ಮಂಗಳವಾರ, ಅಕ್ಟೋಬರ್ 15, 2019
29 °C

ಉದ್ಯೋಗದ ಕನಸಿಗೆ ಕಿನ್ನಿಗೋಳಿ ರೋಟರ‌್ಯಾಕ್ಟ್ ನೆರವು

Published:
Updated:

ಕಿನ್ನಿಗೋಳಿ (ಮೂಲ್ಕಿ): ವಿದ್ಯಾವಂತರಾದ ನಂತರ ಉದ್ಯೋಗದ ಕನಸನ್ನು ಕಾಣುವ ಯುವಕರಿಗೆ ಸೂಕ್ತ ಮಾಹಿತಿ ಹಾಗೂ ಸಹಕಾರವನ್ನು ನೀಡಿದಲ್ಲಿ ಅವರು ಉತ್ತಮ ಉದ್ಯೋಗಾರ್ಥಿಗಳಾಗಬಹುದು, ಇದಕ್ಕೆ ಕಿನ್ನಿಗೋಳಿ ರೋಟರ‌್ಯಾಕ್ಟ್ ಸಂಸ್ಥೆ ಮಾದರಿಯಾಗಿದೆ ಎಂದು ಕಿನ್ನಿಗೋಳಿ ಅನುಗ್ರಹ ಸಭಾಗೃಹದ ರಘುರಾಮ ರಾವ್ ಹೇಳಿದರು.ಕಿನ್ನಿಗೋಳಿಯ ರೋಟರ‌್ಯಾಕ್ಟ್ ಕ್ಲಬ್ ಮೂಲಕ ಮಂಗಳೂರಿನ ರಿಸೋರ್ಸ್ ಜಂಕ್ಷನ್ ಸಂಸ್ಥೆಯು ಶನಿವಾರ ಕಿನ್ನಿಗೋಳಿಯ ಅನುಗ್ರಹ ಸಭಾಗೃಹದ್ಲ್ಲಲಿ ನಡೆದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಕಿನ್ನಿಗೋಳಿ ರೋಟರ‌್ಯಾಕ್ಟ್ ಕ್ಲಬ್ ಅಧ್ಯಕ್ಷ ಗಣೇಶ್ ಕಾಮತ್ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರಿನ ರಿಸೋರ್ಸ್ ಜಂಕ್ಷನ್ ಸಂಸ್ಥೆಯ ದೀಪಕ್ ಗಂಗೂಲಿ ಮಾತನಾಡಿ, ಉದ್ಯೋಗ ಮೇಳದಲ್ಲಿ ಯುವಕ ಯುವತಿಯರು ತಮ್ಮ ಹೆಸರನ್ನು ನೊಂದಾಯಿಸಿ ವಿವಿಧ ಕಂಪೆನಿಗಳಿಗೆ ಉದ್ಯೋಗಾಂಕ್ಷಿಗಳ ವಿವರವನ್ನು ದಾಖಲಿಸಿ ಅದರ ಮೂಲಕ ಉದ್ಯೋಗಕ್ಕೆ ಅವಕಾಶ ಮಾಡಿಕೊಡಲಾಗುವುದು, ಜತೆಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು ಎಂದರು.ಉದ್ಯೋಗ ಮೇಳದಲ್ಲಿ ಒಟ್ಟು 130 ಯುವಕ-ಯುವತಿಯರು ತಮ್ಮ ಹೆಸರನ್ನು ನೋಂದಾಯಿಸಿದರು ಹಾಗೂ ಸಂದರ್ಶನ ಎದುರಿಸಿದರು. ರೋಟರ‌್ಯಾಕ್ಟ್‌ನ ಜಾಕ್ಸನ್ ಪಕ್ಷಿಕೆರೆ, ಅಶೋಕ್, ರೋಟರಿಯ ಕೆ.ಬಿ.ಸುರೇಶ್  ಇತರರು ಇದ್ದರು.

Post Comments (+)