ಬುಧವಾರ, ಜುಲೈ 15, 2020
27 °C

ಉದ್ಯಾನ ನಿರ್ಮಾಣಕ್ಕೆ ಭೂಮಿಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉದ್ಯಾನ ನಿರ್ಮಾಣಕ್ಕೆ ಭೂಮಿಪೂಜೆ

ಬಳ್ಳಾರಿ: ನಗರದ ರೇಣುಕಾಚಾರ್ಯ ನಗರದಲ್ಲಿ ಒಟ್ಟು ರೂ 35 ಲಕ್ಷ ವೆಚ್ಚದ ಉದ್ಯಾನ ನಿರ್ಮಾಣ ಕಾಮಗಾರಿಗೆ ಶಾಸಕ ಜಿ. ಸೋಮಶೇಖರ ರೆಡ್ಡಿ ಬುಧವಾರ ಭೂಮಿಪೂಜೆ ನೆರವೇರಿಸಿದರು.

ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಈ ಉದ್ಯಾನವನ್ನು ಉತ್ತಮ ಗುಣಮಟ್ಟದಲ್ಲಿ ಅತಿ  ಶೀಘ್ರವೇ ಪೂರ್ಣಗೊಳಿಸಲಾಗುವುದು. ಪ್ರಸಕ್ತ ವರ್ಷ ಪ್ರಾಧಿಕಾರದಿಂದ ನಗರದ ಇತರ ಸ್ಥಳಗಳಲ್ಲಿ ಒಟ್ಟು ಐದು ಉದ್ಯಾನಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದರು.ಮಹಾನಗರ ಪಾಲಿಕೆಯು ಒಟ್ಟು 10 ಉದ್ಯಾನ ಹಾಗೂ ಖಾಸಗಿ ಸಹಭಾಗಿತ್ವದ 16 ಉದ್ಯಾನಗಳನ್ನು ಆದಷ್ಟು ಬೇಗ  ನಿರ್ಮಿಸಲಾಗುವುದು. ಮುಂದಿನ ಎರಡು ವರ್ಷಗಳಲ್ಲಿ ನಗರದಾದ್ಯಂತ ಒಟ್ಟು 56 ಉದ್ಯಾನಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಹೇಳಿದರು.ನಗರವನ್ನು ಸ್ವಚ್ಛ ಹಾಗೂ ಸುಂದರವನ್ನಾಗಿಸಿ, ಮೂಲ ಸೌಲಭ್ಯ ಅಭಿವೃದ್ಧಿ ಪಡಿಸಲಾಗುವುದು ಎಂದು ಅವರು ತಿಳಿಸಿದರು.ಪ್ರಾಧಿಕಾರದ ಅಧ್ಯಕ್ಷ ಗುರುಲಿಂಗನಗೌಡ, ಮೇಯರ್ ನೂರ್‌ಜಹಾನ್, ಉಪಮೇಯರ್ ತೂರ್ಫು ಯಲ್ಲಪ್ಪ, ರಾಮಲಿಂಗಪ್ಪ, ಪೌರಾಯುಕ್ತ ನಾರಾಯಣ, ಪ್ರಾಧಿಕಾರದ ಆಯುಕ್ತ ಬಿರಾದಾರ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಂತರ ಶಾಸಕರು ನಗರದ ಹೊರ ವಲಯದ ಅಲ್ಲೆಪುರದಿಂದ ರೈಲು ನಿಲ್ದಾಣದವರೆಗೆ ಒಟ್ಟು 8 ಕಿಮೀ ರಾಷ್ಟ್ರೀಯ ಹೆದ್ದಾರಿಯ ಮೇಲ್ಮೈ ಅಭಿವೃದ್ಧಿ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.