ಶನಿವಾರ, ಜೂನ್ 19, 2021
23 °C

ಉದ್ಯೋಗ ಖಾತ್ರಿ ಯೋಜನೆ: ತಲುಪದ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಡಿಬಂಡೆ: ತಾಲ್ಲೂಕಿನ ಏಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಸಾಲಿನಲ್ಲಿ ನಡೆಸಿದ ಕಾಮಗಾರಿಗಳಿಗೆ ಮಾಡಲಾದ ವೆಚ್ಚದ ಬಗ್ಗೆ ಬುಧ ವಾರ ಇಲ್ಲಿನ ತಾಲ್ಲೂಕು ಪಂಚಾಯಿತಿ ಸರ್ವ ಸದಸ್ಯರ ಸಭೆಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಎಲ್ಲ ಸದಸ್ಯರೂ ಅತೃಪ್ತಿ ವ್ಯಕ್ತಪಡಿಸಿದರು.12ನೇ ಹಣಕಾಸಿನ ಕ್ರಿಯಾ ಯೋಜನೆ ಕುರಿತು ಸಲ್ಲಿಸಿದ್ದ ಪ್ರಸ್ತಾವನೆ ಸರ್ಕಾರದ ಮಾರ್ಗದರ್ಶಿ ಅಂಶಗಳಿಗೆ ಪೂರಕವಾಗಿಲ್ಲ ಎಂಬ ಕಾರಣಕ್ಕೆ ವಾಪಸ್ ಬಂದಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋ ಗ ಖಾತ್ರಿ ಯೋಜನೆ ಕಳೆದ ಸಾಲಿನಲ್ಲಿ ತಾಲ್ಲೂಕಿನ ಏಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವ ರೀತಿ ಅನುಷ್ಠಾನಗೊಂಡಿದೆ.

ಅದಕ್ಕೆ ಆದ ಖರ್ಚು ವೆಚ್ಚದ ಬಗ್ಗೆ ಕಾರ್ಯನಿರ್ವಹಣಾಧಿಕಾರಿ ಸಭೆಗೆ ವಿವರ ನೀಡಲು ಮುಂದಾದ ವೇಳೆ ವಿಷಯ ಬಹಿರಂಗ ಗೊಂಡಿತು.ಉದ್ಯೋಗ ಖಾತ್ರಿ ಯೋಜನೆಯಡಿ ಕಳೆದ ಸಾಲಿನಲ್ಲಿ 3.33ಕೋಟಿ ಎಂದು ಗುರಿ ನಿಗದಿ ಇತ್ತು. ಈ ಪೈಕಿ 91 ಲಕ್ಷ ವೆಚ್ಚ ಮಾಡಲಾಗಿದೆ. ಬೀಚಗಾನಹಳ್ಳಿ ಗ್ರಾ.ಪಂ.ನಲ್ಲಿ 17.53 ಲಕ್ಷ, ತಿರುಮಣಿ ಗ್ರಾ.ಪಂ.ನಲ್ಲಿ 2.12 ಲಕ್ಷ, ಹಂಪಸಂದ್ರ ಗ್ರಾ.ಪಂ.ನಲ್ಲಿ 15.48 ಲಕ್ಷ, ವರ್ಲಕೊಂಡದಲ್ಲಿ 9.73 ಲಕ್ಷ, ಸೋಮೇನಹಳ್ಳಿಯಲ್ಲಿ 10 ಲಕ್ಷ, ಉಲ್ಲೋಡಿನಲ್ಲಿ 23.74 ಲಕ್ಷ, ಎಲ್ಲೋಡಿನಲ್ಲಿ 12.50 ಲಕ್ಷದಷ್ಟು ಅನುದಾನ ಖರ್ಚಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.ವಿವರಗಳನ್ನು ಕೇಳುತ್ತಿದ್ದಂತೆ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ನಾರಾಯಣಸ್ವಾಮಿ ಹಾಗೂ ಸದಸ್ಯ ರಾದ ಮುನಿರೆಡ್ಡಿ, ಆದಿನಾರಾಯಣರೆಡ್ಡಿ, ಗಂಗಾ ಧರ, ಅಮಲಾ, ಲಕ್ಷ್ಮೀದೇವಮ್ಮ, ನಾಗರತ್ನಮ್ಮ, ದೇವಕುಮಾರ್, ಮಂಜುಳ, ಆನಂ ದಮ್ಮ  ಸೇರಿದಂತೆ ಎಲ್ಲರೂ ಆಕ್ಷೇಪ ಸೂಚಿಸಿದರು.ಕೆಲಸಗಳು ನಡೆದಿರುವುದು ಬಹುಪಾಲು ನಮ್ಮ ಗಮನಕ್ಕೆ ಬಂದಿಲ್ಲ ಈ ಬಗ್ಗೆ ಪರಿಶೀಲನೆ ನಡೆಯಲಿ ಎಂದು ಸದಸ್ಯರು ಒತ್ತಾಯಿಸಿದರು.ಇದಕ್ಕೆ ಉತ್ತರಿಸಿದ ತಾ.ಪಂ. ಕಾರ್ಯ ನಿರ್ವ ಹಣಾಧಿಕಾರಿಗಳು ಎಲ್ಲವೂ ಸರಿಯಾಗಿದೆ.

ನಿಮಗೆ ವಿವರಗಳನ್ನು ಒದಗಿಸಲು ಸಿದ್ಧ ವಾಗಿದ್ದೆನೆ. ಕಂಪ್ಯೂ ಟರ್‌ನಲ್ಲಿ ದಾಖಲಾದ ಅಂಶ ಗಳನ್ನು ತಮಗೆ ನೀಡಲಾಗಿದೆ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.