ಬುಧವಾರ, ಜೂನ್ 16, 2021
21 °C

ಉದ್ಯೋಗ ಖಾತ್ರಿ ಯೋಜನೆ...ಕೂಲಿ ವಿಳಂಬ ಪ್ರತಿಭಟನೆ...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಕ್ಷ್ಮೇಶ್ವರ: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದುಡಿದ ಕಾರ್ಮಿಕರಿಗೆ ಕೂಲಿ ನೀಡು ವಲ್ಲಿ ವಿಳಂಬ ನೀತಿ ಅನು ಸರಿಸುತ್ತಿರುವ ಅಧಿಕಾರಿಗಳ ಕಾರ್ಯ ವೈಖರಿ ಖಂಡಿಸಿ  ರಾಮಗಿರಿ ಗ್ರಾಮದ ಕೂಲಿಕಾರರು ಸಿದ್ದಣ್ಣ ಕಾಳೆ  ನೇತೃತ್ವ ದಲ್ಲಿ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.2010-11 ಹಾಗೂ 2011-12ನೇ ಸಾಲಿನಲ್ಲಿ ಯೋಜನೆ ಯಡಿ ಕೃಷಿ ಕೂಲಿಕಾರರು ರೈತರ ಜಮೀನುಗಳಲ್ಲಿ ಕೃಷಿಹೊಂಡ ಹಾಗೂ ಬದುವು ನಿರ್ಮಾಣ ಕಾಮಗಾರಿ ಪೂರೈಸಿದ್ದಾರೆ. ಆದರೆ ಇದುವರೆಗೂ ಕೂಲಿ ನೀಡಿಲ್ಲ ಎಂದು ಪ್ರತಿಭಟನಾ ಕಾರರು ಆರೋಪಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದಣ್ಣ ಕಾಳೆ `2010-11ನೇ ಸಾಲಿನಲ್ಲಿ ನಿರ್ಮಿಸಿರುವ 19 ಕೃಷಿ ಹೊಂಡಗಳ ಕೂಲಿ ಹಾಗೂ ಬದುವು ನಿರ್ಮಾಣ ಕೆಲಸದ ಕೂಲಿ ಬಾಕಿ ಇದೆ. ದುಡಿದ ಕೆಲಸಕ್ಕೆ ತಕ್ಕ ಕೂಲಿ ಕೇಳಿದರೂ ಪಂಚಾಯಿತಿ ಅಧಿಕಾರಿಗಳು ಇಲ್ಲ ಸಲ್ಲದ ನೆಪ ಹೇಳುತ್ತಿದ್ದಾರೆ. ಹೀಗಾಗಿ ಕೂಲಿ ದೊರೆಯದೆ ಕಾರ್ಮಿಕರು ಪರದಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಗ್ರಾಮದಲ್ಲಿ ರೈತರ ಕೆಲಸಕ್ಕೆ ಬೇಡಿಕೆ ಇದೆ. ಆದರೆ ದುಡಿಯುವವರಿಗೆ ಸರಿಯಾಗಿ ಕೆಲಸ ನೀಡುವಲ್ಲಿ ವಿಳಂಬ ವಾಗುತ್ತಿದ್ದು ಯೋಜನೆಯಡಿ ಬಿಡು ಗಡೆ ಆದ ಅನುದಾನ ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ ಎಂದರು.ಸ್ಥಳಕ್ಕೆ ಭೇಡಿ ನೀಡಿದ್ದ ತಾಲ್ಲೂಕು ಪಂಚಾತಿ ಸಹಾಯಕ ನಿರ್ದೇಶಕ ಟಿ.ವಿ. ಹಕ್ಕಾಪಿಕ್ಕಿ ಹಾಗೂ ಯೋಜನಾ ಧಿಕಾರಿ ಎಂ.ಸಿ. ಉಪ್ಪಿನ ಅವರು ಪರಿಶೀಲನೆ ನಡೆಸಿ ಕಾರ್ಮಿಕರು ಕೆಲಸ ಮಾಡಿರುವ ಬಗ್ಗೆ ಪರಿಶೀಲಿಸಿ ಹೆಚ್ಚುವರಿ ಕ್ರಿಯಾಯೋಜನೆ ತಯಾರಿಸಿ ಸಲ್ಲಿಸುವಂತೆ ಪಿಡಿಒ ವೈ.ಎನ್. ಲಕ್ಕುಂಡಿ ಅವರಿಗೆ ಸೂಚಿಸಿದರು.ಉದ್ಯೋಗ ಖಾತ್ರಿ ಯೋಜನೆಯಡಿ ಬಿಡುಗಡೆ ಆದ ಅನುದಾನದಲ್ಲಿ ಶೇ.10 ರಸ್ತೆ ನಿರ್ಮಾಣಕ್ಕೆ, ಶೇ.20 ಅರಣ್ಯೀ ಕರಣಕ್ಕೆ ಮೀಸಲಾಗಿದ್ದು ಉಳಿದ ಶೇ.70ರಲ್ಲಿ ವಿವಿಧ ಕಾಮಗಾರಿ ಕೈಗೊಳ್ಳಲು ಅವಕಾಶ ಇದ್ದು ಕಾರ್ಮಿ ಕರು ಇದರ ಬಗ್ಗೆ ಅರಿವು ಹೊಂದು ವುದು ಅಗತ್ಯ  ಎಂದು ಹೇಳಿದರು.ಫಕ್ಕೀರಪ್ಪ ಕಾಳೆ, ಪರಶುರಾಮ ಲಕ್ಕಣ್ಣವರ, ಯಲ್ಲಪ್ಪ ಬೆಟಗೇರಿ, ಬಸವಂತಪ್ಪ ಬೆಟಗೇರಿ, ಸಿದ್ದಪ್ಪ ಕಾಳೆ, ನಾಗಪ್ಪ ಬೆಟಗೇರಿ, ದೇವಪ್ಪ ಕಾಳೆ, ಮುಕ್ತುಮ್‌ಸಾಬ್ ತೆಗ್ಗಿನಮನಿ, ಸಣ್ಣಯಲ್ಲಪ್ಪ ಬೆಟಗೇರಿ, ದ್ಯಾಮಣ್ಣ ಶೆಟ್ಟಪ್ಪನವರ, ಮಲ್ಲಪ್ಪ ಗೊಜಗೊಜಿ ಸೇರಿದಂತೆ ಮತ್ತಿತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.