ಉದ್ಯೋಗ ಖಾತರಿ ಕೂಲಿ ಹಣ ವಿವಾದ: ಲಾಠಿ ಪ್ರಹಾರ

7

ಉದ್ಯೋಗ ಖಾತರಿ ಕೂಲಿ ಹಣ ವಿವಾದ: ಲಾಠಿ ಪ್ರಹಾರ

Published:
Updated:
ಉದ್ಯೋಗ ಖಾತರಿ ಕೂಲಿ ಹಣ ವಿವಾದ: ಲಾಠಿ ಪ್ರಹಾರ

ಕೊಪ್ಪಳ: ಉದ್ಯೋಗ ಖಾತರಿ ಯೋಜನೆಯ ಕೂಲಿಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಲಾಠಿ ಪ್ರಹಾರ ಮಾಡಿದ ಪ್ರಕರಣದ ತನಿಖೆಯ ಜವಾಬ್ದಾರಿ ಹೊತ್ತಿರುವ ಈಶಾನ್ಯ ವಲಯ ಐ.ಜಿ.ಪಿ ಗಗನ್‌ದೀಪ್ ಗುರುವಾರ ಇಲ್ಲಿಗೆ ಆಗಮಿಸಿ ಪರಿಶೀಲಿಸಿದರು.ಸಂಜೆ ಆಗಮಿಸಿದ ಅವರು ಲಾಠಿ ಪ್ರಹಾರ ನಡೆದ ತಾಲ್ಲೂಕು ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

 ನಂತರ ಕಚೇರಿಯಲ್ಲಿ ಸಿಬ್ಬಂದಿಯೊಂದಿಗೆ ಮಾತನಾಡಿ, ಅಂದಿನ ಘಟನೆ ಕುರಿತಂತೆ ಮಾಹಿತಿ ಪಡೆದರು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.ನಂತರ ಅವರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸಹ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಹಿತಿ ಸಂಗ್ರಹಿಸಿ, ತನಿಖೆಯನ್ನು ಚುರುಕುಗೊಳಿಸಲಿದ್ದಾರೆ ಎಂದೂ ಇವೇ ಮೂಲಗಳು ಸ್ಪಷ್ಟಪಡಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry