ಉದ್ಯೋಗ ಅವಕಾಶಕ್ಕೆ ಹೆಮ್ಮೆ

7

ಉದ್ಯೋಗ ಅವಕಾಶಕ್ಕೆ ಹೆಮ್ಮೆ

Published:
Updated:

ನ್ಯೂಯಾರ್ಕ್ (ಪಿಟಿಐ): ಆಂಧ್ರಪ್ರದೇಶದ ಸಮಲ್‌ಕೋಟ್‌ನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ವಿದ್ಯುತ್ ಸ್ಥಾವರವೊಂದಕ್ಕೆ ಅತ್ಯಾಧುನಿಕ ಟರ್ಬೈನ್‌ಗಳನ್ನು ಪೂರೈಸುವ ಗುತ್ತಿಗೆ ಅಮೆರಿಕದ ಜನರಲ್ ಎಲೆಟ್ರಿಕ್ (ಜಿಇ) ಕಂಪೆನಿಗೆ ಲಭಿಸಿದ್ದು, ತಮ್ಮ ಭಾರತ ಭೇಟಿಯ ಫಲವಾಗಿಯೇ ಇದು ಲಭಿಸಿದೆ ಎಂಬುದನ್ನು ಅಧ್ಯಕ್ಷ ಬರಾಕ್ ಒಬಾಮ ಅವರು ಜಿಇ ಕಾರ್ಖಾನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ತಿಳಿಸಿದ್ದಾರೆ.ಇಲ್ಲಿಗೆ ಸಮೀಪದ ಸೆಚೆನೆಕ್ಟಡಿಯಲ್ಲಿರುವ ಜಿ.ಇ. ಕಂಪೆನಿಯ ಭಾರತೀಯ ಘಟಕಕ್ಕೆ ಶುಕ್ರವಾರ ಭೇಟಿ ನೀಡಿದ ಒಬಾಮ ಅವರು, ಈ ಟರ್ಬೈನ್ ಮಾರಾಟದಿಂದಾಗಿ 1600 ಅಮೆರಿಕನ್ನರಿಗೆ ಉದ್ಯೋಗ ಸಿಗುವಂತಾಗಿದೆ. ಕಳೆದ ನವೆಂಬರ್‌ನಲ್ಲಿ ತಾವು ಭಾರತಕ್ಕೆ ಭೇಟಿ ನೀಡಿದ್ದಾಗ ಈ ವ್ಯವಹಾರ ಕುದುರಿತ್ತು ಎಂದು ಹೇಳಿದರು.ಒಬಾಮ ಅವರು ತಮ್ಮ ಭಾರತ ಭೇಟಿಯ ಸಂದರ್ಭದಲ್ಲಿ ಹೊಸದಾಗಿ 50 ಸಾವಿರ ಉದ್ಯೋಗ ಸೃಷ್ಟಿಗೆ ಅವಕಾಶ ನೀಡುವ 10 ಶತಕೋಟಿ ಡಾಲರ್ ಮೊತ್ತದ ಸಾಮಗ್ರಿಗಳನ್ನು ಭಾರತಕ್ಕೆ ರಫ್ತು ಮಾಡುವುದಕ್ಕೆ ಒಪ್ಪಂದ ಮಾಡಿಕೊಂಡಿದ್ದರು. ‘ನಿಮ್ಮಲ್ಲಿ ಹೆಚ್ಚಿನವರು ಸಮಲ್ ಕೋಟ್‌ನ ಹೆಸರು ಕೇಳಿರಲಾರಿರಿ. ಆದರೆ ಇಂದು ನೀವು ಆ ಹೆಸರನ್ನು ತಿಳಿದುಕೊಳ್ಳಬೇಕು; ಯಾಕೆಂದರೆ ನೀವು ನಿಮ್ಮ ಉತ್ಪನ್ನವನ್ನು ಅಲ್ಲಿಗೆ ಮಾರಾಟ ಮಾಡುತ್ತಿದ್ದೀರಿ’ ಎಂದು ಅವರು ಕಾರ್ಖಾನೆಯ ಕಾರ್ಮಿಕರಿಗೆ ತಿಳಿಸಿದರು. ಈ ಟರ್ಬೈನ್‌ಗಳ ರಫ್ತಿನಿಂದ ಉತ್ಪಾದನಾ ಕ್ಷೇತ್ರದಲ್ಲಿ 1200  ಮಂದಿಗೆ ಹಾಗೂ ಎಂಜಿನಿಯರಿಂಗ್ ಕ್ಷೇತ್ರದಲ್ಲಿ 400 ಮಂದಿಗೆ ಉದ್ಯೋಗ ದೊರಕಲಿದೆ ಎಂದು ಅವರು ಹೇಳಿದರು.ಚೀನಾ ಜತೆಗೂ ವ್ಯವಹಾರ: ನವೆಂಬರ್‌ನಲ್ಲಿ ಭಾರತದೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಈ ವಾರ ಚೀನಾದೊಂದಿಗೆ ಸಹ ಅಮೆರಿಕ ಹಲವು ವ್ಯವಹಾರಗಳಿಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡಿದ್ದು, ಇದರಿಂದ ಅಮೆರಿಕದ ರಫ್ತು ಪ್ರಮಾಣ ಹೆಚ್ಚಿ ಉದ್ಯೋಗ ಅವಕಾಶ ಹೆಚ್ಚಲಿದೆ ಎಂದು ಒಬಾಮ ಅವರು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ತಿಳಿಸಿದ್ದಾರೆ.ಚೀನಾಕ್ಕೆ ಅಮೆರಿಕದಿಂದ ವರ್ಷಕ್ಕೆ 100 ಶತಕೋಟಿ ಡಾಲರ್‌ಗೂ ಅಧಿಕ ಮೊತ್ತದ ಸರಕು ಮತ್ತು ಸೇವೆಗಳನ್ನು ರಫ್ತು ಮಾಡಲು ಒಪ್ಪಂದ ಮಾಡಲಾಗಿದೆ. ಈ ಮೊದಲಿದ್ದ ಪ್ರಮಾಣಕ್ಕಿಂತ ಇದು 45 ಶತಕೋಟಿ ಡಾಲರ್‌ನಷ್ಟು ಅಧಿಕವಾಗುತ್ತದೆ. ಇದರಿಂದ 2.35 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಅವರು ಹೇಳಿದರು.
  ಗಾಂಧಿ ಸ್ಮಾರಕ ಕಟ್ಟಡದ ಪುನರ್‌ನಿರ್ಮಾಣ

ಸಿಂಗಪುರ  (ಪಿಟಿಐ): ಇಲ್ಲಿ ಪುನರ್‌ನಿರ್ಮಾಣಗೊಂಡ  ಮಹಾತ್ಮಾ ಗಾಂಧಿ ಅವರ ಸ್ಮಾರಕ ಕಟ್ಟಡವನ್ನು ಭಾನುವಾರ ಉದ್ಘಾಟಿಸಲಾಯಿತು.2009ರಲ್ಲಿ ಹಿಂದಿ ಸೊಸೈಟಿ  ಈ ಸ್ಮಾರಕದ  ಜೀರ್ಣೋದ್ಧಾರ ಕಾರ್ಯವನ್ನು ಕೈಗೊಂಡಿತ್ತು.  1953 ಏಪ್ರಿಲ್ 24ರಂದು ಆರಂಭಗೊಂಡ   ಈ ಕಟ್ಟಡದ  ಗ್ರಂಥಾಲಯದಲ್ಲಿ ಗಾಂಧೀಜಿಯ ಬದುಕು ಮತ್ತು ಕಾರ್ಯಗಳ ಬಗ್ಗೆ  ಹಿಂದಿ, ಇಂಗ್ಲಿಷ್, ತಮಿಳು ಹಾಗೂ ಚೀನಾ ಭಾಷೆಗಳ ಪುಸ್ತಕಗಳನ್ನು ಹೊಂದಿದೆ. ಈ ಕಟ್ಟಡದಲ್ಲಿ  ಹಿಂದಿ ಸೊಸೈಟಿಯ ಕಚೇರಿ, ತರಗತಿ ಕೊಠಡಿ ಹಾಗೂ ಇತರ  ವಿವಿಧ ಕಾರ್ಯಕ್ರಮಗಳ ಸಭಾಂಗಣವನ್ನು ಬಳಸಿಕೊಳ್ಳಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry