ಶುಕ್ರವಾರ, ಅಕ್ಟೋಬರ್ 18, 2019
28 °C

ಉದ್ಯಮ: ಹುಬ್ಬಳ್ಳಿಗೆ ವಿಪುಲ ಅವಕಾಶ

Published:
Updated:

ಹುಬ್ಬಳ್ಳಿ: `ರಾಜ್ಯದ ಉತ್ತರ ಭಾಗದ ಕೇಂದ್ರ ಸ್ಥಾನ ಹುಬ್ಬಳ್ಳಿಯಲ್ಲಿ ಕೈಗಾರಿ ಕೆಗಳ ಸ್ಥಾಪನೆಗೆ ವಿಪುಲ ಅವಕಾಶಗಳಿವೆ. ವ್ಯಕ್ತಿಗತವಾಗಿ ಉದ್ಯಮಗಳನ್ನು ನಡೆಸುವ ಸಾಂಪ್ರದಾಯಿಕ ಮನಃಸ್ಥಿತಿಗೆ ತಿಲಾಂಜಲಿ ಇಡಿ. ಉದ್ಯಮಗಳನ್ನು ಸಂಸ್ಥೆಗಳನ್ನಾಗಿ ಬೆಳೆಸಿ. ಆಗ ಇಲ್ಲಿನ ಉದ್ಯಮಗಳ ವಹಿವಾಟೂ ಹೆಚ್ಚುತ್ತದೆ. ಜೊತೆಗೆ ಹೊಸ ಉದ್ಯಮಗಳೂ ಬರುತ್ತವೆ.~ -ಹುಬ್ಬಳ್ಳಿ ಮತ್ತು ಸುತ್ತಮುತ್ತ ಉದ್ಯಮ ಕ್ಷೇತ್ರದ ಬೆಳವಣಿಗೆಗೆ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರು ನೀಡಿದ ಮುಖ್ಯ ಟಿಪ್ಸ್ (ಸಲಹೆ) ಇದು. ದೇಶ ಪಾಂಡೆ ಪ್ರತಿಷ್ಠಾನ ಶನಿವಾರ ಇಲ್ಲಿ ಉದ್ಯ ಮಿಗಳಿಗಾಗಿ ಏರ್ಪಡಿಸಿದ್ದ `ಟೈಕಾನ್ ಹುಬ್ಬಳ್ಳಿ-2012~ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಅವರು ಕೈಗಾರಿಕೆಗಳ ಬೆಳವಣಿಗೆ ಹಾಗೂ ನಿರ್ವಹಣೆ ಕುರಿತು ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಂಡರು.`ಯಾವುದೇ ಉದ್ಯಮ ಇರಲಿ. ಅದನ್ನು ಆರ್ಥಿಕವಾಗಿ ಬೆಳೆಸುವ ದೊಡ್ಡ ಕನಸು ಕಾಣಬೇಕು. ಕನಸು ನನಸಾಗಲು ನಿಮ್ಮ ಉದ್ಯಮವನ್ನು ಸಂಸ್ಥೆಯನ್ನಾಗಿ ಮಾಡಬೇಕು. ನಿಮ್ಮ ನಂತರದ ಪೀಳಿಗೆ ಯಲ್ಲಿ ಹೊಣೆ ಹೊರುವ ಯುವಕರ ತಂಡವೊಂದನ್ನು ಗುರುತಿಸಿ ಇಟ್ಟು ಕೊಂಡಿರಬೇಕು. ಈ ತಂಡದಲ್ಲಿ ನಿಮ ಗಿಂತ ಹೆಚ್ಚು ಸಾಮರ್ಥ್ಯ ಇರುವ ವ್ಯಕ್ತಿಗ ಳಿರಬೇಕು. ಅವರಲ್ಲಿ ಒಬ್ಬರು ನಿಮ್ಮ ನಂತರದ ನಾಯಕರಾಗಬೇಕು. ವೈಯ ಕ್ತಿಕ ಅಹಂ, ಹೊಟ್ಟೆಕಿಚ್ಚು ಇತ್ಯಾದಿ ಗಳನ್ನು ಬಿಟ್ಟು, ಇಂತಹ ಒಂದು ದೂರ ದೃಷ್ಟಿಯನ್ನು ಇಟ್ಟುಕೊಂಡರೆ ಉದ್ಯಮ ಕ್ಷೇತ್ರ ಗಗನದ ಎತ್ತರಕ್ಕೆ ಬೆಳೆಯಲು ಖಂಡಿತ ಸಾಧ್ಯವಿದೆ~ ಎಂದು ಅವರು ಹೇಳಿದರು.`ಹೀಗೆ ಹೊಸ ನಾಯಕನನ್ನು ಗುರುತಿಸಿ ಜವಾಬ್ದಾರಿಗಳನ್ನು ಕೊಟ್ಟಾಗ ಆತ ಕೆಲವೊಮ್ಮೆ ವಿಫಲನಾಗಬಹುದು. ಅಥವಾ ಆತ ಯಾವುದೋ ಒಂದು ಜವಾಬ್ದಾರಿಯನ್ನು ನಿಮಗೆ ತೃಪ್ತಿ ಯಾಗುವಂತೆ ನಿರ್ವಹಣೆ ಮಾಡದೇ ಇರಬಹುದು. ಆದರೂ ಆತನನ್ನು ಸಾರ್ವಜನಿಕವಾಗಿ ದೂಷಣೆ ಮಾಡದೇ ಅವನನ್ನು ಸಮರ್ಥನೆ ಮಾಡಿ ಕೊಳ್ಳಬೇಕು. ಖಾಸಗಿಯಾಗಿ ಆತನನ್ನು ಕರೆದು ಆತನ ವೈಫಲ್ಯ ಹಾಗೂ ತಪ್ಪನ್ನು ಹೇಳಬೇಕು~ ಎಂದು ಅವರು ಉದ್ಯ ಮಗಳ ಮಾಲೀಕರಿಗೆ ಕಿವಿಮಾತು ಹೇಳಿದರು.`ನಿಮ್ಮ ಉದ್ಯಮದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಪದೇಪದೇ ಟೀಕಿಸ ಬೇಡಿ. ಐವತ್ತು ಬಾರಿ ಟೀಕಿಸುವುದರಿಂದ ಐವತ್ತೊಂದನೇ ಸಲ ಹೊಸ ಆಲೋಚನೆಗಳು ಹೊರಹೊಮ್ಮಲು ಸಾಧ್ಯವೇ ಇಲ್ಲ. ಏಕೆಂದರೆ ನಮ್ಮನ್ನು ಹೊರಗಿನವರು ಬಹಳ ಶತಕಗಳ ಕಾಲ ಆಳಿದ್ದಾರೆ. ಜನಾಂಗೀಯವಾಗಿ ನೋಡಿ ದಾಗ ಇದು ಮನಃಸ್ಥಿತಿ ಮೇಲೆ ಪರಿ ಣಾಮ ಬೀರಿದೆ. ಆದ್ದರಿಂದ ನಿಮ್ಮ ಕಚೇರಿಯಲ್ಲಿ ಮುಕ್ತ ವಾತಾವರಣ ಇರು ವಂತೆ ನೋಡಿಕೊಳ್ಳಬೇಕು~ ಎಂಬ ಸಲಹೆಯನ್ನು ಅವರು ಮಾಡಿದರು.`ನಿತ್ಯವೂ ಹೊಸ ಚಿಂತನೆ, ನೀವು ನಡೆ ಸುತ್ತಿರುವ ಉದ್ಯಮದ ಕುರಿತು ಅಪಾರ ಬದ್ಧತೆ, ಕ್ರಿಯಾಶೀಲತೆ, ನಿಮ್ಮ ಜೊತೆಗೆ ಕೆಲಸ ಮಾಡುವ ಎಲ್ಲ ಸಿಬ್ಬಂದಿಯ ಜೊತೆಗೆ ಸೌಹಾರ್ದ ವರ್ತನೆ ಹಾಗೂ ಆತ್ಮನಿರೀಕ್ಷಣೆಯಿಂದ ಆರ್ಥಿಕವಾಗಿ ಏಳ್ಗೆ ಸಾಧ್ಯ; ಹಾಗೆಯೇ ಉದ್ಯಮಗಳು ಬಹುದೀರ್ಘ ಕಾಲ ಉಳಿಯಲು ಸಾಧ್ಯ~ ಎಂದು ಅವರು ಅಭಿಪ್ರಾಯಪಟ್ಟರು.ಸ್ಥಳೀಯವಾಗಿ ಅಗತ್ಯ ಇರುವ ಹಾಗೂ ಯಾರೂ ಕಾಲಿಡದ ಕ್ಷೇತ್ರ ಗಳನ್ನು ಗುರುತಿಸಿ ಉದ್ಯಮಗಳನ್ನು ಆರಂಭಿಸುವಂತೆ ನಾರಾಯಣಮೂರ್ತಿ ಯುವ ಸಮುದಾಯಕ್ಕೆ ಕರೆ ನೀಡಿದರು. ಹೊಸ ಕ್ಷೇತ್ರಗಳಿಗೆ ಕಾಲಿಟ್ಟಾಗ ಮೊದಲ ಕೆಲವು ವರ್ಷಗಳ ಕಾಲ ಕಷ್ಟ ಎದುರಿ ಸಬೇಕಾಗುತ್ತದೆ.ಆದರೆ ನೀವು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳು ವುದಿಲ್ಲ ಎಂಬುದು ಖಾತರಿಯಾದರೆ ಗ್ರಾಹಕ ಸಮುದಾಯ ನಿಮ್ಮತ್ತ ತಿರು ಗುತ್ತದೆ. ನೀವು ನಿಗದಿ ಮಾಡಿದ ಬೆಲೆ ಯನ್ನು ಗ್ರಾಹಕ ಕೊಟ್ಟೇಕೊಡುತ್ತಾನೆ ಎಂದು ಅವರು ಹುರಿದುಂಬಿಸಿದರು.`ಸಹಸ್ರಾರು ಕೋಟಿ ವಹಿವಾಟು, ಲಾಭ ಮಾಡಲು ಇನ್ಫೋಸಿಸ್ ಎರಡು ದಶಕಗಳಿಗೂ ಹೆಚ್ಚು ಅವಧಿಯನ್ನು ತೆಗೆದುಕೊಂಡಿತು. ಅದು ಆಗಿನ ಕಾಲದ ವಿದ್ಯಮಾನ. ಈಗ ಇಂತಹ ಒಂದು ದೊಡ್ಡ ಸಂಸ್ಥೆಯನ್ನು ಯಾರಾದರೂ ಆರಂಭಿಸಿ ವ್ಯವಸ್ಥಿತ ತಂಡವಾಗಿ ದಕ್ಷತೆ- ಬದ್ಧತೆಯಿಂದ ದುಡಿದರೆ ಕೆಲವೇ ವರ್ಷ ಗಳಲ್ಲಿ ಲಾಭ ಬರಲಾರಂಭಿಸುತ್ತದೆ~ ಎಂದು ನಾರಾಯಣಮೂರ್ತಿ ಉದ್ಯಮಿ ಯೊಬ್ಬರ ಪ್ರಶ್ನೆಗೆ ಉತ್ತರಿಸಿದರು.ಹುಬ್ಬಳ್ಳಿಯ ಉದ್ಯಮಿಗಳಾದ ಸುನಿಲ್ ಶೆಟ್ಟಿ, ಶರಣಪ್ಪ ಹಗೆದಾರ, ವಿಜಯ್ ಮಾನೆ, ಲಕ್ಷ್ಮಿ ರಸಾಲಕರ್, ವಿವೇಕ್ ಪವಾರ್ ಅವರನ್ನು ದೇಶ ಪಾಂಡೆ ಪ್ರತಿಷ್ಠಾನದ ಪರವಾಗಿ ನಾರಾ ಯಣಮೂರ್ತಿ ಸನ್ಮಾನಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಡಾ. ಗುರುರಾಜ ದೇಶಪಾಂಡೆ ಉಪಸ್ಥಿತರಿದ್ದರು.

Post Comments (+)