ಭಾನುವಾರ, ಜೂನ್ 13, 2021
25 °C

ಉದ್ಯೋಗ ಖಾತರಿ; ಸರ್ಕಾರ ವಿಫಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಸಂಸದ ಹಾಗೂ ಯೋಜನೆಯ ರಾಷ್ಟ್ರೀಯ ಸಲಹಾ ಸಮಿತಿ ಸದಸ್ಯ ದ್ರುವ ನಾರಾಯಣ್ ತಿಳಿಸಿದರು.ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂಧ್ರಪ್ರದೇಶ, ರಾಜಸ್ತಾನ ಈ ಯೋಜನೆ ಸಮಪರ್ಕವಾಗಿ ಬಳಕೆ ಮಾಡಿಕೊಂಡರೆ ಕರ್ನಾಟಕ ಫೆ. ಅಂತ್ಯಕ್ಕೆ 1800 ಕೋಟಿ ರೂ. ಖರ್ಚು ಮಾಡಿದೆ. 53.58ಕೋಟಿ ಖರ್ಚು ಮಾಡುವ ಬದಲು 46.21ಕೋಟಿ ರೂ. ವೆಚ್ಚ ಮಾಡಿ, ಶೇ. 82.81ರಷ್ಟು ಪ್ರಗತಿ ಸಾಧಿಸಿದೆ ಎಂದು ಹೇಳಿದರು.ಗ್ರಾಮ ಪಂಚಾಯಿತಿಗೆ ರಾಜ್ಯ ಸರ್ಕಾರ ಬಿಡಿಗಾಸು ಬಿಡುಗಡೆ ಮಾಡಿಲ್ಲ. ಉದ್ಯೋಗ ಖಾತರಿ ಇಲ್ಲದಿದ್ದರೆ ಬಾಗಿಲು ಮುಚ್ಚುವ ಪರಿಸ್ಥಿತಿ ಬರುತ್ತಿತ್ತು. ಚಿಕ್ಕಮಗಳೂರು ತಾಲ್ಲೂಕಿನಲ್ಲಿ 12.74ಕೋಟಿ ರೂ. ಖರ್ಚು ಮಾಡಬೇಕಾಗಿತ್ತು. ಅದಕ್ಕಿಂತ ಹೆಚ್ಚಾಗಿ 14.2 ಕೋಟಿ ರೂ. ಕಾಮಗಾರಿ ನಿರ್ವಹಿಸಲಾಗಿದೆ. ಕಡೂರು ತಾಲ್ಲೂಕಿನಲ್ಲಿ 11.81ಕೋಟಿ ರೂ. ಬದಲಾಗಿ ಕೇವಲ 8.9ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ಅರಣ್ಯ ಹಕ್ಕು ಕಾಯ್ದೆ ಜಾರಿಗೊಂಡಿದ್ದರಿಂದ ಆಂಧ್ರದಲ್ಲಿ 3 ಲಕ್ಷ ಹಕ್ಕುಪತ್ರವನ್ನು ವಿತರಿಸಿದರೆ, ಕರ್ನಾಟಕ ಕೇವಲ 6 ಸಾವಿರ ಹಕ್ಕು ಪತ್ರ ನೀಡಿದೆ. ಕೇಂದ್ರ ಸರ್ಕಾರ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ಯಡಿ ಹೆಣ್ಣು ಮಕ್ಕಳಿಗೆ ಅನುಕೂಲವಾ ಗುವಂತೆ ಜನನಿ ಶಿಶು ಸುರಕ್ಷಾ ಯೋಜನೆ ಜಾರಿಗೊಳಿಸಲಾಗಿದೆ ಎಂದು ಹೇಳಿದರು. ವಸತಿ ಯೋಜನೆಗೆ ಒತ್ತು ನೀಡಿದೆ. ವಿದ್ಯಾರ್ಥಿ ವೇತನ ಹೆಚ್ಚಳಗೊಳಿಸಲಾಗಿದೆ. ಬ್ಲಾಕ್ ಲಾಗ್ ಹುದ್ದೆಗಳಿಗೆ ಆದ್ಯತೆ ನೀಡಲಾಗಿದೆ ಎಂದರು.ಚುನಾವಣೆಗೆ ಒಂದು ವರ್ಷ ಬಾಕಿ ಇದ್ದರೂ ಯಾವಾಗ ಬೇಕಾದರೂ ಬರಬಹುದು. ಈ ಚುನಾವಣೆ ಎದುರಿಸಲು ಪಕ್ಷ ಸನ್ನದ್ಧವಾಗಿದೆ ಎಂದರು. ಕಾಫಿ ಮಂಡಳಿ ಸದಸ್ಯ ವಿಜಯ್, ಮಂಜುನಾಥ್, ಆನಂದ, ಶ್ರೀಕಂಠ, ರಾಜಣ್ಣ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.