ಉದ್ಯೋಗಾವಕಾಶ ಅಲ್ಲಲ್ಲಿ......

7

ಉದ್ಯೋಗಾವಕಾಶ ಅಲ್ಲಲ್ಲಿ......

Published:
Updated:

ಭಾರತೀಯ ಮಹಿಳಾ ಬ್ಯಾಂಕ್, ನ್ಯಾಷನಲ್ ಫರ್ಟಿಲೈಜರ್ಸ್ ಲಿಮಿಟೆಡ್, ಈಸ್ಟ್ ಸೆಂಟ್ರಲ್ ರೈಲ್ವೆ, ರೈಟ್ಸ್ ಲಿಮಿಟೆಡ್, ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್.

ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್

ಬಿ.ಎಚ್.ಎಲ್.ನಲ್ಲಿ (ಹೈದರಾಬಾದ್) 800 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 5-10-2013.

ಹುದ್ದೆ ವಿವರ: ಆರ್ಟಿಸನ್ಸ್ (ಮೆಕಾನಿಸ್ಟ್- 245, ಟರ್ನರ್- 164, ಫಿಟ್ಟರ್- 285, ಬ್ಲಾಕ್‌ಸ್ಮಿತ್- 5, ವೆಲ್ಡರ್- 59, ಕಾರ್ಪೆಂಟರ್- 5, ಎಲೆಕ್ಟ್ರೀಷಿಯನ್- 37)

ವೇತನ ಶ್ರೇಣಿ: ರೂ 11,700- 23,000

ವಿದ್ಯಾರ್ಹತೆ: ಮೆಟ್ರಿಕ್/ಎಸ್ಎಸ್‌ಸಿ. ಜೊತೆಗೆ ಸಂಬಂಧಪಟ್ಟ ಟ್ರೇಡ್‌ಗಳಲ್ಲಿ ಶೇಕಡಾ 60 ಅಂಕಗಳೊಂದಿಗೆ ನ್ಯಾಷನಲ್ ಅಪ್ರೆಂಟಿಸ್‌ಷಿಪ್ ಸರ್ಟಿಫಿಕೇಟ್.

ವಯೋಮಿತಿ: 27 ವರ್ಷ ದಾಟಿರಬಾರದು. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 125

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

* ಲಿಖಿತ ಪರೀಕ್ಷೆ 10-11-2013

* ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಪೋಸ್ಟ್‌ನಲ್ಲಿ ಕಳುಹಿಸಲು ಕೊನೆಯ ದಿನಾಂಕ: 12-10-2013

ವಿಳಾಸ: ಪೋಸ್ಟ್ ಬ್ಯಾಗ್ ನಂ. 9, ಮುಖ್ಯ ಡಾಕ್ ಘರ್, ಬಿಎಚ್‌ಇಎಲ್ ಆರ್.ಸಿ. ಪುರಂ, ಎಚ್‌ಇ, ಹೈದರಾಬಾದ್- 502 032

ಹೆಚ್ಚಿನ ಮಾಹಿತಿಗೆ  http://recruit.bhelhyd.co.in/ಭಾರತೀಯ ಮಹಿಳಾ ಬ್ಯಾಂಕ್

ಬಿ.ಎಂ.ಎಸ್.ನಲ್ಲಿ 115 ಹುದ್ದೆಗಳನ್ನು (ಮಹಿಳೆಯರು) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್ ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-9-2013.

ಹುದ್ದೆ ವಿವರ: ಪ್ರೊಬೆಷನರಿ ಆಫೀಸರ್

ವೇತನ ಶ್ರೇಣಿ: ರೂ 14,500- 25,700

ವಿದ್ಯಾರ್ಹತೆ: ಪದವಿ

ವಯೋಮಿತಿ: ಕನಿಷ್ಠ 20 ವರ್ಷ, ಗರಿಷ್ಠ 30 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಹೆಚ್ಚಿನ ಮಾಹಿತಿಗೆ   www.sbicaps.comನ್ಯಾಷನಲ್ ಫರ್ಟಿಲೈಜರ್ಸ್‌ ಲಿಮಿಟೆಡ್

ಎನ್.ಎಫ್.ಎಲ್.ನಲ್ಲಿ 49 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆ ಹೆಸರು: ಮ್ಯಾನೇಜ್‌ಮೆಂಟ್ ಟ್ರೈನಿ

ವೇತನ ಶ್ರೇಣಿ: ರೂ 16,400- 40,400 (ತರಬೇತಿ ಬಳಿಕ)

ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಎಂಜಿನಿಯರಿಂಗ್/ ಟೆಕ್ನಾಲಜಿಯಲ್ಲಿ ಪದವಿ

ವಯೋಮಿತಿ: 27 ವರ್ಷ ದಾಟಿರಬಾರದು.

ಅರ್ಜಿ ಶುಲ್ಕ: ರೂ 500

ವಿಶೇಷ ಸೂಚನೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಜಿಎಟಿಇ (ಗೇಟ್)- 2014ರ ಪರೀಕ್ಷೆಗೆ ಹಾಜರಾಗಲು ನೋಂದಣಿ ಮಾಡಿಸಿರಬೇಕು. ಅದಕ್ಕೆ ಕೊನೆಯ ದಿನಾಂಕ: 3-10-2013.

* ಜಿಎಟಿಇ ಪರೀಕ್ಷೆ 1-2-2014 ಹಾಗೂ 2-3-2014 ನಡುವೆ ನಡೆಯಲಿದೆ. ಈ ಬಗ್ಗೆ ಮಾಹಿತಿಗೆ   http://gate.iitkgp.ac.in   ಸಂಪರ್ಕಿಸಿ.

* ಹುದ್ದೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಎನ್ಎಫ್‌ಸಿ ವೆಬ್ ಸೈಟ್ ಸದ್ಯದಲ್ಲೇ ಪ್ರಕಟಿಸಲಿದೆ.

ಹುದ್ದೆಯ ಬಗ್ಗೆ ಹೆಚ್ಚಿನ ಮಾಹಿತಿಗೆ   http://www.nationalfertilizers.comಈಸ್ಟ್ ಸೆಂಟ್ರಲ್ ರೈಲ್ವೆ

ಇ.ಸಿ.ಆರ್.ನಲ್ಲಿರುವ 4655 ಹುದ್ದೆಗಳನ್ನು ಭರ್ತಿ ಮಾಡಲು ರೈಲ್ವೆ ನೇಮಕಾತಿ ಘಟಕವು (ಪಟ್ನಾ) ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14-10-2013.

ಹುದ್ದೆ ಹೆಸರು: 1) ಪೋರ್ಟರ್- 918 ಹುದ್ದೆ, 2) ಟ್ರ್ಯಾಕ್‌ಮನ್: 1614 ಹುದ್ದೆ, 3) ಹೆಲ್ಪರ್-11 (ಮೆಕಾನಿಕಲ್): 976 ಹುದ್ದೆ, 4) ಹೆಲ್ಪರ್-11 (ಎಸ್ ಅಂಡ್ ಟಿ): 366 ಹುದ್ದೆ, 5) ಹೆಲ್ಪರ್-11 (ಎಲೆಕ್ಟ್ರಿಕಲ್): 291 ಹುದ್ದೆ, 6) ಗ್ರೇಡ್ ಡಿ (ಎಂಜಿನಿಯರ್): 469 ಹುದ್ದೆ, 7) ಗ್ರೇಡ್ ಡಿ (ಸ್ಟೋರ್)- 21 ಹುದ್ದೆ

ವೇತನ ಶ್ರೇಣಿ: ರೂ 5,200- 20,200

ವಿದ್ಯಾರ್ಹತೆ: 10ನೇ ತರಗತಿ ಅಥವಾ ಐಟಿಐ

ಅರ್ಜಿ ಶುಲ್ಕ: ರೂ 100

ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 33 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ

ವಿಳಾಸ: ಅಸಿಸ್ಟೆಂಟ್ ಪರ್ಸನಲ್ ಆಫೀಸರ್ (ಆರ್ಆರ್‌ಸಿ), ರೈಲ್ವೆ ನೇಮಕಾತಿ ಘಟಕ, ಇ.ಸಿ.ರೈಲ್ವೆ, ಪೋಲ್ಸನ್ ಕಾಂಪ್ಲೆಕ್ಸ್, ದಿಘಾ ಘಾಟ್, ಪಾಟ್ನಾ-  800 011, ಬಿಹಾರ.

ಹೆಚ್ಚಿನ ಮಾಹಿತಿಗೆ   http://rrcecr.gov.in/ ರೈಟ್ಸ್ ಲಿಮಿಟೆಡ್

67 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 18-10-2013.

ಹುದ್ದೆ ವಿವರ: ಗ್ರ್ಯಾಜುಯೇಟ್ ಎಕ್ಸಿಕ್ಯುಟಿವ್ ಟ್ರೈನಿ

ವೇತನ ಶ್ರೇಣಿ: ರೂ 20,600- 46,500

ವಿದ್ಯಾರ್ಹತೆ: ಶೇ 60 ಅಂಕಗಳೊಂದಿಗೆ ಎಂಜಿನಿಯರಿಂಗ್‌ನಲ್ಲಿ ಪದವಿ (ಸಿವಿಲ್/ ಮೆಕ್ಯಾನಿಕಲ್/ ಎಲೆಕ್ಟ್ರಿಕಲ್)

ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ.

ಅರ್ಜಿ ಶುಲ್ಕ: ರೂ 500

ಆಯ್ಕೆ ವಿಧಾನ: 2013ರ ಜಿಎಟಿಎನಲ್ಲಿ (ಗೇಟ್) ಅರ್ಹ ಅಂಕ ಪಡೆದಿರಬೇಕು ಹಾಗೂ ವೈಯಕ್ತಿಕ ಸಂದರ್ಶನ

* ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಪೋಸ್ಟ್‌ನಲ್ಲಿ ಕಳುಹಿಸಲು ಕೊನೆಯ ದಿನಾಂಕ: 28-10-2013

ವಿಳಾಸ: ಎಜಿಎಂ (ಪಿ)/ ರೆಕ್ರೂಟ್‌ಮೆಂಟ್, ರೈಟ್ಸ್ ಲಿಮಿಟೆಡ್, ರೈಟ್ಸ್ ಭವನ್, ಪ್ಲಾಟ್ ನಂ. 1, ಸೆಕ್ಟರ್- 29, ಗುಡಗಾಂವ್

ಹೆಚ್ಚಿನ ಮಾಹಿತಿಗೆ  http://new.rites.com/ ಸ್ಟೇಟ್‌ ಬ್ಯಾಂಕ್‌ ಆಫ್‌ ಟ್ರಾವಂಕೂರ್‌

ಎಸ್.ಬಿ.ಟಿ.ಯಲ್ಲಿ 33 ಹುದ್ದೆಗಳನ್ನು (ಕರ್ನಾಟಕದಲ್ಲಿ)  ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 3-10-2013. ಹುದ್ದೆ ವಿವರ: ಪೀವನ್ಸ್‌

ವೇತನ ಶ್ರೇಣಿ: ರೂ 5,850- 11,350

ವಿದ್ಯಾರ್ಹತೆ: 10ನೇ ತರಗತಿ ಉತ್ತೀರ್ಣ

ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 26 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಅರ್ಜಿ ಶುಲ್ಕ: ರೂ 300

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

ಹೆಚ್ಚಿನ ಮಾಹಿತಿಗೆ   www.statebankoftravancore.com

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry