ಉದ್ಯಾನದ ಜಾಗ ಉಳಿಸಲು ಹೈಕೋರ್ಟ್ ಆದೇಶ

7

ಉದ್ಯಾನದ ಜಾಗ ಉಳಿಸಲು ಹೈಕೋರ್ಟ್ ಆದೇಶ

Published:
Updated:

ಬೆಂಗಳೂರು: ಉತ್ತರಹಳ್ಳಿ ಹೋಬಳಿಯ ಕೊತ್ತನೂರು ಗ್ರಾಮದಲ್ಲಿನ ಸರ್ವೇ ನಂ.111ರಲ್ಲಿನ ಜಾಗವನ್ನು ಉದ್ಯಾನವನ್ನಾಗಿ ಉಳಿಸಿಕೊಳ್ಳುವಂತೆ ಹೈಕೋರ್ಟ್ ಸೋಮವಾರ ಸೂಚಿಸಿದೆ.ಸುಮಾರು 25ಗುಂಟೆ ಸರ್ಕಾರಿ ಭೂಮಿಯಲ್ಲಿ ಅಕ್ರಮ ಕಟ್ಟಡ ನಿರ್ಮಾಣಗೊಳ್ಳುತ್ತಿರುವುದಾಗಿ ದೂರಿ ಬಿ.ದೇವರಾಜ ಎನ್ನುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.ಸುಮಾರು ಎರಡು ಕೋಟಿ ರೂಪಾಯಿ ಬೆಲೆ ಬಾಳುವ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದರೂ ಬಿಬಿಎಂಪಿ ಮೌನ ತಾಳಿದೆ ಎಂದು ಅರ್ಜಿದಾರರ ಪರ ವಕೀಲ ಎನ್.ಶ್ರೀರಾಮ ರೆಡ್ಡಿ ಕೋರ್ಟ್ ಗಮನ ಸೆಳೆದರು.ಇದನ್ನು ಪೀಠ ಮಾನ್ಯ ಮಾಡಿದೆ. ವಿವಾದದ ಕುರಿತು ಸಂಬಂಧಿತ ಅಧಿಕಾರಿಗಳ ಗಮನ ಸೆಳೆಯುವಂತೆ ಅರ್ಜಿದಾರರಿಗೆ ಸೂಚಿಸಿದ ನ್ಯಾಯಮೂರ್ತಿಗಳು, ಒಂದು ವೇಳೆ ಅಧಿಕಾರಿಗಳು ಸ್ಪಂದಿಸದೇ ಹೋದರೆ ಇದನ್ನು ಕೋರ್ಟ್ ಗಮನಕ್ಕೆ ತರುವಂತೆಯೂ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry