ಉದ್ಯಾನ ಜಾಗ: ರಕ್ಷಣೆಗೆ ಪುರಸಭೆ ನಿರಾಸಕ್ತಿ,ಜನರ ಆಸಕ್ತಿ

7

ಉದ್ಯಾನ ಜಾಗ: ರಕ್ಷಣೆಗೆ ಪುರಸಭೆ ನಿರಾಸಕ್ತಿ,ಜನರ ಆಸಕ್ತಿ

Published:
Updated:

ಕುಷ್ಟಗಿ: ಪಟ್ಟಣದ ಬುತ್ತಿಬಸವೇಶ್ವರ ನಗರದಲ್ಲಿನ ಯಂಕೂಬಾಯಿ ಟಕ್ಕಳಕಿ ಬಡಾವಣೆಯಲ್ಲಿನ ಪುರಸಭೆಗೆ ಸೇರಿದ ಜಾಗೆಗೆ ಸೋಮವಾರ ಅಲ್ಲಿಯ ನಿವಾಸಿಗಳು `ಮಾರುತಿ ಉದ್ಯಾನ~ ಎಂದು ಹೆಸರಿಸಿ ನಾಮಫಲಕವನ್ನು ಅನಾವರಣ ಮಾಡಿದರು.ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಸಾರ್ವಜನಿಕ ಸೇವೆಗೆ ಮೀಸಲಾಗಿರಿಸಿದ ಉದ್ಯಾನ ಜಾಗೆಯನ್ನು ಕೆಲ ಪಟ್ಟಭದ್ರರು ಅಷ್ಟೇ ಏಕೆ ಸ್ವತಃ ಪುರಸಭೆ ಸದಸ್ಯರೇ ಕಬಳಿಸುವುತ್ತಿದ್ದರೂ ಅದಕ್ಕೆ ಪರೋಕ್ಷ ಕುಮ್ಮಕ್ಕು ನೀಡುತ್ತಿರುವ ಪುರಸಭೆಯ ನಿರ್ಲಕ್ಷ್ಯಕ್ಕೆ ಬೇಸತ್ತು ಸಾರ್ವಜನಿಕರೇ ಉದ್ಯಾನ ಜಾಗೆ ರಕ್ಷಣೆಗೆ ಮುಂದಾಗಿರುವುದಕ್ಕೆ ಪಟ್ಟಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.ಅಲ್ಲದೇ ಯಂಕೂಬಾಯಿ ಲೇಔಟ್‌ನಲ್ಲಿರುವ ಈ ಸ್ಥಳವನ್ನೂ ಅಕ್ರಮ ನಿವೇಶನವನ್ನಾಗಿ ಪರಿವರ್ತಿಸುವ ಮೂಲಕ ಮಾರಾಟ ಮಾಡಲು ರೂಪಿಸಿದ್ದ ಸಂಚಿನ ಸುಳಿವು ಅರಿತ ನಾಗರಿಕರು ಈ ಕ್ರಮಕ್ಕೆ ಮುಂದಾಗಿದ್ದಲ್ಲದೇ ಸದರಿ ಜಾಗದಲ್ಲಿ ಉದ್ಯಾನ ನಿರ್ಮಾಣವಾಗಲೇ ಬೇಕು ಬೇರೆ ಚಟುವಟಿಕೆ ನಡೆದರೆ ಉಗ್ರ ಹೋರಾಟಕ್ಕೂ ಅಣಿಯಾಗುತ್ತೇವೆ ಎಂದು ಸಾರ್ವಜನಿಕರು ಎಚ್ಚರಿಸಿದರು.ಆದರೆ ಉದ್ಯಾನ ಫಲಕ ಅನಾವರಣಕ್ಕೆ ಸಾರ್ವಜನಿಕರ ಹೊರತಾಗಿ ಪುರಸಭೆಯ ಸದಸ್ಯರು ಅಥವಾ  ಯಾರೊಬ್ಬ ಸಿಬ್ಬಂದಿಯನ್ನೂ ಆಹ್ವಾನಿಸದೇ ಸರಳ ರೀತಿಯಲಿ ಕಾರ್ಯಕ್ರಮ ನೆರವೇರಿಸಿದ್ದು ಅಚ್ಚರಿ ಮೂಡಿಸಿತು.ಈ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳಾದ ಆದಯ್ಯ ನಂದಿಕೋಲಮಠ, ಎಸ್.ಎಚ್.ಹಿರೇಮಠ, ಶ್ರೀಧರ ಶೆಟ್ಟರ್, ತಿಮ್ಮಣ್ಣ ಮೆಣೆದಾಳ, ರಾಘವೇಂದ್ರ ದಾಸರ, ಬಾಳಪ್ಪ ಟೇಲರ ಹಾಗೂ ಇತರೆ ಮಹಿಳೆಯರೂ ಇದ್ದರು.ಇದೇ ಬಡಾವಣೆಯಲ್ಲಿ ಈಗಾಲೇ ಎರಡು ಉದ್ಯಾನಗ ಸ್ಥಳಗಳನ್ನು ಗುರುತಿಸಿದ ಜನತೆ ಅವುಗಳಿಗೆ ಪುರಸಭೆ ಬದಲು ತಾವೇ ನಾಮಕರಣ ಮಾಡುವ ಮೂಲಕ ಅಳಿದುಳಿದ ಸರ್ಕಾರದ ಆಸ್ತಿಯ ರಕ್ಷಣೆಗೆ ಮುಂದಾಗಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry