ಉದ್ಯೋಗ ಖಾತ್ರಿ: ಸದ್ಬಳಕೆಗೆ ಸಲಹೆ

7

ಉದ್ಯೋಗ ಖಾತ್ರಿ: ಸದ್ಬಳಕೆಗೆ ಸಲಹೆ

Published:
Updated:

ದೇವನಹಳ್ಳಿ: `ಕೇಂದ್ರ ಸರ್ಕಾರ ಗ್ರಾಮೀಣ ಜನ ಜೀವನ ಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು~ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಆಂಜನಪ್ಪ ತಿಳಿಸಿದರು.ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೇಂದ್ರೀಯ ಕಾರ್ಮಿಕ ಶಿಕ್ಷಣ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಮಿಕರ ವಿಶೇಷ ತರಬೇೀತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.`ಸಮಾಜದಲ್ಲಿ ಕಾರ್ಮಿಕರ ಬದುಕು ಶೋಚನೀಯವಾಗಿದೆ. ಕೆಲಸಕ್ಕಾಗಿ ಗ್ರಾಮಾಂತರ ಪ್ರದೇಶಗಳಿಂದ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಳಿಯ ಕಾರ್ಮಿಕರಿಗೆ ಕನಿಷ್ಠ 90ದಿನಗಳ ಕೂಲಿಗೆ ಅವಕಾಶ ನೀಡಿದೆ. ಕಾರ್ಮಿಕರು ತಮ್ಮ ಹೆಸರನ್ನು ನೊಂದಾಯಿಸಿಕೊಂಡು ಖಾತ್ರಿಯೋಜನೆಯಲ್ಲಿ  ಸಕ್ರಿಯವಾಗಿ ಭಾಗವಹಿಸಬೇಕು~ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಮಾತನಾಡಿ, `ನರೇಗ ಯೋಜನೆ ನಿರಂತರ ಉದ್ಯೋಗ ಕಲ್ಪಿಸುವ ಗುರಿಯೊಂದಿಗೆ ಅನುಷ್ಠಾನಗೊಂಡಿದೆ. ಆದರೆ ಯಾವುದೇ ಯಂತ್ರಗಳ ಬಳಕೆ ಇಲ್ಲದೆ ಕಾರ್ಮಿಕರ ಶ್ರಮಕ್ಕೆ ಅನುಗುಣವಾಗಿ ಕೂಲಿ ನೀಡಿ ನಡೆಸಲಾಗುತ್ತಿದೆ. ಹೆಣ್ಣು ಮತ್ತು ಗಂಡು ಬೇಧವಿಲ್ಲದೆ ಸಮಾನ ವೇತನ ಪಡೆಯುವ ಯೋಜನೆ ಇದಾಗಿದೆ. ಗ್ರಾಮೀಣ ಪ್ರದೇಶದ ಜನರಲ್ಲಿ ಅರಿವು ಮೂಡಿಸುವ ಕೆಲಸ ತರಬೇತಿದಾರರು ಮಾಡಬೇಕು~ ಎಂದರು.ಅಧ್ಯಕ್ಷತೆವಹಿಸಿ ಮಾತನಾಡಿದ ಕೇಂದ್ರೀಯ ಕಾರ್ಮಿಕ ಶಿಕ್ಷಣ ಮಂಡಳಿ ವಿದ್ಯಾಧಿಕಾರಿ ಎಂ.ಆರ್.ದೇಶಪಾಂಡೆ, `ದೇಶದಲ್ಲಿ ಐದು ಸಾವಿರಕ್ಕೂ ಗ್ರಾಮಗಳಲ್ಲಿ 80ಲಕ್ಷಕ್ಕೂ ಹೆಚ್ಚು ಜನ ಕೆಲಸ ಇಲ್ಲದ ನಿರ್ಗತಿಕರನ್ನು ಖಾತ್ರಿಯೋಜನೆಯಡಿಯಲ್ಲಿ ತರುವ ಉದ್ದೇಶ ಹೊಂದಲಾಗಿದೆ. ಈ ಯೋಜನೆ ಸಮರ್ಪಕವಾಗಿ ಬಳಕೆಯಾಗಬೇಕು~ ಎಂದು ತಿಳಿಸಿದರು.ಪುರಸಭೆ ಮಾಜಿ ಅಧ್ಯಕ್ಷ ಎಸ್.ಲಕ್ಷ್ಮಿ ನಾರಾಯಣಪ್ಪ, ತಾ.ಪಂ.ಸದಸ್ಯೆ ಮಂಜುಳ, ತಾಲ್ಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ರೇಣುಕಮ್ಮ, ಗ್ರಾ.ಪಂ.ಮಾಜಿ ಅಧ್ಯಕ್ಷ ಮಂಜುನಾಥ್ ಇದ್ದರು, ಕೆ.ಎಸ್.ನಾರಾಯಣಸ್ವಾಮಿ ಸ್ವಾಗತಿಸಿ, ಮುನಿಕೃಷ್ಣಪ್ಪ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry