ಉದ್ಯೋಗಾವಕಾಶ... ಅಲ್ಲಲ್ಲಿ

ಶುಕ್ರವಾರ, ಜೂಲೈ 19, 2019
26 °C

ಉದ್ಯೋಗಾವಕಾಶ... ಅಲ್ಲಲ್ಲಿ

Published:
Updated:

ನೈರುತ್ಯ ರೈಲ್ವೆ 

ನೈರುತ್ಯ ರೈಲ್ವೆಯಲ್ಲಿ (ಹುಬ್ಬಳ್ಳಿ) 1014 ಹುದ್ದೆಗಳನ್ನು (ಮಾಜಿ ಸೈನಿಕ ಕೋಟಾದಡಿ) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29-7-2013.

ವೇತನ ಶ್ರೇಣಿ: ರೂ 5,200- 20,200

ಅರ್ಹತಾ ಮಾನದಂಡ: 15 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಮತ್ತು ಸೈನ್ಯ ದರ್ಜೆ-1 ಪ್ರಮಾಣಪತ್ರ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಮಾಜಿ ಸೈನಿಕರು ಅರ್ಜಿ ಸಲ್ಲಿಸಬಹುದು.

ವಯೋಮಿತಿ: ಕನಿಷ್ಠ 33 ವರ್ಷ, ಗರಿಷ್ಠ 38 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಇತರ ಮಾಹಿತಿಗೆ www.rrchubli.in

ವಿಶಾಖಪಟ್ಟಣ ಸ್ಟೀಲ್ ಪ್ಲಾಂಟ್

120 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-7-2013.

ಹುದ್ದೆ ವಿವರ: 1) ಮ್ಯಾನೇಜ್‌ಮೆಂಟ್ ಟ್ರೈನಿ (ಟೆಕ್ನಿಕಲ್): ಹುದ್ದೆ-109

2) ಮ್ಯಾನೇಜ್‌ಮೆಂಟ್ ಟ್ರೈನಿ (ಫೈನಾನ್ಸ್ ಅಂಡ್ ಅಕೌಂಟ್ಸ್): ಹುದ್ದೆ-6

3) ಮ್ಯಾನೇಜ್‌ಮೆಂಟ್ ಟ್ರೈನಿ (ಎಚ್‌ಆರ್ ಅಂಡ್ ವೆಲ್‌ಫೇರ್): ಹುದ್ದೆ-4

4) ಮ್ಯಾನೇಜ್‌ಮೆಂಟ್ ಟ್ರೈನಿ (ಕಾರ್ಪೊರೇಟ್ ಕಮ್ಯುನಿಕೇಷನ್): ಹುದ್ದೆ-1

ವೇತನ ಶ್ರೇಣಿ: ರೂ 20,600- 46,500

ವಯೋಮಿತಿ: 25 ವರ್ಷ ದಾಟಿರಬಾರದು. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಗುಂಪು ಚರ್ಚೆ/ ಸಂದರ್ಶನ

* 18-8-2013ರಂದು ಲಿಖಿತ ಪರೀಕ್ಷೆ ನಡೆಯುವ ಸಾಧ್ಯತೆ ಇದೆ.

ಅರ್ಜಿ ಶುಲ್ಕ: ರೂ 500

ಇತರ ಮಾಹಿತಿಗೆ http://eproc.vizagsteel.com

ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ

ಎಫ್.ಸಿ.ಐ.ನಲ್ಲಿ 460 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-7-2013.

ಹುದ್ದೆ ವಿವರ: ಮ್ಯಾನೇಜ್‌ಮೆಂಟ್ ಟ್ರೈನಿ

(ಉತ್ತರ ವಲಯ- 158, ದಕ್ಷಿಣ ವಲಯ- 197, ಪೂರ್ವ ವಲಯ- 12, ಪಶ್ಚಿಮ ವಲಯ- 47, ಈಶಾನ್ಯ ವಲಯ- 46)

ಸ್ಟೈಫಂಡ್ ರೂ 8,500. ತರಬೇತಿ ಬಳಿಕ ವೇತನ ಶ್ರೇಣಿ: ರೂ 16,400- 40,500

ವಯೋಮಿತಿ: 28 ವರ್ಷ ದಾಟಿರಬಾರದು. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ಗುಂಪು ಚರ್ಚೆ ಹಾಗೂ ಸಂದರ್ಶನ

* ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ.

ಅರ್ಜಿ ಶುಲ್ಕ: ರೂ 500

ಇತರ ಮಾಹಿತಿಗೆ http://fcijobsportal.com

ಸೇನಾಪಡೆ

ಸೇನಾಪಡೆಯಲ್ಲಿ 54 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 1-8-2013.

ಹುದ್ದೆ ವಿವರ: ಶಾರ್ಟ್ ಸರ್ವೀಸ್ ಕಮಿಷನ್ (ಎಸ್‌ಎಸ್‌ಸಿ) ಎನ್‌ಸಿಸಿ `ಸಿ' ಸರ್ಟಿಫಿಕೇಟ್ ಹೊಂದಿದವರಿಗೆ.

ಸ್ಟೈಫಂಡ್: ರೂ 21,000. ವೇತನ ಶ್ರೇಣಿ: ರೂ 15,600- 39,100.

ವಯೋಮಿತಿ: ಕನಿಷ್ಠ 19 ವರ್ಷ, ಗರಿಷ್ಠ 25 ವರ್ಷ. 

ವಿಳಾಸ: ಅಡಿಷನಲ್ ಡೈರೆಕ್ಟರೇಟ್ ಜನರಲ್ ಆಫ್ ರೆಕ್ರೂಟಿಂಗ್, ರೆಕ್ರೂಟಿಂಗ್ ಎನ್‌ಸಿಸಿ ವಿಂಗ್, ವೆಸ್ಟ್ ಬ್ಲಾಕ್- 111, ಆರ್.ಕೆ.ಪುರಂ, ನವದೆಹಲಿ- 110 066

ಹೆಚ್ಚಿನ ಮಾಹಿತಿಗೆ http://www.joinindianarmy.nic.in/

ಸಶಸ್ತ್ರ ಸೀಮಾ ಬಲ

ಎಸ್.ಎಸ್.ಬಿ.ಯಲ್ಲಿ 645 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 1-8-2013.

ಹುದ್ದೆ ವಿವರ: ಕಾನ್‌ಸ್ಟೆಬಲ್ (ಡ್ರೈವರ್)

ವೇತನ ಶ್ರೇಣಿ: ರೂ 5,200- 20,200

ವಿದ್ಯಾರ್ಹತೆ: ಮೆಟ್ರಿಕ್ಯುಲೇಷನ್

ವಯೋಮಿತಿ: ಕನಿಷ್ಠ 23, ಗರಿಷ್ಠ 28 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆ

ವಿಳಾಸ: ದಿ ಇನ್‌ಸ್ಪೆಕ್ಟರ್ ಜನರಲ್, ಫ್ರಾಂಟಿಯರ್ ಹೆಡ್‌ಕ್ವಾರ್ಟರ್ಸ್ (ಸಶಸ್ತ್ರ ಸೀಮಾ ಬಲ), ಸಿಲಿಗುರಿ, ರಾಣಿದಂಗ, ಮತಿಗರ ಪೋಸ್ಟ್, ಡಾರ್ಜಿಲಿಂಗ್ ಜಿಲ್ಲೆ, ಪಶ್ಚಿಮ ಬಂಗಾಳ- 734 010

ಇತರ ಮಾಹಿತಿಗೆ www.ssbrectt.gov.in

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್

ಎಚ್.ಪಿ.ಸಿ.ಎಲ್.ನಲ್ಲಿ 74 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16-7-2013.

ಹುದ್ದೆ ವಿವರ: 1) ಆಫೀಸ್ ಟ್ರೈನಿ (ಕ್ವಾಲಿಟಿ ಕಂಟ್ರೋಲ್/ ಆಪರೇಷನ್ಸ್)- 24 ಹುದ್ದೆ, ವಿದ್ಯಾರ್ಹತೆ: ಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ. 2) ಆಫೀಸರ್ ಟ್ರೈನಿ (ಹ್ಯೂಮನ್ ರಿಸೋರ್ಸಸ್)- 12 ಹುದ್ದೆ, ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ ಅಥವಾ ಎಚ್‌ಆರ್/ ಪರ್ಸನಲ್ ಮ್ಯಾನೇಜ್‌ಮೆಂಟ್‌ನಲ್ಲಿ ತತ್ಸಮಾನ ಕೋರ್ಸ್. ವಯೋಮಿತಿ: 27 ವರ್ಷ ದಾಟಿರಬಾರದು. 3) ಇನ್‌ಫರ್ಮೇಷನ್ ಸಿಸ್ಟಮ್ಸ ಆಫೀಸರ್ಸ್‌- 26 ಹುದ್ದೆ,ವಿದ್ಯಾರ್ಹತೆ: ಎಲೆಕ್ಟ್ರಾನಿಕ್ಸ್/ ಟೆಲಿ ಕಮ್ಯುನಿಕೇಷನ್ಸ್/ ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿ ಕಮ್ಯುನಿಕೇಷನ್ಸ್/ ಕಂಪ್ಯೂಟರ್ ಸೈನ್ಸ್‌ನಲ್ಲಿ ನಾಲ್ಕು ವರ್ಷಗಳ ಬಿ.ಇ./ ಬಿ.ಟೆಕ್. ವಯೋಮಿತಿ: 30 ವರ್ಷ ದಾಟಿರಬಾರದು. 4) ಲಾ ಆಫೀಸರ್- 12 ಹುದ್ದೆ, ವಿದ್ಯಾರ್ಹತೆ: ಪದವಿ ಬಳಿಕ ಮೂರು ವರ್ಷಗಳ ಕಾನೂನು ಪದವಿ ಅಥವಾ 12ನೇ ತರಗತಿ ಬಳಿಕ ಐದು ವರ್ಷದ ಕಾನೂನು ಪದವಿ (ಶೇಕಡಾ 60 ಅಂಕ). ವಯೋಮಿತಿ: 26 ವರ್ಷ ದಾಟಿರಬಾರದು.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

ಅರ್ಜಿ ಶುಲ್ಕ: ರೂ 535

ಹೆಚ್ಚಿನ ಮಾಹಿತಿಗೆ www.hindustanpetroleum.com

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry