ಶುಕ್ರವಾರ, ಜೂನ್ 25, 2021
25 °C

ಉದ್ಯೋಗ ಖಾತರಿ ಕಾಮಗಾರಿ ಕಳಪೆ ಆರೋಪ ತಾ.ಪಂ.ಸದಸ್ಯರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡಿರುವ ಕೆರೆ ಹೂಳೆತ್ತುವುದು ಮತ್ತು ಶಾಲಾ ಮೈದಾನ ಸಮತಟ್ಟು ಮಾಡುವ ಕಾಮಗಾರಿ ತೃಪ್ತಿದಾಯಕವಾಗಿಲ್ಲ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾ.ಪಂ. ಅಧ್ಯಕ್ಷ ಮಂಜುನಾಥ ಅಧ್ಯಕ್ಷತೆಯಲ್ಲಿ  ಸೋಮವಾರ ನಡೆದ ಸರ್ವ ಸದಸ್ಯರ ವಿಶೇಷ ಸಭೆಯಲ್ಲಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಸದಸ್ಯ ಪುಟ್ಟೇಗೌಡ `ಕೆರೆಯಲ್ಲಿ ಯಾರೋ ಹೂಳು ತೆಗೆದು ಗುಂಡಿ ಮಾಡಿದ~  ಕೆಲಸಕ್ಕೆ1.50ಲಕ್ಷ ರೂಪಾಯಿ  ಬಿಲ್ ಮಾಡಲಾಗಿದೆ. ಕಣ್ಣೆದುರಿಗೆ ಅನ್ಯಾಯ ನಡೆಯುತ್ತಿದ್ದರೂ ಸುಮ್ಮನೆ  ಕೂರುವಂತಾಗಿದೆ. ಯಾವುದೇ ರೀತಿ, ನೀತಿ ಇಲ್ಲವಾಗಿದೆ. `ನಾವು ಗುಂಡಿ ತೋರಿಸುತ್ತೇವೆ ನಮಗೂ ಬಿಲ್ ಮಾಡಿಕೊಡಿ~ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕುಡಿಯುವ ನೀರಿನ ಕಾಮಗಾರಿಯಲ್ಲಿ ಮುಕ್ಕಾಲು ಅಡಿ ಚರಂಡಿ ಮಾಡಿ ಪೈಪ್ ಹಾಕಲಾಗಿದೆ. ಕೇಳಿದರೆ, ಎಂಜಿನಿಯರ್ ಮತ್ತು ಗುತ್ತಿಗೆದಾರರು ಇಂದು ಅಥವಾ ನಾಳೆ ಸರಿಪಡಿಸುತ್ತೇವೆ ಎಂಬ ಸಬೂಬು ಹೇಳುತ್ತಿದ್ದಾರೆಂದು ಅಧ್ಯಕ್ಷರೇ ಅಸಹಾಯಕತೆ ವ್ಯಕ್ತಪಡಿಸಿದರು.ಕೆರಹೂಳೆತ್ತುವುದು ಮತ್ತು ಶಾಲಾ ಮೈದಾನ ಮಟ್ಟ ಮಾಡುವ ಕಾಮಗಾರಿ ಕಳಪೆಯಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ ಎಂದು ಉದ್ಯೋಗ ಖಾತರಿ ಯೋಜನೆ ಅಧಿಕಾರಿ ಸದಾಶಿವ ಸಭೆಗೆ ತಿಳಿಸಿದರು.

ಮುಂದಿನ ದಿನಗಳಲ್ಲಿ ಶಾಲಾ ಮೈದಾನ ಮಟ್ಟಮಾಡುವುದು ಮತ್ತು ಕಾಂಪೌಂಡ್‌ನಿರ್ಮಿಸು ವುದಕ್ಕೆ ಉದ್ಯೋಗ ಖಾತ್ರಿ ಯೋಜನೆಯಡಿ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.ತಾಲ್ಲೂಕು ಪಂಚಾಯಿತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಇರುವ 52.62ಲಕ್ಷ ರೂಪಾಯಿ ಅನುದಾನವನ್ನು ಮಾರ್ಚ್ ಅಂತ್ಯಕ್ಕೆ ಖರ್ಚು ಮಾ ಬೇಕು. ಇಲ್ಲವಾದರೆ ಹಣ ವಾಪಸ್ ಹೋಗುತ್ತದೆ. ಈ ಕುರಿತು ಅಧಿಕಾರಿಗಳು ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರು ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾ ಧಿಕಾರಿ ಮೃತ್ಯುಂಜಯ  ಹೇಳಿದರು.ತಾಲ್ಲೂಕು ಪಂಚಾಯಿತಿಗೆ ಸಿಗುವುದೇ ಅಲ್ಪಸ್ವಲ್ಪ ಹಣ ಅದನ್ನು ಕಳೆದುಕೊಳ್ಳುವುದು ಸರಿಯಲ್ಲ. ಕಾಮಗಾರಿ ನಿರ್ವಹಿಸಲು ಈಗ ಗುತ್ತಿಗೆದಾರರು ಮುಂದೆ ಬರುತ್ತಿಲ್ಲ. ಲೋಕಸಭಾ ಉಪ ಚುನಾವಣೆ ಬಂದಿದ್ದರಿಂದ ಕಾಮಗಾರಿ ವೇಗ ಸ್ವಲ್ಪ ಕುಂಠಿತ ಗೊಳ್ಳ ಲು ಕಾರಣವಾಯಿತು ಎಂದು ಅಧ್ಯಕ್ಷರು  ತಿಳಿಸಿದರು.ತಾಲ್ಲೂಕು ಪಂಚಾಯಿತಿಯಲ್ಲಿ ಲಭ್ಯವಿರುದ ಅನುದಾನ ಬಳಕೆ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಸೋಮವಾರ ಚರ್ಚೆ ನಡೆಸುವುದಾಗಿ ಅಧ್ಯಕ್ಷರು ಹೇಳಿದರು.ಪ್ರತಿಸಭೆಯಲ್ಲಿ ಜಲಾನಯನ ಇಲಾಖೆಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ಕೇಳಿದರೆ ಕೊಡುತ್ತಿಲ್ಲ. ಮಾಹಿತಿಗೆ ಅಪ್ಪ, ಅಣ್ಣ ಮಾಹಿತಿ ಕೇಳಿದರು ಇದುವರೆಗೂ ನೀಡಿಲ್ಲ. ಇನ್ಯಾವರೀತಿಯಲ್ಲಿ ಮಾಹಿತಿ ಕೇಳಬೇಕು ಎಂದು ಮಾಜಿ ಅಧ್ಯಕ್ಷ  ಕನಕರಾಜ್‌ಅರಸ್ ಅಸಮಾಧಾನ ಹೊರಹಾಕಿದರು.ಇಂದಿನ ವಿಶೇಷ ಸಭೆಗೆ ಅಧ್ಯಕ್ಷರು, ಉಪಾಧ್ಯಕ್ಷೆ ರೀನುಶಿವರಾಜ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಅಂಬಿಕಾ ಶಿವಕುಮಾರ್ ಸೇರಿದಂತೆ ಕೇವಲ 12ಮಂದಿ ಸದಸ್ಯರು ಮಾತ್ರ ಭಾಗವಹಿಸಿದ್ದರು. ಸಭೆಗೆಬಂದ ಕೆಲವೇ ಅಧಿಕಾರಿಗಳು  ಮಂಜೂರಾತಿ ಪಡೆದು ಹಿಂದಿರುಗಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.