`ಉದ್ಯೋಗದ ಸರಕಾಗಿ ಶಿಕ್ಷಣ'

7

`ಉದ್ಯೋಗದ ಸರಕಾಗಿ ಶಿಕ್ಷಣ'

Published:
Updated:

ಯಲಹಂಕ: `ಶಿಕ್ಷಣ ಇಂದು ಉದ್ಯೋಗ ಪಡೆದುಕೊಳ್ಳುವಂತಹ ಸರಕಾಗಿ ಮಾರ್ಪಾಡಾಗುತ್ತಿರುವುದು ದೇಶದ ದೊಡ್ಡ ದುರಂತ' ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ.ಅಂಬಳಿಕೆ ಹಿರಿಯಣ್ಣ ವಿಷಾದಿಸಿದರು.ಇಲ್ಲಿನ ಶೇಷಾದ್ರಿಪುರ ಪ್ರಥಮದರ್ಜೆ ಕಾಲೇಜಿನಲ್ಲಿ ಈಚೆಗೆ ಆಯೋಜಿಸಿದ್ದ `ಸ್ನೇಹ-ಸಮ್ಮಿಲನ' ಕಾರ್ಯಕ್ರಮದಲ್ಲಿ ಅಂಗ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಹಿರಿಯರಿಗೆ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.`ನಮ್ಮ ದೇಶೀ ಭಾಷೆಗಳೆಲ್ಲ ಮಾಯವಾಗಿ ಆಂಗ್ಲಭಾಷೆ ಅನ್ನದ ಭಾಷೆಯಾಗುತ್ತಿರುವ ಈ ಸಂದರ್ಭದಲ್ಲಿ ಶಿಕ್ಷಣ ಜೀವನದಲ್ಲಿ ಆತ್ಮವಿಶ್ವಾಸ ತುಂಬುವ ಸಾಧನವಾಗಬೇಕು. ಶಿಕ್ಷಕರು ಎಲ್ಲ ಮೂಲಗಳಿಂದ ಜ್ಞಾನ ಗಳಿಸಿಕೊಂಡು ಅದನ್ನು ವಿದ್ಯಾರ್ಥಿಗಳಿಗೆ ನಿರ್ವಂಚನೆಯಿಂದ ಹೇಳುವಂತಹ ಸಾಮರ್ಥ್ಯ ಗಳಿಸಿಕೊಳ್ಳಬೇಕು' ಎಂದರು.ಶೇಷಾದ್ರಿಪುರ ವಿದ್ಯಾಸಂಸ್ಥೆಯ ಅಧ್ಯಕ್ಷ ಎನ್.ಆರ್.ಪಂಡಿತಾರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಡಾ.ವೂಡೆ ಪಿ.ಕೃಷ್ಣ, ಉಪಾಧ್ಯಕ್ಷರಾದ ಟಿ.ಎಸ್.ಹೆಂಜಾರಪ್ಪ, ಡಬ್ಲ್ಯೂ.ಎಚ್.ಅನಿಲ್‌ಕುಮಾರ್, ಜಂಟಿ ಕಾರ್ಯದರ್ಶಿ ಎಸ್.ಶೇಷನಾರಾಯಣ, ಕೋಶಾಧ್ಯಕ್ಷ ಬಿ.ಎಂ.ಪಾರ್ಥಸಾರಥಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry