ಸೋಮವಾರ, ಜನವರಿ 20, 2020
22 °C

ಉದ್ಯೋಗಾವಕಾಶ ಅಲ್ಲಲ್ಲಿ....

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಡಿಕೇಟ್ ಬ್ಯಾಂಕ್

ಸಿಂಡಿಕೇಟ್ ಬ್ಯಾಂಕ್‌ನಲ್ಲಿ 1750 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16-01-2012.

ಹುದ್ದೆ ಹೆಸರು: ಪ್ರೊಬೇಷನರಿ ಆಫೀಸರ್

ಒಟ್ಟು ಹುದ್ದೆ: 1750

ವೇತನ ಶ್ರೇಣಿ: ರೂ.14500-25700/-

ವಯೋಮಿತಿ: ಕನಿಷ್ಠ 21 ವರ್ಷ. ಗರಿಷ್ಠ 30 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ವಿದ್ಯಾರ್ಹತೆ: ಎ) ಶೇಕಡಾ 55 ಅಂಕಗಳೊಂದಿಗೆ ಯಾವುದೇ ವಿಷಯದಲ್ಲಿ ಪದವಿ. ಬಿ) ಐಬಿಪಿಎಸ್ ನಡೆಸುವ ಲಿಖಿತ ಪರೀಕ್ಷೆಯಲ್ಲಿ  ಅರ್ಹತೆ ಪಡೆದಿರಬೇಕು.

ಅರ್ಜಿ ಶುಲ್ಕ: ರೂ. 200/-

ಆಯ್ಕೆ ವಿಧಾನ: ಸಂದರ್ಶನ

ಹೆಚ್ಚಿನ ಮಾಹಿತಿಗೆ www.syndicatebank.in ವೆಬ್‌ಸೈಟ್ ಸಂಪರ್ಕಿಸಿ.ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಸೆಲೆಕ್ಷನ್

ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್          (ಐಬಿಪಿಎಸ್) ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಸ್ಪೆಷಲಿ ಸ್ಟ್ ಆಫೀಸರ್ಸ್‌ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ್ದು 11-03-2012ರಂದು ಸಾಮಾನ್ಯ ಲಿಖಿತ ಪರೀಕ್ಷೆ ನಡೆಸಲಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21-01-2012.

ಹುದ್ದೆ ಹೆಸರು: ಸ್ಪೆಷಲಿಸ್ಟ್ ಆಫೀಸರ್ಸ್‌ ಹುದ್ದೆಗಳುಬ್ಯಾಂಕ್‌ಗಳು: ಅಲಹಾಬಾದ್ ಬ್ಯಾಂಕ್/ಆಂಧ್ರಾ ಬ್ಯಾಂಕ್/ಬ್ಯಾಂಕ್ ಆಫ್ ಬರೋಡ/ಬ್ಯಾಂಕ್ ಆಫ್ ಇಂಡಿಯಾ/ಬ್ಯಾಂಕ್ ಆಫ್ ಮಹಾರಾಷ್ಟ್ರ/ಕೆನರಾ ಬ್ಯಾಂಕ್/ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ/ ಕಾರ್ಪೊರೇಷನ್ ಬ್ಯಾಂಕ್/ದೇನಾ ಬ್ಯಾಂಕ್/    ಇಂಡಿಯನ್ ಬ್ಯಾಂಕ್/ಇಂಡಿಯನ್ ಓವರ್‌ಸೀಸ್ ಬ್ಯಾಂಕ್/ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್/ಪಂಜಾಬ್ ನ್ಯಾಷನಲ್ ಬ್ಯಾಂಕ್/ಪಂಜಾಬ್ ಅಂಡ್ ಸಿಂದ್ ಬ್ಯಾಂಕ್/       ಸಿಂಡಿಕೇಟ್ ಬ್ಯಾಂಕ್/ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ/        ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ/ಯುಕೊ ಬ್ಯಾಂಕ್/   ವಿಜಯಾ ಬ್ಯಾಂಕ್.

ವಯೋಮಿತಿ: ಕನಿಷ್ಠ 20, ಗರಿಷ್ಠ 35. ಕೆಲ ಹುದ್ದೆಗಳಿಗೆ ಕನಿಷ್ಠ 21, ಗರಿಷ್ಠ 40.  ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.ಅರ್ಜಿ ಶುಲ್ಕ: ರೂ.450/-. ಶುಲ್ಕ ಕಟ್ಟಲು ಕೊನೆಯ ದಿನಾಂಕ: 20-01-2012

ಪರೀಕ್ಷಾ ಕೇಂದ್ರ (ಕರ್ನಾಟಕದ ಅಭ್ಯರ್ಥಿಗಳಿಗೆ): ಬೆಂಗಳೂರು

ಹೆಚ್ಚಿನ ಮಾಹಿತಿಗೆ www.ibps.in  ವೆಬ್‌ಸೈಟ್ ಸಂಪರ್ಕಿಸಿ.ಇಂಡೋ ಟಿಬೆಟನ್ ಬಾರ್ಡರ್       ಪೊಲೀಸ್ ಫೋರ್ಸ್

ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ ಫೋರ್ಸ್ (ಐಟಿಬಿಪಿ)ನಲ್ಲಿ 22 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-01-2012.

ಹುದ್ದೆ ಹೆಸರು: ಹೆಡ್ ಕಾನ್‌ಸ್ಟೆಬಲ್ (ಡ್ರೆಸರ್ ವೆಟರ್ನರಿ)

ಒಟ್ಟು ಹುದ್ದೆ: 22

ವೇತನ ಶ್ರೇಣಿ: ರೂ.5200-20200/-

ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 25 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ವಿದ್ಯಾರ್ಹತೆ: ಎ) ಮೆಟ್ರಿಕುಲೇಷನ್ ಬಿ) ವೆಟರ್ನರಿ ಸ್ಟಾಕ್ ಅಸಿಸ್ಟೆಂಟ್ ಕೋರ್ಸ್

ಅರ್ಜಿ ಶುಲ್ಕ: ರೂ. 50/-

ವಿಳಾಸ: ಇನ್‌ಸ್ಟೆಕ್ಟರ್ ಜನರಲ್ (ನಾರ್ಥರ್ನ್) ಫ್ರಾಂಟಿಯರ್, ಐಟಿಬಿಪಿ, ಪೋಸ್ಟ್ -ಸೀಮದ್ವಾರ್ (ಇಂದಿರಾ ನಗರ), ಡಿಸ್ಟ್ರಿಕ್ಟ್ ಡೆಹ್ರಡೂನ್-248156 (ಉತ್ತರಾಖಂಡ)

ಹೆಚ್ಚಿನ ಮಾಹಿತಿಗೆ http://itbp.gov.in ವೆಬ್‌ಸೈಟ್ ಸಂಪರ್ಕಿಸಿ.ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್ ಕಂಪ್ಯೂಟಿಂಗ್

ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್ ಕಂಪ್ಯೂಟಿಂಗ್ (ಸಿಡಿಎಸಿ)ನಲ್ಲಿ 171 ಹುದ್ದೆಗಳನ್ನು (ವಿಶೇಷ ನೇಮಕಾತಿ) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-02-2012.

ಹುದ್ದೆ ವಿವರ: 1) ಅಸೋಸಿಸೇಟ್ ಡೈರೆಕ್ಟರ್ (ಇ-ಗೌವರ್ನ್‌ಮೆಂಟ್): 1 ಹುದ್ದೆ, 2) ಜಾಯಿಂಟ್ ಡೈರೆಕ್ಟರ್ (ಟೆಕ್ನಿಕಲ್): 6 ಹುದ್ದೆ, 3) ಪ್ರಿನ್ಸಿಪಲ್ ಟೆಕ್ನಿಕಲ್ ಆಫೀಸರ್/ಪ್ರಿನ್ಸಿಪಲ್ ಎಂಜಿನಿಯರ್: 12 ಹುದ್ದೆ, 4) ಸೀನಿಯರ್ ಟೆಕ್ನಿಕಲ್ ಆಫೀಸರ್/ಸೀನಿಯರ್ ಎಂಜಿನಿಯರ್: 11 ಹುದ್ದೆ, 5) ಟೆಕ್ನಿಕಲ್ ಆಫೀಸರ್/ಎಂಜಿನಿಯರ್: 127 ಹುದ್ದೆ, 6) ಸೀನಿಯರ್ ಟೆಕ್ನಿಕಲ್ ಅಸಿಸ್ಟೆಂಟ್: 03 ಹುದ್ದೆ, 7) ಟೆಕ್ನಿಕಲ್ ಅಸಿಸ್ಟೆಂಟ್: 3 ಹುದ್ದೆ, 8) ಸೀನಿಯರ್ ಅಸಿಸ್ಟೆಂಟ್/ಪರ್ಸನಲ್ ಅಸಿಸ್ಟೆಂಟ್: 6 ಹುದ್ದೆ, 9) ಅಸಿಸ್ಟೆಂಟ್: 2 ಹುದ್ದೆ.

ಒಟ್ಟು ಹುದ್ದೆ: 171

ಹೆಚ್ಚಿನ ಮಾಹಿತಿಗೆ www.vssc.gov.in ವೆಬ್‌ಸೈಟ್ ಸಂಪರ್ಕಿಸಿ.ಇಂಡಿಯನ್ ಸ್ಪೇಸ್ ರಿಸರ್ಚ್ ಆರ‌್ಗನೈಜೇಷನ್

ಇಂಡಿಯನ್ ಸ್ಪೇಸ್ ರಿಸರ್ಚ್ ಆರ‌್ಗನೈಜೇಷನ್ (ಇಸ್ರೋ)ನ ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರ್ (ವಿಎಸ್‌ಎಸ್‌ಸಿ)ನಲ್ಲಿ 6 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16-01-2012.

ಹುದ್ದೆ ಹೆಸರು: 1) ಟೆಕ್ನಿಕಲ್ ಅಸಿಸ್ಟೆಂಟ್-ಹುದ್ದೆ 5, 2) ಕೆಟರಿಂಗ್ ಸೂಪರ್‌ವೈಸರ್-ಹುದ್ದೆ 1

* ಅರ್ಜಿಯನ್ನು ಆನ್‌ಲೈನ್‌ನಲ್ಲಿ ನೋಂದಾಯಿಸಿದ ಮೇಲೆ ಪೋಸ್ಟ್‌ನಲ್ಲಿ ಕಳುಹಿಸಲು ಕೊನೆಯ ದಿನಾಂಕ: 23-01-2012

ವಿಳಾಸ: ಅಡ್ಮಿನಿಸ್ಟ್ರೇಟೀವ್ ಆಫೀಸರ್, ರಿಕ್ರೂಟ್‌ಮೆಂಟ್            ಅಂಡ್ ರಿವಿವ್ಯೆ ಸೆಕ್ಷನ್, ವಿಕ್ರಮ್ ಸಾರಾಭಾಯಿ                    ಸ್ಪೇಸ್ ಸೆಂಟರ್, ಇಸ್ರೋ (ಪೋಸ್ಟ್), ಎಟಿಎಫ್ ಏರಿಯಾ, ತಿರುವನಂತಪುರ-695022

ಹೆಚ್ಚಿನ ಮಾಹಿತಿಗೆ www.vssc.gov.inವೆಬ್‌ಸೈಟ್ ಸಂಪರ್ಕಿಸಿ.ಕರ್ಣಾಟಕ ಬ್ಯಾಂಕ್

ಕರ್ಣಾಟಕ ಬ್ಯಾಂಕ್ ಲಿಮಿಟೆಡ್‌ನಲ್ಲಿ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 13-01-2012. ಲಿಖಿತ ಪರೀಕ್ಷೆ: 12-02-2012

ಹುದ್ದೆ ಹೆಸರು: ಆಫೀಸರ್

ವಯೋಮಿತಿ: 30 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಸಡಿಲಿಕೆ ಇದೆ.

ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ ಅಥವಾ ಅಗ್ರಿಕಲ್ಚರಲ್         ಸೈನ್ಸ್‌ನಲ್ಲಿ ಪದವಿ ಅಥವಾ ಸಿಎ

ಅರ್ಜಿ ಶುಲ್ಕ: ರೂ. 250/-

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

* ಪರೀಕ್ಷೆ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ನಡೆಯಲಿದೆ.

ಹೆಚ್ಚಿನ ಮಾಹಿತಿಗೆ www.karnatakabank.com ವೆಬ್‌ಸೈಟ್ ಸಂಪರ್ಕಿಸಿ.

 

ಪ್ರತಿಕ್ರಿಯಿಸಿ (+)