ಉದ್ಯೋಗಾವಕಾಶ ಅಲ್ಲಲ್ಲಿ..

ಸೋಮವಾರ, ಜೂಲೈ 22, 2019
24 °C

ಉದ್ಯೋಗಾವಕಾಶ ಅಲ್ಲಲ್ಲಿ..

Published:
Updated:

ಇಂಟೆಲಿಜೆನ್ಸ್ ಬ್ಯೂರೊ, ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಸೆಲೆಕ್ಷನ್, ಪಬ್ಲಿಕ್ ಸೆಕ್ಟರ್ ಇನ್ಶೂರೆನ್ಸ್ ಕಂಪೆನಿಗಳು, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಡೆಕ್ಕನ್ ಗ್ರಾಮೀಣ ಬ್ಯಾಂಕ್

ಇಂಟೆಲಿಜೆನ್ಸ್ ಬ್ಯೂರೊ

ಐ.ಬಿ.ಯಲ್ಲಿ 750 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12-8-2013.

ಹುದ್ದೆ ವಿವರ: ಅಸಿಸ್ಟೆಂಟ್ ಸೆಂಟ್ರಲ್ ಇಂಟೆಲಿಜೆನ್ಸ್ ಆಫೀಸರ್ (ಎಸಿಐಒ): ಗ್ರೇಡ್- 11

ವಿದ್ಯಾಭ್ಯಾಸ: ಪದವಿ

ವೇತನ ಶ್ರೇಣಿ: ರೂ 9,300- 34,800

ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 100

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

* ಬೆಂಗಳೂರಿನಲ್ಲೂ ಲಿಖಿತ ಪರೀಕ್ಷೆ ನಡೆಯಲಿದೆ.

ಹೆಚ್ಚಿನ ಮಾಹಿತಿಗೆ    http://mha.nic.inಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಸೆಲೆಕ್ಷನ್

ಐ.ಬಿ.ಪಿ.ಎಸ್. ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ್ದು ಲಿಖಿತ ಪರೀಕ್ಷೆ ನಡೆಸಲಿದೆ. ಆನ್‌ಲೈನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12-8-2013.

ಹುದ್ದೆ ಹೆಸರು: ಪ್ರೊಬೇಷನರಿ ಆಫೀಸರ್ಸ್‌ ಹಾಗೂ ಮ್ಯಾನೇಜ್‌ಮೆಂಟ್ ಟ್ರೈನೀಸ್

ಬ್ಯಾಂಕ್‌ಗಳು: ಅಲಹಾಬಾದ್ ಬ್ಯಾಂಕ್/ ಆಂಧ್ರಾ ಬ್ಯಾಂಕ್/ ಬ್ಯಾಂಕ್ ಆಫ್ ಬರೋಡ/ ಬ್ಯಾಂಕ್ ಆಫ್ ಇಂಡಿಯಾ/ ಬ್ಯಾಂಕ್ ಆಫ್ ಮಹಾರಾಷ್ಟ್ರ/ ಕೆನರಾ ಬ್ಯಾಂಕ್/ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ/ ಕಾರ್ಪೊರೇಷನ್ ಬ್ಯಾಂಕ್/ ದೇನಾ ಬ್ಯಾಂಕ್/ ಇಸಿಜಿಸಿ/ ಐಡಿಬಿಐ ಬ್ಯಾಂಕ್/ ಇಂಡಿಯನ್ ಬ್ಯಾಂಕ್/ ಇಂಡಿಯನ್ ಓವರ್‌ಸೀಸ್ ಬ್ಯಾಂಕ್/ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್/ ಪಂಜಾಬ್ ನ್ಯಾಷನಲ್ ಬ್ಯಾಂಕ್/ ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್/ ಸಿಂಡಿಕೇಟ್ ಬ್ಯಾಂಕ್/ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ/ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ/ ಯುಕೊ ಬ್ಯಾಂಕ್/ ವಿಜಯಾ ಬ್ಯಾಂಕ್.

ವಯೋಮಿತಿ: ಕನಿಷ್ಠ 20 ವರ್ಷ, ಗರಿಷ್ಠ 28 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಯಾವುದೇ ವಿಷಯದಲ್ಲಿ ಪದವಿ.

ಅರ್ಜಿ ಶುಲ್ಕ: ರೂ 600.

ಆಯ್ಕೆ ವಿಧಾನ: ಆನ್‌ಲೈನ್ ಪರೀಕ್ಷೆ (2013, ಅಕ್ಟೋಬರ್ 19, 20, 26, 27) ಹಾಗೂ ಸಂದರ್ಶನ.

ಪರೀಕ್ಷಾ ಕೇಂದ್ರ (ಕರ್ನಾಟಕದ ಅಭ್ಯರ್ಥಿಗಳಿಗೆ): ಬೆಂಗಳೂರು, ಬೆಳಗಾವಿ, ಬೀದರ್, ಹಾವೇರಿ, ಗುಲ್ಬರ್ಗ, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ಮಂಗಳೂರು, ಉಡುಪಿ, ಮೈಸೂರು ಹಾಗೂ ಮಂಡ್ಯ.

ಹೆಚ್ಚಿನ ಮಾಹಿತಿಗೆ   www.ibps.inಪಬ್ಲಿಕ್ ಸೆಕ್ಟರ್ ಇನ್ಶೂರೆನ್ಸ್ ಕಂಪೆನಿಗಳು

ಇನ್ಶೂರೆನ್ಸ್ ಕಂಪೆನಿಗಳಲ್ಲಿ 1430 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 3-8-2013.

ಹುದ್ದೆ ವಿವರ: ಅಡ್ಮಿನಿಸ್ಟ್ರೇಟಿವ್ ಆಫೀಸರ್ (ಸ್ಪೆಷಲಿಸ್ಟ್ ಹಾಗೂ ಜನರಲಿಸ್ಟ್ ಆಫೀಸರ್ಸ್‌): 1) ನ್ಯಾಷನಲ್ ಇನ್ಶೂರೆನ್ಸ್ ಕಂಪೆನಿ ಲಿಮಿಟೆಡ್: 423 ಹುದ್ದೆ, 2) ನ್ಯೂ ಇಂಡಿಯಾ ಅಶ್ಶೂರೆನ್ಸ್ ಕಂಪೆನಿ ಲಿಮಿಟೆಡ್: 494 ಹುದ್ದೆ, 3) ಓರಿಯಂಟಲ್ ಇನ್ಶೂರೆನ್ಸ್ ಕಂಪೆನಿ ಲಿಮಿಟೆಡ್: 223 ಹುದ್ದೆ, 4) ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪೆನಿ ಲಿಮಿಟೆಡ್: 294 ಹುದ್ದೆ.

ವೇತನ ಶ್ರೇಣಿ: ರೂ 17,240- 32,640

ವಯೋಮಿತಿ: ಕನಿಷ್ಠ 21, ಗರಿಷ್ಠ 30 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಅರ್ಜಿ ಶುಲ್ಕ: ರೂ 470

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

* ಲಿಖಿತ ಪರೀಕ್ಷೆ ದಿನಾಂಕ: 8-9-2013

* ಕರ್ನಾಟಕದಲ್ಲಿ ಬೆಂಗಳೂರು, ಹುಬ್ಬಳ್ಳಿಯಲ್ಲಿ ಪರೀಕ್ಷೆ ನಡೆಯಲಿದೆ.

ಇತರ ಮಾಹಿತಿಗೆ  http://www.nationalinsuranceindia.com ಇಂಡಿಯನ್ ಓವರ್‌ಸೀಸ್ ಬ್ಯಾಂಕ್

ಐ.ಒ.ಬಿ.ನಲ್ಲಿ 480 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29-7-2013

ಹುದ್ದೆ ವಿವರ: ಪ್ರೊಬೇಷನರಿ ಆಫೀಸರ್ಸ್‌

ವೇತನ ಶ್ರೇಣಿ: ರೂ 14,500- 25,700

ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಪದವಿ

ವಯೋಮಿತಿ: ಕನಿಷ್ಠ 20 ವರ್ಷ, ಗರಿಷ್ಠ 28 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಅರ್ಜಿ ಶುಲ್ಕ: ರೂ 500

ಆಯ್ಕೆ ವಿಧಾನ: ಆನ್‌ಲೈನ್ ಪರೀಕ್ಷೆ ಹಾಗೂ ಸಂದರ್ಶನ

* ಪರೀಕ್ಷೆ ದಿನಾಂಕ: 1-9-2013

* ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರಿನಲ್ಲಿ ಪರೀಕ್ಷೆ ನಡೆಯಲಿದೆ.

ಇತರ ಮಾಹಿತಿಗೆ http://www.iob.inಡೆಕ್ಕನ್ ಗ್ರಾಮೀಣ ಬ್ಯಾಂಕ್

153 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 1-8-2013

ಹುದ್ದೆ ವಿವರ: 1) ಆಫೀಸರ್ಸ್‌ ಸ್ಕೇಲ್-1: 76 ಹುದ್ದೆ. ವೇತನ ಶ್ರೇಣಿ: ರೂ 14,500- 25,700.   2) ಆಫೀಸ್ ಅಸಿಸ್ಟೆಂಟ್ (ಮಲ್ಟಿ ಪರ್ಪಸ್): 77 ಹುದ್ದೆ. ವೇತನ ಶ್ರೇಣಿ: ರೂ 7,200- 19,300

ವಿದ್ಯಾರ್ಹತೆ: ಪದವಿ

ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 28 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಅರ್ಜಿ ಶುಲ್ಕ: ರೂ 100

ಆಯ್ಕೆ ವಿಧಾನ: ಸಂದರ್ಶನ (ಐಬಿಪಿಎಸ್ ನಡೆಸುವ ಲಿಖಿತ ಪರೀಕ್ಷೆಯಲ್ಲಿ ಅರ್ಹ ಅಂಕ ಪಡೆದಿರಬೇಕು)

ಇತರ ಮಾಹಿತಿಗೆ www.dgbhyd.com

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry