ಸೋಮವಾರ, ಮಾರ್ಚ್ 8, 2021
24 °C

ಉದ್ಯೋಗ ಅವಕಾಶ ಅಲ್ಲಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉದ್ಯೋಗ ಅವಕಾಶ ಅಲ್ಲಲ್ಲಿ

ವಿಶಾಖಪಟ್ಟಣ ಸ್ಟೀಲ್‌ ಪ್ಲಾಂಟ್‌

ವಿಎಸ್‌ಪಿಯಲ್ಲಿ 366 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15/01/2016.

ಹುದ್ದೆ ಹೆಸರು: ಜೂನಿಯರ್‌ ಟ್ರೈನಿ (ಮೆಕಾನಿಕಲ್‌: 236 ಹುದ್ದೆ, ಎಲೆಕ್ಟ್ರಿಕಲ್: 110, ಇನ್‌ಸ್ಟ್ರುಮೆಂಟೇಷನ್‌: 20 ಹುದ್ದೆ).

ವೇತನ ಶ್ರೇಣಿ: ರೂ. 16800ರಿಂದ 24110 (ತರಬೇತಿ ಅವಧಿಯಲ್ಲಿ ಸ್ಟೈಪೆಂಡ್: ರೂ. 12,200)

ವಿದ್ಯಾರ್ಹತೆ: ಎಸ್‌ಎಸ್‌ಸಿ ಹಾಗೂ ಸಂಬಂಧಪಟ್ಟ ಟ್ರೇಡ್‌ಗಳಲ್ಲಿ ಐಐಟಿ/ಡಿಪ್ಲೊಮಾ ಇನ್ ಎಂಜಿನಿಯರ್‌ (ಶೇ 60 ಅಂಕಗಳೊಂದಿಗೆ).

ವಯೋಮಿತಿ: 27ವರ್ಷ ದಾಟಿರಬಾರದು. ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಅರ್ಜಿ ಶುಲ್ಕ: ರೂ. 300.

ಹೆಚ್ಚಿನ ಮಾಹಿತಿಗೆ www.vizagsteel.comಕೇಂದ್ರ ನಾಗರಿಕ ಸೇವಾ ಆಯೋಗ

ಯು.ಪಿ.ಎಸ್‌.ಸಿಯು 375 ಹುದ್ದೆಗಳನ್ನು ಭರ್ತಿ ಮಾಡಲು 17/4/2016ರಂದು ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿ ಹಾಗೂ ನೇವಲ್‌ ಅಕಾಡೆಮಿ ಎಕ್ಸಾಮಿನೇಷನ್‌ ನಡೆಸಲಿದ್ದು ಅದಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29/01/2016.ಹುದ್ದೆ ವಿವರ: 1) ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿ: 320 ಹುದ್ದೆ, 2) ನ್ಯಾಷನಲ್ ನೇವಲ್‌ ಅಕಾಡೆಮಿ: 55 ಹುದ್ದೆ (10+2 ಎಂಟ್ರಿ ಸ್ಕೀಮ್‌)

ವಿದ್ಯಾರ್ಹತೆ: 12ನೇ ತರಗತಿ ಉತ್ತೀರ್ಣ (10+2 ಮಾದರಿ). ವಯೋಮಿತಿ: 1997, ಜುಲೈ 2 ಹಾಗೂ 2000, ಜುಲೈ1ರ ನಡುವೆ ಜನಿಸಿರಬೇಕು.

ಅರ್ಜಿ ಶುಲ್ಕ: ರೂ. 100.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ.

* ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ.

ಹೆಚ್ಚಿನ ಮಾಹಿತಿಗೆ www.upsconline.nic.inಆರ್‌ಆರ್‌ಸಿ ಹುಬ್ಬಳ್ಳಿ

ರೈಲ್ವೆ ರಿಕ್ರೂಟ್‌ಮೆಂಟ್‌ ಸೆಲ್‌, ಹುಬ್ಬಳ್ಳಿಯಲ್ಲಿ 46 ಹುದ್ದೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 01/02/2016.ಹುದ್ದೆ ವಿವರ: ವಲಯ ರೈಲ್ವೆ ಕ್ರೀಡಾ ಕೋಟಾದಡಿ (ಗುಂಪು ಸಿ ಹಾಗೂ ಡಿ).

ವೇತನ ಶ್ರೇಣಿ: ರೂ. 5200ರಿಂದ 20200.

ವಿದ್ಯಾರ್ಹತೆ: 12ನೇ ತರಗತಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ಅಥವಾ ಮೆಟ್ರಿಕುಲೇಷನ್‌ ಹಾಗೂ ಐಟಿಐ ಹಾಗೂ ಕ್ರೀಡಾಕೂಟಗಳಲ್ಲಿ ಸಾಧನೆ

ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ.

ಆಯ್ಕೆ ವಿಧಾನ: ಕ್ರೀಡಾ ಸಾಮರ್ಥ್ಯ ಪರೀಕ್ಷೆ.

ಅರ್ಜಿ ಶುಲ್ಕ: ರೂ. 100.

ವಿಳಾಸ ಹಾಗೂ ಹೆಚ್ಚಿನ ಮಾಹಿತಿಗೆ www.rrchubli.inವಿಶಾಖಪಟ್ಟಣ ಸ್ಟೀಲ್‌ ಪ್ಲಾಂಟ್‌

ವಿಎಸ್‌ಪಿಯಲ್ಲಿ 48 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20/01/2016.

ಹುದ್ದೆ ಹೆಸರು: 1) ಮ್ಯಾನೇಜ್‌ಮೆಂಟ್‌ ಟ್ರೈನಿ (ಟೆಕ್ನಿಕಲ್): 45 ಹುದ್ದೆ, ವಯೋಮಿತಿ: 37 ವರ್ಷ ದಾಟಿರಬಾರದು. 2) ಜೂನಿಯರ್‌ ಮೆಡಿಕಲ್ ಆಫೀಸರ್‌: 3 ಹುದ್ದೆ. ವಯೋಮಿತಿ: 40 ವರ್ಷ ದಾಟಿರಬಾರದು.

ವೇತನ ಶ್ರೇಣಿ: ರೂ. 20600ರಿಂದ 46500.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

ವಿಳಾಸ: ಸೀನಿಯರ್ ಮ್ಯಾನೇಜ್‌ಮೆಂಟ್‌ (ಎಚ್‌ಆರ್‌)– ರಿಕ್ರೂಟ್‌ಮೆಂಟ್‌, ಕೊಠಡಿ ಸಂಖ್ಯೆ 232, ಮುಖ್ಯ ಆಡಳಿತ ಕಚೇರಿ, ರಾಷ್ಟ್ರೀಯ ಇಸ್ಪತ್ ನಿಗಮ ಲಿಮಿಟೆಡ್‌, ವಿಶಾಖಪಟ್ಟಣ ಸ್ಟೀಲ್‌ ಪ್ಲಾಂಟ್‌, ವಿಶಾಖಪಟ್ಟಣ: 530031

ಹೆಚ್ಚಿನ ಮಾಹಿತಿಗೆ www.vizagsteel.comಹೆವಿ ಎಂಜಿನಿಯರಿಂಗ್‌ ಕಾರ್ಪೊರೇಷನ್‌

ಎಚ್‌ಇಸಿನಲ್ಲಿ 250 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19/01/2016.ಹುದ್ದೆ ಹೆಸರು: ಟೆಕ್ನಿಕಲ್ ವರ್ಕರ್ಸ್‌

ವಿದ್ಯಾರ್ಹತೆ: 10ನೇ ತರಗತಿ ಉತ್ತೀರ್ಣ ಅಥವಾ ಐಐಟಿ. ವಯೋಮಿತಿ: 30ವರ್ಷ ದಾಟಿರಬಾರದು. ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಮತ್ತು ಟ್ರೇಡ್‌ ಟೆಸ್ಟ್‌

ಅರ್ಜಿ ಶುಲ್ಕ: ರೂ. 800.

ಹೆಚ್ಚಿನ ಮಾಹಿತಿಗೆ http://hecltd.com/ಏರ್‌ ಇಂಡಿಯಾ ಲಿಮಿಟೆಡ್‌

534 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31/01/2016.ಹುದ್ದೆ ಹೆಸರು: ಪೈಲಟ್‌. ಸ್ಟೈಪೆಂಡ್‌: ರೂ 25 ಸಾವಿರ. ವಿದ್ಯಾರ್ಹತೆ: 10+2. ವಯೋಮಿತಿ: 35 ವರ್ಷ ದಾಟಿರಬಾರದು.

ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 3,000.

ಆಯ್ಕೆ ವಿಧಾನ: ಸೈಕೋಮೆಟ್ರಿಕ್ ಪರೀಕ್ಷೆ, ಸಿಮ್ಯೂಲೇಟರ್‌ ಪ್ರೊಫಿಸಿಯೆನ್ಸಿ ಅಸೆಸ್‌ಮೆಂಟ್‌ ಚೆಕ್‌

ವಿಳಾಸ: ಜನರಲ್‌ ಮ್ಯಾನೇಜರ್‌ (ಪರ್ಸೊನೆಲ್‌), ಏರ್‌ ಇಂಡಿಯಾ ಲಿಮಿಟೆಡ್‌, ಹೆಡ್‌ಕ್ವಾರ್ಟರ್ಸ್‌, ಏರ್‌ಲೈನ್ಸ್‌ ಹೌಸ್‌, 113, ಗುರುದ್ವಾರ ರಕಬ್‌ ಗಂಜ್ ರಸ್ತೆ, ನವದೆಹಲಿ: 110001

ಹೆಚ್ಚಿನ ಮಾಹಿತಿಗೆ www.airindia.in

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.