ಇದ್ದಾರೆ ಎಂದು ಅವರು ತಿಳಿಸಿದರು.ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಉಮಾಪತಿ, ಜಿಲ್ಲಾಧ್ಯಕ್ಷ ಸಿದ್ರಾಮಯ್ಯ ಹಿರೇಮಠ, ಮಾಣಿಕರಾವ, ವಿಜಯಕುಮಾರ ಚಿಮಕೋಡ್, ಸಿ.ಎನ್. ಬಾಬಲ್‌ಗಾಂವ, ಶಿವಕುಮಾರ ತಡಕಲ್, ಅಬ್ದುಲ್ ಮತ್ತಿತರರು ಇದ್ದರು.

ಪ್ರತಿಕ್ರಿಯಿಸಿ (+)