ಭಾನುವಾರ, ಜನವರಿ 19, 2020
26 °C

ಉದ್ಯೋಗ ಖಾತ್ರಿ: ಹಣ ಬಿಡುಗಡೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳ್ಳೇಗಾಲ: ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಅಸಮರ್ಪಕ ದಾಖಲೆ ನಿರ್ವಹಣೆಯಿಂದ 2009-10ನೇ ಸಾಲಿನ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿಯೋಜನೆಯಡಿ ಬರಬೇಕಾದ 24 ಲಕ್ಷ ಹಣವನ್ನು ಬಿಡುಗಡೆಗೆ ಹಿರಿಯ ಅಧಿಕಾರಿಗಳು ಗಮನಹರಿಸಬೇಕು ಎಂದು ತಾ.ಪಂ. ಸದಸ್ಯ ಮುರುಳಿ ಒತ್ತಾಯಿಸಿದರು.ತಾಲ್ಲೂಕಿನ ಅಜ್ಜೀಪುರ ಗ್ರಾಮ ಪಂಚಾಯಿತಿಯಲ್ಲಿ 2012ನೇ ಸಾಲಿನ ಉದ್ಯೋಗ ಖಾತ್ರಿ ಕ್ರಿಯಾಯೋಜನೆ ತಯಾರಿ ಸಂಬಂಧ ನಡೆದ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು.ಪಂಚಾಯಿತಿ ವ್ಯಾಪ್ತಿಯಲ್ಲಿ ಜಲಾನ ಯನ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಸಂಪೂರ್ಣ ವಾಗಿ ವಿಫಲರಾಗಿದ್ದಾರೆ ಎಂದು ದೂರಿದರು. ಗ್ರಾಮದ ಜನತೆ ಪ್ರತಿ ಯೊಬ್ಬರೂ ಕಡ್ಡಾಯವಾಗಿ ಶೌಚಾಲಯ ಹೊಂದಲು ಸರ್ಕಾರದ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳ ಬೇಕು ಎಂದು ಮನವಿ ಮಾಡಿದರು.ಗ್ರಾಮ ಸಭೆಯಲ್ಲಿ 2012- 13ನೇ ಸಾಲಿನ 1.10 ಕೋಟಿ ಕಾಮಗಾರಿಗಳಿಗೆ ಗ್ರಾಮಸಭೆಯಲ್ಲಿ ಕ್ರಿಯಾಯೋಜನೆ ತಯಾರಿಸಲಾಯಿತು.ಗ್ರಾಮ ಸಭೆಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಗೈರುಹಾಜರಿಯಲ್ಲಿ ಸದಸ್ಯ ನಾಗರಾಜೇಗೌಡರ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆ ನಡೆಯಿತು.ನೋಡೆಲ್ ಅಧಿಕಾರಿ ನಿಂಗಶೆಟ್ಟಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮು, ಕಾರ್ಯದರ್ಶಿ ಡಿ. ಸದಾಶಿವಮೂರ್ತಿ, ಗ್ರಾ.ಪಂ. ಸದಸ್ಯರು ಮುಖಂಡರು ಇದ್ದರು.

 

ಪ್ರತಿಕ್ರಿಯಿಸಿ (+)